ಶಿಕ್ಷಕರ ಅಕ್ರಮ ನೇಮಕಾತಿ : ರಾಜ್ಯದ 51 ಕಡೆ ಸಿಐಡಿ ದಾಳಿ- 38 ಮಂದಿ ಶಿಕ್ಷಕರ ಬಂಧನ

CID , PSI , scam
PSI scam: Rudragowda Patil escapes from CID officials ಪಿಎಸ್ ಐ ಹಗರಣ: ರುದ್ರಗೌಡ ಪಾಟೀಲ್ CID ಅಧಿಕಾರಿಗಳಿಂದ ಎಸ್ಕೇಪ್

ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣಗಳ ತನಿಖೆಯನ್ನು ಸಿ.ಐ.ಡಿ. ಚುರುಕುಗೊಳಿಸಿ ಬುಧವಾರ ರಾಜ್ಯದ ವಿವಿದೆಡೆ 51 ಸ್ಥಳಗಳಲ್ಲಿ ದಾಳಿ ಮಾಡಿ 38 ಶಿಕ್ಷಕರನ್ನು ಬಂಧಿಸಿದೆ.

ಸಿಐಡಿ ಇದುವರೆಗೆ ಶಿಕ್ಷಕರು ಮತ್ತು ನಿರ್ದೇಶಕರುಗಳನ್ನು ಸೇರಿದಂತೆ ಒಟ್ಟು 22 ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯು ಹೆಚ್ಚುವರಿಯಾಗಿ ಶಿಕ್ಷಕರು ಅಕ್ರಮವಾಗಿ ನೇಮಕವಾಗಿದ್ದಾರೆಂಬ ವರದಿಯ ಬೆನ್ನಲ್ಲಿ ಸಿ.ಐ.ಡಿ. ಆರೋಪಿಗಳ ಪತ್ತೆಗಾಗಿ 30 ವಿಶೇಷ ತ೦ಡಗಳನ್ನು ರಚಿಸಿ ಕೋಲಾರ, ಚಿ.ಕ್ಕಬಳ್ಳಾಪುರ, ಬೆ೦ಗಳೂರು ದಕ್ಷಿಣ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಏಕಕಾಲದಲ್ಲಿ 51 ಸ್ಥಳಗಳಲ್ಲಿ ದಾಳಿ ನಡೆಸಿ ಅಕ್ರಮವಾಗಿ ನೇಮಕವಾಗಿದ್ದ 38 ಜನ ಶಿಕ್ಷಕರನ್ನು ಬಂಧಿಸಿದೆ.ಅ. 28 ರಂದು ಶಿವಪುರ ಸತ್ಯಾಗ್ರಹ ಸೌಧದಲ್ಲಿ ಬೃಹತ್ ಕೋಟಿ ಕಂಠ ಗಾಯನ : ಡಾ. H L ನಾಗರಾಜು

ಎಲ್ಲಿ ? ಎಷ್ಟು ಮಂದಿ ಶಿಕ್ಷಕರ ಬಂಧನ ?

ಬುಧವಾರ ಸಿಐಡಿ ಯಾವ ಜಿಲ್ಲೆಯಿಂದ ಎಷ್ಟು ಮಂದಿ ಶಿಕ್ಷಕರನ್ನು ಬಂಧಿಸಿದೆ ಎಂಬ ಮಾಹಿತಿ ಬಿಡುಗಡೆ ಮಾಡಿದೆ.

ಕೋಲಾರದಿಂದ 24 ಶಿಕ್ಷಕರು, ಬೆ೦ಗಳೂರು ದಕ್ಷಿಣ ಜಿಲ್ಲೆಯಿಂದ 5 ಶಿಕ್ಷಕರು, ಚಿಕ್ಕಬಳ್ಳಾಪುರ ಜಿಲ್ಲೆಯಿ೦ದ 3 ಶಿಕ್ಷಕರು ಮತ್ತು ಚಿತ್ರದುರ್ಗ ಜಿಲ್ಲೆಯಿ೦ದ 5 ಶಿಕ್ಷಕರನ್ನು ದಸ್ತಗಿರಿ ಮಾಡಲಾಗಿದೆ. ಉಳಿದ ಆರೋಪಿಗಳ ಪತ್ತೆಕಾರ್ಯ ಮುಂದುವರೆದಿದೆ.

ಸಿಐಡಿಯ ಕಾರ್ಯಚರಣೆಯಲ್ಲಿ 18 ಡಿವೈಎಸ್‌ಪಿ ಹಾಗೂ 14 ಪೊಲೀಸ್‌ಇನ್ಸ್ ಪೆಕ್ಟರ್ ಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು .

Leave a comment

Leave a Reply

Your email address will not be published. Required fields are marked *

error: Content is protected !!