Om Namaha Shivaya – ಶಿವನಾಮ ಮಂತ್ರವ ಜಪಿಸೋ ಮನುಜ : ಶಿವನನ್ನು ಆರಾಧಿಸುವ ಮಂತ್ರಗಳು

Team Newsnap
5 Min Read

Om Namaha Shivaya : ಶಿವನಾಮ ಮಂತ್ರವ ಜಪಿಸೋ ಮನು : ಶಿವನನ್ನು ಆರಾಧಿಸುವ ಮಂತ್ರಗಳು

ನ್ಯೂಸ್ ಸ್ನ್ಯಾಪ್ ವೀಕ್ಷಕರಿಗೆ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು.

ಮಹಾಶಿವರಾತ್ರಿ ಹಬ್ಬದಂದು ಶಿವನಿಗೆ ಬಿಲ್ವಪತ್ರೆ,ರುದ್ರ ಚಮಕ, ಹಾಗೂ ಶಿವನಾಮಗಳೊಂದಿಗೆ ಪೂಜೆ ಮಾಡಲಾಗುತ್ತದೆ.
ಈ ದಿನ ಶಿವನ ಸ್ತೋತ್ರ ಹಾಡುಗಳೊಂದಿಗೆ ಶಿವರಾತ್ರಿ ಆಚರಿಸೋಣ,ಶಿವನ ಆಶೀರ್ವಾದ ಎಲ್ಲರ ಮೇಲಿರಲಿ.


ಲಿಂಗಾಷ್ಟಕಮ್

ಬ್ರಹ್ಮಮುರಾರಿ ಸುರಾರ್ಚಿತ ಲಿಂಗಂ
ನಿರ್ಮಲಭಾಸಿತ ಶೋಭಿತ ಲಿಂಗಂ |
ಜನ್ಮಜ ದುಃಖ ವಿನಾಶಕ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || 1 ||

ದೇವಮುನಿ ಪ್ರವರಾರ್ಚಿತ ಲಿಂಗಂ
ಕಾಮದಹನ ಕರುಣಾಕರ ಲಿಂಗಂ |
ರಾವಣ ದರ್ಪ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || 2 ||

ಸರ್ವ ಸುಗಂಧ ಸುಲೇಪಿತ ಲಿಂಗಂ
ಬುದ್ಧಿ ವಿವರ್ಧನ ಕಾರಣ ಲಿಂಗಂ |
ಸಿದ್ಧ ಸುರಾಸುರ ವಂದಿತ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || 3 ||

ಕನಕ ಮಹಾಮಣಿ ಭೂಷಿತ ಲಿಂಗಂ
ಫಣಿಪತಿ ವೇಷ್ಟಿತ ಶೋಭಿತ ಲಿಂಗಂ |
ದಕ್ಷ ಸುಯಙ್ಞ ನಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || 4 ||

ಕುಂಕುಮ ಚಂದನ ಲೇಪಿತ ಲಿಂಗಂ
ಪಂಕಜ ಹಾರ ಸುಶೋಭಿತ ಲಿಂಗಂ |
ಸಂಚಿತ ಪಾಪ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || 5 ||

ದೇವಗಣಾರ್ಚಿತ ಸೇವಿತ ಲಿಂಗಂ
ಭಾವೈರ್ಭಕ್ತಿಭಿರೇವ ಚ ಲಿಂಗಂ |
ದಿನಕರ ಕೋಟಿ ಪ್ರಭಾಕರ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || 6 ||

ಅಷ್ಟದಳೋಪರಿವೇಷ್ಟಿತ ಲಿಂಗಂ
ಸರ್ವಸಮುದ್ಭವ ಕಾರಣ ಲಿಂಗಂ |
ಅಷ್ಟದರಿದ್ರ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || 7 ||

ಸುರಗುರು ಸುರವರ ಪೂಜಿತ ಲಿಂಗಂ
ಸುರವನ ಪುಷ್ಪ ಸದಾರ್ಚಿತ ಲಿಂಗಂ |
ಪರಮಪದಂ ಪರಮಾತ್ಮಕ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || 8 ||

ಲಿಂಗಾಷ್ಟಕಮಿದಂ ಪುಣ್ಯಂ ಯಃ ಪಠೇತ್ ಶಿವ ಸನ್ನಿಧೌ |
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ ||


