ರಾಜ್ಯದಲ್ಲಿ ಮಂಗಳವಾರ 30,309 ಮಂದಿಗೆ ಕೊರೊನಾ ಸೋಂಕಿರುವುದು ದೃಢವಾಗಿದೆ. ರಾಜ್ಯದಲ್ಲಿ ಸೋಂಕಿತ ಪ್ರಮಾಣ ಇಳಿಯುತ್ತಿದೆ. ಆದರೆ 525 ಮಂದಿ ಸಾವನ್ನಪ್ಪಿದ್ದಾರೆ.
ಮಂಗಳವಾರ 58,395 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆ ಯಿಂದ ಬಿಡುಗಡೆ ಯಾಗಿದ್ದಾರೆ.
ಈವರೆಗೆ 16,74,487 ಮಂದಿ ಗುಣಮುಖರಾದಂತಾಗಿದೆ.
ಇಂದು 525 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 22,838ಕ್ಕೆ ಏರಿಕೆಯಾಗಿದೆ.
ಸದ್ಯ ರಾಜ್ಯದಲ್ಲಿ 5,75,028 ಆ್ಯಕ್ಟಿವ್ ಪ್ರಕರಣಗಳಿವೆ
ರಾಜ್ಯದಲ್ಲಿ ಇಂದು 12,535 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 80,712 ಆರ್ಟಿಪಿಸಿಆರ್ ಟೆಸ್ಟ್ಗಳು ಸೇರಿದಂತೆ ಒಟ್ಟು 93,247 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ.
ಈ ಪೈಕಿ ಇಂದು 30,309 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.
ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 22,72,374ಕ್ಕೆ ಏರಿಕೆಯಾಗಿದೆ. *ಬೆಂಗಳೂರಿನಲ್ಲಿ ಇಂದು 8,676 ಹೊಸ ಪ್ರಕರಣಗಳು ದಾಖಲಾಗಿದೆ. 298 ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ 1339, ಬಳ್ಳಾರಿಯಲ್ಲಿ 1799, ಬೆಳಗಾವಿ 2118, ದಕ್ಷಿಣ ಕನ್ನಡ 777, ಕೋಲಾರ 1021, ಮೈಸೂರು 1916, ಶಿವಮೊಗ್ಗ 1168, ತುಮಕೂರು 1562 ಹಾಗೂ ಉತ್ತರ ಕನ್ನಡದಲ್ಲಿ 803 ಪ್ರಕರಣಗಳು ದಾಖಲಾಗಿವೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