ಮೋದಿ ಭೇಟಿ ಮಾಡಲು ಸಿದ್ದರಾಮಯ್ಯ ಅನುಮತಿ ಬೇಕಾ?; HDD ಪ್ರಶ್ನೆ

Team Newsnap
1 Min Read

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಲು ವಿಪಕ್ಷ ನಾಯಕ ಸಿದ್ದರಾಮಯ್ಯ ಅನುಮತಿ ಬೇಕಾ ಎಂದು ಮಾಜಿ ಪ್ರದಾನಿ ಹೆಚ್​.ಡಿ ದೇವೇಗೌಡ ಕಿಡಿಕಾರಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ದೇವೇಗೌಡರು, ನಾನು ಈ ಹಿಂದೆ
ಮನಮೋಹನ್ ಸಿಂಗ್​ರನ್ನು ಭೇಟಿ  ಮಾಡಿದ್ದೇನೆ, ವಾಜಪೇಯಿ ಅವರನ್ನು  ಭೇಟಿ ಮಾಡಿದ್ದೇನೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿದ್ದೇನೆ. ಅವರ ಭೇಟಿ ಮಾಡಲು ಸಿದ್ದರಾಮಯ್ಯ ಅವರ ಪರ್ಮಿಷನ್​ ಬೇಕಾ ಎಂದು ಗರಂ ಆದರು.

ನಾನು ಯಾರಿಗೂ ನನ್ನ ಪಕ್ಷವನ್ನು ಸರೆಂಡರ್ ಮಾಡ್ತೀವಿ ಅಂತ ಹೇಳಿದ್ದೀವಾ?.ಕಾಂಗ್ರೆಸ್ ಗೆ ಬೆಂಬಲ ಕೊಡುವ ತೀರ್ಮಾನ ಮಾಡವುದು 2023 ಚುನಾವಣೆಯಲ್ಲಿ. ಅಲ್ಲಿಯವರೆಗೆ ಯಾವ ಪ್ರತಿಕ್ರಿಯೆ ಬೇಡ ಎಂದರು

ಅಂದು ಕುಮಾರಸ್ವಾಮಿಯವರು ನನ್ನ ಅನುಮತಿ ಇಲ್ಲದೆ ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದರು. ಆದ್ರೆ ಅವರನ್ನು ಮುಖ್ಯಮಂತ್ರಿ ಮಾಡಿ ಸರ್ಕಾರ ಕೆಡವಿದವರು ಯಾರು
ಅನ್ನೋದಕ್ಕೆ  ಉತ್ತರ ಕೊಡಲಿ. ಸ್ಥಳೀಯ ಮತದಾರರು ಕಾಂಗ್ರೆಸ್,  ಜೆಡಿಎಸ್ ಅಂತ ಗೆದ್ದಿಲ್ಲ ಅವರವರ ಸ್ವಂತ ಶಕ್ತಿಯಿಂದ ಗೆದ್ದಿದ್ದಾರೆ. ಗೆದ್ದಮೇಲೆ ಈ ಚುನಾವಣೆಗೆ ಮತ ಕೊಡುವುದು ಮತದಾರನಿಗೆ ಬಿಟ್ಟಿದ್ದು  ಎಂದು ದೇವೇಗೌಡ ಹೇಳಿದ್ದಾರೆ.

Share This Article
Leave a comment