ಮಾಹಾ ಮೃತ್ಯುಂಜಯ ಮಂತ್ರ

ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿವರ್ಧನಂ| ಊರ್ವಾರುಕಮೇವ ಬಂಧನಾನ್ ಮೃತ್ಯೊರ್ಮುಕ್ಷೀಯ ಮಾಂಮೃತಾತ್|

ಶಿವನ ಬಹಳ ಶಕ್ತಿಶಾಲಿ ಮಂತ್ರ ಎಂದು ಮಹಾಮೃತ್ಯುಂಜಯ ಮಂತ್ರಕ್ಕೆ ಹೇಳಲಾಗುತ್ತದೆ. ಓಂ ನಮಃ ಶಿವಾಯವನ್ನು ನೀವು ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಹೇಳಬಹುದು ಆದರೆ ಈ ಮಂತ್ರಕ್ಕೆ ಕೆಲವು ನಿಯಮಗಳಿವೆ. ಈ ಮಂತ್ರವನ್ನು ಯಾವಾಗ ಮತ್ತು ಹೇಗೆ ಹೇಳಬೇಕು ಎಂಬುದನ್ನು ನೀವು ಅರಿತಿರಬೇಕಾದ ಅಗತ್ಯತೆ‌ ಇದೆ. ಈ ಮಂತ್ರವನ್ನು ಹೇಳುವುದರಿಂದಾಗಿ ನಿಮ್ಮ ಜೀವನಕ್ಕೆ ಶಕ್ತಿ ಮತ್ತು ಇತರೆ ಕೆಲವು ಪ್ರಮುಖ ಲಾಭಗಳಾಗುತ್ತದೆ. ಸಂಸ್ಕ್ರತ ಶಬ್ದವಾಗಿರುವ ಮಹಾ ಮೃತ್ಯುಂಜಯ ಎಂದರೆ ಸಾವನ್ನು ಗೆಲ್ಲುವವನು ಎಂದರ್ಥ. ನಿಮ್ಮ ಸಾವಿನ ಬಗ್ಗೆ ನಿಮಗಿರುವ ಭಯವನ್ನು ಹೋಗಲಾಡಿಸಿಕೊಳ್ಳಲು ಮತ್ತು ಆ ನಿಟ್ಟಿನಲ್ಲಿ ನೀವು ಯಾವುದಾದರೂ ಕಾಯಿಲೆಯಿಂದ ಬಳಲುತ್ತಿರುವಾಗ ಈ ಮಂತ್ರವನ್ನು ಪಠಿಸುವುದು ಒಳ್ಳೆಯದು.


ರುದ್ರ ಮಂತ್ರ

ಓಂ ನಮೋ ಭಗವತೇ ರುದ್ರಾಯ

ಈ ರುದ್ರ ಮಂತ್ರವು ಶಿವನನ್ನು ತಲುಪಲು ಇರುವ ಹತ್ತಿರದ ಮಾರ್ಗ ಎಂದು ಹೇಳಬಹುದು. ಮಹಾಶಿವನಿಂದ ಆಶೀರ್ವಾದ ಪಡೆಯುವುದಕ್ಕಾಗಿ ಈ ಮಂತ್ರವನ್ನು ಬಳಸಲಾಗುತ್ತದೆ.ಶಿವನಿಂದ ನಿಮ್ಮ ಇಷ್ಟಾರ್ಥ ಸಿದ್ಧಿಸುವುದಕ್ಕಾಗಿ ಈ ಮಂತ್ರ ಪಠಣೆ ಮಾಡಬಹುದು.


