January 10, 2025

Newsnap Kannada

The World at your finger tips!

kantin

ನ್ಯಾಯಾಲಯದ ಆದೇಶದಂತೆ ಮಿಮ್ಸ್ ಆವರಣದಲ್ಲಿದ್ದ ಕ್ಯಾಂಟೀನ್ ಖಾಲಿ ಮಾಡಿಸಿದ ಅಧಿಕಾರಿಗಳು

Spread the love

ಮಂಡ್ಯ ದ ಮಿಮ್ಸ್ ನ ಹೆರಿಗೆ ಆಸ್ಪತ್ರೆ ಎದುರಿನ ಕ್ಯಾಂಟೀನ್ ಅನ್ನು ಸೆಷನ್ಸ್ ನ್ಯಾಯಾಲಯದ ಆದೇಶದಂತೆ ಇಂದು ಕೊನೆಗೂ ತೆರವುಗೊಳಿಸಲಾಯಿತು.

ಕ್ಯಾಂಟೀನ್ ಒಳಗಿದ್ದ ಸಾಮಗ್ರಿಗಳೆಲ್ಲವನ್ನೂ ಹೊರಹಾಕಲಾಗಿದೆ. ಅಕ್ರಮವಾಗಿ ಕಟ್ಟಿದ್ದ ಗೋಡೆಯನ್ನು ಕೆಡವಲಾಗಿದೆ. ಅಲ್ಲದೇ ಸದ್ಯಕ್ಕೆ ಮಿಮ್ಸ್ ನಿರ್ದೇಶಕರು ಕ್ಯಾಂಟೀನ್ ಇದ್ದ ಜಾಗವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ

ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆದಿದೆ.

ದಾನಿಯೊಬ್ಬರು ತಂಗುದಾಣವನ್ನು ನಿರ್ಮಿಸಿಕೊಟ್ಟಿದ್ದರು. ಈ ತಂಗುದಾಣವನ್ನು ಮಿಮ್ಸ್ ವೈದ್ಯಾಧಿಕಾರಿಗಳು ಅಕ್ರಮವಾಗಿ ಕ್ಯಾಂಟೀನ್ ನಡೆಸುವುದಕ್ಕೆ ನೀಡಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಯಿತು. ಇದರಿಂದ ಹೆರಿಗೆ ವಿಭಾಗದಲ್ಲಿದ್ದ ಗರ್ಭಿಣಿ ಹಾಗೂ ಬಾಣಂತಿಯರ ಸಂಬಂಧಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಸಾರ್ವಜನಿಕರು ವೈದ್ಯಾಧಿಕಾರಿಗಳ ಕ್ರಮದ ವಿರುದ್ಧ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.

3 ವರ್ಷಗಳ ಸುದೀರ್ಘ ಹೋರಾಟದ ಬಳಿಕ ತಂಗುದಾಣದ ಜಾಗವನ್ನು ವಶಕ್ಕೆ ಪಡೆಯುವಂತೆ ನ್ಯಾಯಾಲಯ ಮಿಮ್ಸ್ ನಿರ್ದೇಶಕರಿಗೆ ಸೂಚನೆ ನೀಡಿತ್ತು. ಹೀಗಾಗಿ ತಂಗುದಾಣವಿರುವ ಜಾಗವನ್ನು ಸಾರ್ವಜನಿಕರಿಗೆ ಮುಕ್ತ ಮಾಡಲಾಗಿದೆ

Copyright © All rights reserved Newsnap | Newsever by AF themes.
error: Content is protected !!