ಜಿಲ್ಲೆಯಲ್ಲಿ ಅ. 28 ರಂದು ಶಿವಪುರ ಸತ್ಯಾಗ್ರಹ ಸೌಧದಲ್ಲಿ 67 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ:ಹೆಚ್.ಎಲ್. ನಾಗರಾಜು ಬುಧವಾರ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ 67 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೋಟಿ ಕಂಠ ಗಾಯನದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಂಸದೆ ಸುಮಲತಾ ಪರಿಹಾರ ಕೊಡಿಸಿದ್ದು – ಮಳವಳ್ಳಿ ಶಾಸಕ ಅನ್ನದಾನಿ ಕ್ರೆಡಿಟ್ ಗಾಗಿ ಅಪಪ್ರಚಾರ- ಸೋಮು
ಮಂಡ್ಯ ಜಿಲ್ಲೆಯಲ್ಲಿ ಶಿವಪುರ ಸೇರಿದಂತೆ ಇನ್ನಿತರ ಐತಿಹಾಸಿಕ ಸ್ಥಳಗಳಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ಹಮ್ಮಿಕೊಂಡು ಕನ್ನಡ ನಾಡಿಗೆ ಗೌರವ ಸಲ್ಲಿಸಲಾಗುವುದು. ಶಾಲಾ, ಕಾಲೇಜು ವಿದ್ಯಾರ್ಥಿಗಳು ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೊಂದಾಯಿಸಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ. ಜಿಲ್ಲೆಯಲ್ಲಿ 4 ಲಕ್ಷಕ್ಕೂ ಹೆಚ್ಚಿನ ಜನರು ನೊಂದಾಯಿಸುವ ನಿರೀಕ್ಷೆ ಇದೆ ಎಂದರು.
ಸರ್ಕಾರಿ ಕಚೇರಿ, ಪ್ರತಿ ಗ್ರಾಮ, ಕಾರ್ಖಾನೆ, ವಸತಿ, ಬಸ್ ನಿಲ್ದಾಣ, ರೈಲ್ವೆ ಟೇಷನ್ ಸಮುಚ್ಚಯಗಳಲ್ಲಿ ಸ್ವತಃ ಸಮೂಹ ಗಾಯನವನ್ನು ಆಯೋಜಿಸುವ ಮೂಲಕ ಕೈಜೋಡಿಸಿ ಎಂದರು.
ಈ ಬಾರಿಯ 67ನೇ ಕನ್ನಡ ರಾಜ್ಯೋತ್ಸವವನ್ನು ಇನ್ನೂ ಹೆಚ್ಚಿನ ಸಂಭ್ರಮ, ಉತ್ಸಾಹದಿಂದ ನಾಡಿನಾದ್ಯಂತ ಆಚರಿಸುವ ಹಿನ್ನೆಲೆಯಲ್ಲಿ ‘ಕೋಟಿ ಕಂಠ ಗಾಯನ’ವನ್ನು ಆಯೋಜಿಸಲಾಗಿದೆ. ಬೃಹತ್ ವೃಂದಗಳಲ್ಲಿ ಆಯ್ದ 6 ಕನ್ನಡ ಗೀತೆಗಳನ್ನು ಏಕಕಂಠದಲ್ಲಿ ಹಾಡುವುದರ ಮೂಲಕ ಐತಿಹಾಸಿಕ ದಾಖಲೆ ಬರೆಯುವುದರೊಂದಿಗೆ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಸಂಕಲ್ಪ ಮಾಡಲಾಗಿದೆ ಎಂದರು.
ನಾಡಿನಾದ್ಯಂತ ನಡೆಯುವ ಕೋಟಿ ಕಂಠ ಗಾಯನ ಅಭಿಯಾನದಲ್ಲಿ ಪಾಲ್ಗೊಳ್ಳಲು ಮತ್ತು ಸಮೂಹ ಗಾಯನ ಆಯೋಜಿಸಲು ಮೊಬೈಲ್ ಸಂಖ್ಯೆ : 9900534569, 9916832044, 9986837037, 9880442804 kanbh[email protected] [email protected] ಸಂಪರ್ಕಿಸಬಹುದು ಎಂದರು.
ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಇಲಾಖೆ ವತಿಯಿಂದ ಅಭಿನಂದನಾ ಪತ್ರವನ್ನು ನೀಡಲಾಗುತ್ತದೆ. ಕೋಟಿ ಕಂಠ ಗಾಯನದಲ್ಲಿ ಭಾಗವಹಿಸಲು ಕ್ಯೂಆರ್ ಕೋಡ್ ಅನ್ನು ಉಪಯೋಗಿಸಿ ನೊಂದಾಯಿಸಿಕೊಳ್ಳಿ ಎಂದರು.
ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಿ ಜಿಲ್ಲೆಯಲ್ಲಿ ನಡೆಯುವ ಕೋಟಿ ಕಂಠ ಗಾಯನದ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿ. ವಿವರ ಪಡೆದು ಆಯೋಜಿಸಿದ ಕೋಟಿ ಕಂಠ ಗಾಯನದ ಫೋಟೋ/ವಿಡಿಯೋ ಸಂಖ್ಯೆ ಇತ್ಯಾದಿ ಉಪಯುಕ್ತ ಮಾಹಿತಿಗಳನ್ನು ಕಾರ್ಯಕ್ರಮ ಮುಗಿದ ತಕ್ಷಣವೇ , ಇಲಾಖೆಯ ಜಾಲತಾಣಕ್ಕೆ ಅಪ್ಲೋಡ್ ಮಾಡುವುದು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಎನ್. ಉದಯ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಿ.ರಂಗೇಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಓಂ ಪ್ರಕಾಶ್,
ಜಿಲ್ಲಾಧಿಕಾರಿಗಳ ಕಚೇರಿಯ ಹಿರಿಯ ಸಹಾಯಕರಾದ ಸ್ವಾಮಿಗೌಡ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
- 40 ಸಾವಿರ ರು ಲಂಚ ಸ್ವೀಕಾರ : ಲೋಕಾ ಬಲೆಗೆ ಬಿದ್ದ ಅಧಿಕಾರಿ
- ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿ – ಪೋಲಿಸರಿಗೆ ಸಿಎಂ ಸಿದ್ದು ಕಿವಿಮಾತು
- ನಕಲಿ ಮುಖವಾಡದೊಳಗಿನ ಅಸಲೀ ಮುಖಗಳು..
- ಸೆ.28 ರಿಂದ 18 ದಿನಗಳವರೆಗೆ ತ. ನಾಡಿಗೆ ಮತ್ತೆ ನಿತ್ಯ 3 ಸಾವಿರ ಕ್ಯುಸೆಕ್ ನೀರು ಬಿಡಲು ಆದೇಶ – ರಾಜ್ಯಕ್ಕೆ ಶಾಕ್
- ನಟ ಬ್ಯಾಂಕ್ ಜನಾರ್ಧನ್ ಗೆ ಹೃದಯಾಘಾತ: ಐಸಿಯುನಲ್ಲಿ ಚಿಕಿತ್ಸೆ
- ಮಂಡ್ಯದಲ್ಲಿ ಬಿಜೆಪಿ ನಾಯಕರಿಂದ ಚಡ್ಡಿ ಮೆರವಣಿಗೆ : ರಾಜ್ಯ ಸರ್ಕಾರದ ವಿರುದ್ದ ಆಕ್ರೋಷ