maha shivaratri

ಪಂಚಾಕ್ಷರಿ ಮಂತ್ರ

ಓಂ ನಮಃ ಶಿವಾಯ


ಅರ್ಥ: ನಾನು ಶಿವನಿಗೆ ಶಿರಬಾಗಿ ನಮಸ್ಕರಿಸುತ್ತೇನೆ ಎಂದರ್ಥ
ಶಿವನನ್ನು ಆಂತರಿಕ ಆತ್ಮದ ರೂಪವೆಂದು ಪರಿಗಣಿಸಲಾಗುತ್ತೆ. ರಕ್ಷಣೆ ಮತ್ತು ಸುರಕ್ಷತೆಯ ಸಮಯದಲ್ಲಿ ಈ ಮಂತ್ರವನ್ನು ಪಠಿಸಲಾಗುತ್ತೆ. ಶಿವ ಪಂಚಾಕ್ಷರಿ ಮಂತ್ರವು ಆಂತರಿಕ ಸಾಮರ್ಥ್ಯವನ್ನು ಮತ್ತು ಆತ್ಮ ಶಕ್ತಿಯನ್ನು ಹೆಚ್ಚಿಸುತ್ತದೆ. ಜೀವನಕ್ಕೆ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ. ಈ ಮಂತ್ರವನ್ನು ಯಾರು ಬೇಕಾದರೂ ಯಾವಾಗ ಬೇಕಾದರೂ ಪಠಿಸಬಹುದು. ಇದಕ್ಕೆ ಯಾವುದೇ ನಿರ್ಬಂಧನೆಗಳಿಲ್ಲ.


ಶಿವ ಗಾಯತ್ರಿ ಮಂತ್ರ


ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರಃ ಪ್ರಚೋದಯಾತ್ ॥


ಅರ್ಥ: ನಾನು ದೇವತೆಗಳ ಅತ್ಯಂತ ಮಹತ್ವಪೂರ್ಣ ಆದರ್ಶ ಪುರುಷ ಮಹಾದೇವನನ್ನು ಪ್ರಾರ್ಥಿಸುತ್ತೇನೆ. ಜ್ಞಾನದಿಂದ ನನ್ನನ್ನು ಆಶೀರ್ವದಿಸು ಮತ್ತು ಜ್ಞಾನದಿಂದ ನನ್ನನ್ನು ಬೆಳಗುವಂತೆ ಮಾಡು.
ಗಾಯತ್ರಿ ಮಂತ್ರವು ಅತ್ಯಂತ ಶಕ್ತಿಶಾಲಿ ಹಿಂದೂ ಮಂತ್ರಗಳಲ್ಲಿ ಒಂದು. ಪ್ರತೀ ದೇವರನ್ನು ಗಾಯತ್ರಿ ಮಂತ್ರದೊಂದಿಗೆ ಪೂಜಿಸಲಾಗುತ್ತದೆ. ಶಿವ ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ನಮ್ಮಲ್ಲಿರುವ ಉದ್ವೇಗ, ಭಯ, ಜೀವನದ ಅಂತಿಮ ಸತ್ಯವನ್ನು ಅರಿತುಕೊಳ್ಳಲು ಮತ್ತು ಮನಸ್ಸನ್ನು ಜಾಗೃತಗೊಳಿಸಲು ಸಹಕಾರಿಯಾಗಿದೆ. ಮನಶಾಂತಿಯನ್ನು ಬಯಸುವವರು ಈ ಮಂತ್ರವನ್ನು ಪಠಿಸುತ್ತಾರೆ.


ಶಿವ ಧ್ಯಾನ ಮಂತ್ರ


ಕರಚರಣ ಕೃತಂ ವಾ ಕಾಯಜಂ ಕರ್ಮಜಂ ವಾ ಶ್ರವಣನಯನಜಂ ವಾ ಮಾನಸಾಪರದಾಂ ವಾ ವಿಹಿತಂ ವಿಹಿತಂ ವಾ ಸರ್ವಮೇತತ್ ಕ್ಷಮಸ್ವ ಜಯ ಜಯ ಕರುಣಾಬ್ಚೇ ಶ್ರೀ ಮಹಾದೇವ ಶಂಭೋ


