February 22, 2026

Newsnap Kannada

The World at your finger tips!

election , politics , kolar

Siddu will not win in Kolar : Minister Sudhakarಸಿದ್ದು ಕೋಲಾರದಲ್ಲಿ ಗೆಲ್ಲುವುದಿಲ್ಲ - ಖೆಡ್ಡಾಗೆ ಬಿದ್ದಿದ್ದಾರೆ: ಸಚಿವ ಸುಧಾಕರ್‌

ರಾಜ್ಯದಲ್ಲಿ 1- 5 ನೇ ತರಗತಿ ಶಾಲೆ ಆರಂಭಿಸುವ ಚಿಂತನೆ ಇಲ್ಲ – ಸಚಿವ ಸುಧಾಕರ್

Spread the love

ಗಣೇಶ ಹಬ್ಬ ಇರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಪ್ರಾಥಮಿಕ ಶಾಲೆ (1 ರಿಂದ 5) ಗಳನ್ನು ಆರಂಭಿಸುವ ಬಗ್ಗೆ ಯಾವುದೇ ಚಿಂತನೆ ಇಲ್ಲ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಸದ್ಯ ಪ್ರಾಥಮಿಕ ಶಾಲೆ ಆರಂಭದ ಚಿಂತನೆಯೇ ಇಲ್ಲ. ಕೇರಳದಲ್ಲಿ ಕೊರೊನಾ ಏರಿಕೆ ಹಾಗೂ ಅಲ್ಲಿನ ವಿದ್ಯಾರ್ಥಿಗಳಿಂದ ರಾಜ್ಯದಲ್ಲಿ ಕೊವಿಡ್ ಕೇಸ್ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಸದ್ಯ 6 ತರಗತಿ ಯಿಂದ ಪ್ರಾಯೋಗಿಕ ಪ್ರಯತ್ನ ಮಾಡುತ್ತಾ ಇದ್ದೀವಿ ಅಷ್ಟೇ. ಪ್ರಾಥಮಿಕ ಶಾಲೆಗಳಾದ 1 ರಿಂದ 5 ರವರೆಗೆ ತೆರೆಯಲು ಚಿಂತನೆ ಇಲ್ಲ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ 1ರಿಂದ 5ನೆ ತರಗತಿಯವರೆಗೆ ಶಾಲೆ ಆರಂಭಿಸುವ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸದ್ಯ ಅಂತಹ ಆಲೋಚನೆಗಳಿಲ್ಲ ಎಂದು ಸಹ ಅವರು ಸ್ಪಷ್ಟಪಡಿಸಿದರು.

2913 ಗ್ರಾಮ ಪಂಚಾಯತ್ ಗಳಲ್ಲಿ ಕೊವಿಡ್ ಪಾಸಿಟಿವಿಟಿ ಶೂನ್ಯವಿದೆ. 6472 ಮಕ್ಕಳ ಕೊವಿಡ್ ಸ್ಯಾಂಪಲ್​ಗಳಲ್ಲಿ 12 ಮಕ್ಕಳಲ್ಲಿ ಮಾತ್ರ ಕೊವಿಡ್ ಪಾಸಿಟಿವ್ ಬಂದಿದೆ ಎಂದು ಅವರು ತಿಳಿಸಿದರು.

error: Content is protected !!