ಮಂಡ್ಯ:ಬೇಟೆಯಾಡಿ ಜಿಂಕೆ ಕೊಂದ ಖದೀಮರಿಗೆ‌ ಗುಂಡು- ಓರ್ವನಿಗೆ ಗಾಯ, ಮೂವರು‌ ಪರಾರಿ

Team Newsnap
1 Min Read

ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಜಿಂಕೆಗಳ ಬೇಟೆಯಾಡುತ್ತಿದ್ದ ದುಷ್ಕರ್ಮಿಗಳ ಗುಂಪಿನ ಮೇಲೆ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ ಪರಿಣಾಮ ಭೇಟೆಗಾರನನೊಬ್ಬನಿಗೆ ಗುಂಡು ತಗುಲಿ‌ ಗಾಯಗೊಂಡಿದ್ದಾನೆ. ಇನ್ನುಳಿದ ಆರೋಪಿಗಳು ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಬಸವನಬೆಟ್ಟ ಅರಣ್ಯ ಪ್ರದೇಶದಲ್ಲಿ ಜರುಗಿದೆ.

ಬಸವನಬೆಟ್ಟ ಅರಣ್ಯ ಪ್ರದೇಶದಲ್ಲಿ ನ ಮುಖ್ಯ ರಸ್ತೆ ಬದಿಯಲ್ಲಿ ಅಡಗಿ ಕುಳಿತು ರಸ್ತೆ ದಾಟುವ ಜಿಂಕೆ ಸೇರಿದಂತೆ ಇನ್ನಿತರ ಪ್ರಾಣಿಗಳ ಮೇಲೆ ಗುಂಡು ಹಾರಿಸಿ ಪ್ರಾಣಿಗಳ ಭೇಟಿಯಾಡುತ್ತಿದ್ದರು ಎನ್ನಲಾಗಿದೆ.

ಮುಂಜಾನೆ 5 ಗಂಟೆ ಸಮಯದಲ್ಲಿ ಸಹ ಇದೇ ರೀತಿ ಜಿಂಕೆಗಳ‌ ಬೇಟೆಯಲ್ಲಿ ತೊಡಗಿದ್ದ ನಾಲ್ವರು ಬೇಟೆ ಕೋರರ ಗುಂಪು ಎರಡು ಜಿಂಕೆಗಳನ್ನು ಹತ್ಯಗೈದಿರುವ ವಿಷಯ ತಿಳಿದ ಅರಣ್ಯ ಇಲಾಖೆಯ ವಾಚರ್ ಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಬೇಟೆ ಕೋರರನ್ನು ಹಿಡಿಯಲು ಮುಂದಾಗುತ್ತಿದ್ದಂತೆ ಅರಣ್ಯ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದಾರೆ.

ಕೂಡಲೇ ಎಚ್ಚೆತ್ತ ಅರಣ್ಯ ಸಿಬ್ಬಂದಿ ಪ್ರತಿಯಾಗಿ ಬೇಟೆಕೋರರ ಮೇಲೆ ಗುಂಡು ಹಾರಿಸಿದಾಗ ದುಷ್ಕರ್ಮಿಯೊಬ್ಬ ಗುಂಡು ತಗುಲಿ ಗಾಯಗೊಂಡ ಈತನನ್ನು ಗೊಲ್ಲರ ದೊಡ್ಡಿ ಗ್ರಾಮದ ವೆಂಕಟೇಶ ಎಂದು ಗುರುತಿಸಲಾಗಿದೆ.

ಉಳಿದ ಮೂವರು ಪರಾರಿ ಯಾಗಿದ್ದು ಇವರೂ ಸಹ ಗೊಲ್ಲರ ದೊಡ್ಡಿ ಗ್ರಾಮದವರು ಎನ್ನಲಾಗಿದೆ.

ಗಾಯಾಳುವನ್ನು‌ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿಗಳು ಕೊಂದು ಹಾಕಿದ್ದ ಎರಡು ಜಿಂಕೆಯ ಶವಗಳನ್ನು ವಶಪಡಿಸಿ ಕೊಂಡಿರುವ ಅರಣ್ಯ ಸಿಬ್ಬಂದಿ ಪರಾರಿಯಾಗಿರುವ ಆರೋಪಿಗಳ ಶೋಧಕಾರ್ಯ ಕೈಗೊಂಡಿದ್ದಾರೆ.

ಸ್ಥಳಕ್ಕೆ ‌ಡಿವೈಎಸ್ಪಿ ಲಕ್ಷಿನಾರಾಯಣ ಪ್ರಸಾದ್, ಎಸಿಎಫ್ ಅಂಕರಾಜು, ಆರ್ ಎಫ್ ಓ ಮಹಾದೇವಸ್ವಾಮಿ, ಹಲಗೂರು ಪಿ ಎಸ್ ಐ ಮಾರುತಿ ತಮ್ಮಣ್ಣನವರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಲಗೂರು ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Share This Article
Leave a comment