ಅರ್ಥ: ಹೇ ಸರ್ವೋಚ್ಚ ಶಕ್ತಿಯೇ ನನ್ನ ದೇಹ, ಮನಸ್ಸು ಮತ್ತು ಆತ್ಮವನ್ನು ಒತ್ತಡ, ಭಯ, ಸೋಲು, ಚಿಂತೆ ಹಾಗೂ ಇನ್ನಿತರ ದುಷ್ಟ ಶಕ್ತಿಗಳಿಂದ ಮುಕ್ತಗೊಳಿಸು.
ಈ ಮಂತ್ರವನ್ನು ಶ್ರದ್ಧೆಯಿಂದ ಪಠಿಸಿದರೆ ನಮ್ಮನ್ನು ಕಾಡುವ ಎಲ್ಲಾ ರೀತಿಯ ಋಣಾತ್ಮಕ ಅಂಶಗಳಿಂದ ನಾವು ಮುಕ್ತರಾಗಬಹುದು ಮತ್ತು ದುಷ್ಟ ಶಕ್ತಿಗಳಿಂದ ಪಾರಾಗಬಹುದು. ಅಲ್ಲದೇ ನಿರಂತರವಾಗಿ ಕಾಡುವ ಕಾಯಿಲೆ‌, ದುಃಖ, ಭಯಗಳಿಂದಲೂ ಮುಕ್ತರಾಗಬಹುದು. ಈ ಮಂತ್ರವನ್ನು ಜಪಿಸಿದರೆ ನಮ್ಮ ಹಿಂದಿನ ಜನ್ಮ ಅಥವಾ ಈಗಿನ ಜೀವಿತಾವಧಿಯಲ್ಲಿ ಮಾಡಿದ ತಪ್ಪಿಗೆ ಅಥವಾ ಪಾಪಕರ್ಮಗಳಿಗೆ ಕ್ಷಮೆಯನ್ನು ಪಡೆಯಬಹುದು.


ಏಕಾದಶ ರುದ್ರ ಮಂತ್ರ


ಏಕಾದಶ ರುದ್ರ ಮಂತ್ರವು 11 ವಿವಿಧ ಬಗೆಯ ಮಂತ್ರಗಳ ಗುಂಪಾಗಿದೆ.


ಕಪಾಲಿ-”ಓಂ ಹಮ್‌ ಹಮ್‌ ಶತ್ರುಸ್ಥಂಭನಾಯ ಹಮ್‌ ಹಮ್‌ ಒಂ ಫಟ್‌”
ಪಿಂಗಳ-”ಓಂ ಶ್ರೀಂ ಹ್ರೀಂ ಶ್ರೀಂ ಸರ್ವ ಮಂಗಳಾಯ ಪಿಂಗಳಾಯ ಓಂ ನಮಃ”
ಭೀಮ-” ಓಂ ಆಮ್‌ ಆಮ್‌ ಮನೊ ವಂಚಿತ ಸಿದ್ಧಾಉ ಆಮ್‌ ಆಮ್ ಓಂ”
ವಿರೂಪಾಕ್ಷ-”ಓಂ ರುದ್ರಾಯ ರೋಗನಾಶನಾಯ ಅಗಾಚ ಚ ರಾಮ್‌ ಓಂ ನಮಃ”
ವಿಲೋಹಿತಾ-”ಓಂ ಶ್ರೀಂ ಹ್ರೀಂ ಸಾಮ್‌ ಸಾಮ್‌ ಹ್ರೀಂ ಶ್ರೀಂ ಶಂಕರ್ಶಣಾಯ ಓಂ”
ಶಷ್ಠ-“ಓಂ ಹ್ರೀಮ್ ಹ್ರೀಮ್ ಸಫಲಾಯಿ ಸಿದ್ಧಯೇ ಓಂ ನಮಃ”
ಅಜಪದ-“ಓಂ ಶ್ರೀಮ್ ಬಾಮ್ ಸೋಗ್ ಬಲವರ್ಧನಾಯ ಬಲೇಶ್ವರಾಯ ರುದ್ರಾಯ ಫಟ್ ಓಂ”
ಅಹಿರ್ಭುಧನ್ಯ-“ಓಂ ಹ್ರಾಮ್ ಹ್ರೀಮ್ ಹಮ್ ಸಮಸ್ತ ಗ್ರಹ ದೋಷ ವಿನಾಶಾಯ ಓಂ”
ಸಂಭು-“ಓಂ ಗಮ್ ಹ್ಲುವಾಮ್ ಶೋರುಮ್ ಗ್ಲಮ್ ಗಮ್ ಓಂ ನಮಃ”
ಚಂಡ-“ಓಂ ಚಮ್ ಚಂಡೀಶ್ವರಾಯ ತೇಜಸ್ಸಾಯ ಚಮ್ ಓಂ ಫಟ್”
ಭಾವ-“ಓಂ ಭವೋದ್ ಭವ ಸಂಭವಾಯ ಇಷ್ಟ ದರ್ಶಣ ಓಂ ಸಾಮ್


