ಕನಾ೯ಟಕಕ್ಕೂ ಕಾಲಿಟ್ಟ ಒಮಿಕ್ರಾನ್ – ಇಬ್ಬರಿಗೆ ಸೋಂಕು ಪತ್ತೆ: ಆತಂಕ ಶುರು

Team Newsnap
1 Min Read

ಕರ್ನಾಟಕದಲ್ಲಿ ಇಬ್ಬರಲ್ಲಿ ಒಮಿಕ್ರಾನ್​ ಕೊರೊನಾ ಸೋಂಕು​ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಘೋಷಣೆ ಮಾಡಿದೆ

ಮಾರಕ ಕೊರೋನಾ ವೈರಸ್​​​ ರೂಪಾಂತರಿ ಒಮಿಕ್ರಾನ್​​ ಆರ್ಭಟ ಶುರುವಾಗಿರಾಜ್ಯಕ್ಕೂ ಈ ಹೊಸ ವೈರಸ್​ ಕಾಲಿಟ್ಟಿದೆ.

ಕರ್ನಾಟಕದಲ್ಲಿ  ಮೊದಲ ಎರಡು ಒಮಿಕ್ರಾನ್​​ ಕೇಸ್​​ ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಘೋಷಣೆ ಮಾಡಿದೆ.

ಕೋವಿಡ್​ ರೂಪಾಂತರಿ ತಳಿ ಒಮಿಕ್ರಾನ್​ B.1.1.529 ತಳಿಯ ಕೇಸ್​ಗಳು ಪತ್ತೆಯಾಗಿದೆ. ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲಾವ ಅಗರವಾಲ್​​ ಮಾಹಿತಿ ನೀಡಿದ್ದಾರೆ.

ಎರಡು ದಿನಗಳ ಹಿಂದೆ ಬೆಂಗಳೂರಿಗೆ ದಕ್ಷಿಣ ಆಫ್ರಿಕಾದದಿಂದ ಬಂದ ಇಬ್ಬರಿಗೆ ಒಮಿಕ್ರಾನ್​​ ಸೋಂಕು ತಗುಲಿರುವುದು ಧೃಡಪಟ್ಟಿದೆ.

ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರಿಗೆ ಕ್ವಾರಂಟೈನ್​​ ಮಾಡಲಾಗಿದೆ. ಯಾರಿಗೂ ಹರಡದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿ ಎಂದು ಅಗರವಾಲ್​​ ಹೇಳಿದರು.

ಬೆಂಗಳೂರಿನವರಾದ ಇವರು ದಕ್ಷಿಣ ಆಫ್ರಿಕಾದಿಂದ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ. ನವೆಂಬರ್‌ ಮೊದಲ ವಾರ ಬೆಂಗಳೂರಿಗೆ ಬಂದಿದ್ದರು

ಓಮಿಕ್ರಾನ್‌ ಪೀಡಿತರಲ್ಲಿ ಒಬ್ಬ ಬೊಮ್ಮನಹಳ್ಳಿ ಮೂಲದ ನಿವಾಸಿ ಎಂದು ತಿಳಿದುಬಂದಿದೆ.
ಇವರಿಬ್ಬರ ಸಂಪರ್ಕದಲ್ಲಿದ್ದವರನ್ನು ಗುರುತಿಸಲಾಗಿದೆ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಹೊಸ ರೂಪಾಂತರಿ ಪತ್ತೆಯಾಗಿರುವುದರಿಂದ ಸರ್ಕಾರ ಅಲರ್ಟ್‌ ಆಗಿದೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ಕರೆಯುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲು ಸಲಹೆ ಸೂಚನೆ ನೀಡಲಿದ್ದಾರೆ ಎನ್ನಲಾಗಿದೆ.

Share This Article
Leave a comment