ಈ ಶಿವ ಮಂತ್ರಗಳು ಶಿವನ 11 ವಿಧದ ರುದ್ರ ರೂಪವನ್ನು ಗೌರವಿಸಲು ಪಠಿಸುವ ಮಂತ್ರವಾಗಿದೆ. ಮಹಾ ಶಿವರಾತ್ರಿಯಂತಹ ಶಿವನ ಹಬ್ಬಗಳಲ್ಲಿ ಅಥವಾ ಮಹಾ ರುದ್ರ ಯಾಗ ನಡೆಯುವ ಸಮಯದಲ್ಲಿ ಶಿವ ಭಕ್ತರು ಸಾಮಾನ್ಯವಾಗಿ ಈ ಮಂತ್ರವನ್ನು ಪಠಿಸುತ್ತಾರೆ. ಶಿವ ರುದ್ರ ಮಂತ್ರವನ್ನು ಪಠಿಸುವುದರಿಂದ ಕುಂಡಲಿಯಲ್ಲಿನ ಅನೇಕ ದೋಷಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯಿದೆ.


ಶಿವ ಶಿವ ಎಂದರೆ
ಭಯವಿಲ್ಲ ………..
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಟಿ ಬೇರಿಲ್ಲ
ಶಿವ ನಾಮಕೆ ಸಾಟಿ ಬೇರಿಲ್ಲ
ಶಿವ ಭಕ್ತನಿಗೆ
ನರಕ ಇಲ್ಲ…………
ಶಿವ ಭಕ್ತನಿಗೆ ನರಕ ಇಲ್ಲ
ಜನುಮ ಜನುಮಗಳ ಕಾಟವೇ ಇಲ್ಲ
ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಟಿ ಬೇರಿಲ್ಲ
ಶಿವ ನಾಮಕೆ ಸಾಟಿ ಬೇರಿಲ್ಲ

ಅನ್ನ ದಾನವ ತೊರೆಯದಿರು
ನಾನು ನನ್ನದು ಎನ್ನದಿರು
ಅನ್ನ ದಾನವ ತೊರೆಯದಿರು
ನಾನು ನನ್ನದು ಎನ್ನದಿರು
ಉನ್ನತಿ ಸಾಧಿಸೆ
ಹಗಲಿರುಳು …… ….
ಉನ್ನತಿ ಸಾಧಿಸಿ ಹಗಲಿರುಳು
ದೀನನಾಥನ ಮರೆಯದಿರು…..

ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಟಿ ಬೇರಿಲ್ಲ
ಶಿವ ನಾಮಕೆ ಸಾಟಿ ಬೇರಿಲ್ಲ .

ಭೋಗ ಭಾಗ್ಯದ ಬಲೆಯೊಳಗೆ
ಬಳಲಿ ಬಾಡದೇ ಇಳೆಯೊಳಗೆ
ಭೋಗ ಭಾಗ್ಯದ ಬಲೆಯೊಳಗೆ
ಬಳಲಿ ಬಾಡದೇ ಇಳೆಯೊಳಗೆ
ಕಾಯಕ ಮಾಡುತ
ಎಂದೆಂದೂ ……….
ಕಾಯಕ ಮಾಡುತ ಎಂದೆಂದೂ
ಆತ್ಮ ನಂದವ ಸವಿಯುತಿರು …..

ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಟಿ ಬೇರಿಲ್ಲ
ಶಿವ ನಾಮಕೆ ಸಾಟಿ ಬೇರಿಲ್ಲ .

ದಾನವೇ ಜಗದೊಳು ತಪವಯ್ಯಾ
ಧ್ಯಾನವೇ ಘನಕರ ಜಪವಯ್ಯಾ
ದಾನವೇ ಜಗದೊಳು ತಪವಯ್ಯಾ
ಧ್ಯಾನವೇ ಘನಕರ ಜಪವಯ್ಯಾ
ಅಪಕಾರವ ನೀ
ಮಾಡಿದರೆ………
ಅಪಕಾರವ ನೀ ಮಾಡಿದರೆ
ಕೈಲಾಸವದು ಸಿಗದಲ್ಲ .

ಶಿವ ಶಿವ ಎಂದರೆ ಭಯವಿಲ್ಲ
ನಾಮಕೆ ಸಾಟಿ ಬೇರಿಲ್ಲ
ಶಿವ ನಾಮಕೆ ಸಾಟಿ ಬೇರಿಲ್ಲ

Share This Article
Leave a comment