December 23, 2024

Newsnap Kannada

The World at your finger tips!

MP,mandya,election

Sumaltha's entry into state politics? ರಾಜ್ಯ ರಾಜಕಾಣಕ್ಕೆ ಸುಮಲತಾ ಎಂಟ್ರಿ?

ಟ್ರಯಲ್ ಬ್ಲಾಸ್ಟ್ ಆಧರಿಸಿ ಗಣಿಗಾರಿಕೆಗೆ ಅವಕಾಶ ಬೇಡ: ಸಿಎಂಗೆ ಸುಮಲತಾ ಪತ್ರ

Spread the love

ಕೆಆರ್‌ಎಸ್ ಸುತ್ತಮುತ್ತಲು ಟ್ರಯಲ್ ಬ್ಲಾಸ್ಟ್ ನಲ್ಲಿ ಗ್ರೀನ್ ಸಿಗ್ನಲ್ ಸಿಕ್ಕರೂ ಸಹ ಗಣಿಗಾರಿಕೆಗೆ ಸುತರಾಂ ಅವಕಾಶ ನೀಡಬೇಡಿ ಎಂದು ಸಂಸದೆ ಸುಮಲತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗಣಿ ಸಚಿವರಿಗೆ ಪತ್ರ ಬರೆದಿದ್ದಾರೆ

ಕೆಆರ್‌ಎಸ್ ವ್ಯಾಪ್ತಿಯ 20 ಕಿ.ಮೀ ಗಣಿನಿಷೇಧ ಪ್ರದೇಶವಾಗಿ ಯಥಾಸ್ಥಿತಿ ಕಾಪಾಡುವಂತೆ ಸಿಎಂ, ಗಣಿ ಸಚಿವರಿಗೆ ಸುಮಲತಾ ಅಂಬರೀಶ್ ಮನವಿ ಮಾಡಿದ್ದಾರೆ.ಇದನ್ನು ಓದಿ –ಕ್ಯಾಥೋಲಿಕರು ಇಲ್ಲ ಅಂದ್ರೆ ತಮಿಳುನಾಡು ಮತ್ತೊಂದು ಬಿಹಾರ : ಸ್ಪೀಕರ್ ವಿವಾದ ಹೇಳಿಕೆ

ಜಾರ್ಖಂಡ್‍ನಿಂದ ಆಗಮಿಸಿರುವ ಸಿಎಸ್‍ಐಆರ್ ಮತ್ತು ಸಿಐಎಂಎಫ್‍ಆರ್ ವಿಜ್ಞಾನಿಗಳು ಕಂಟ್ರೋಲ್ ಬಳಸಿ ಟ್ರಯಲ್ ಬ್ಲಾಸ್ಟ್ ಮಾಡುತ್ತಾರೆ. ಆ ಸಂಶೋಧನೆ ಕೇವಲ 200 ಮೀಟರ್ ವ್ಯಾಪ್ತಿಗಷ್ಟೇ ಪರಿಣಾಮ ಬೀರುತ್ತದೆ ಎಂದು ವರದಿಯಲ್ಲಿ ತಿಳಿದು ಬಂದಿದೆ.

bommai 1

ಈ. ವರದಿ ಆಧರಿಸಿ ಕೆಆರ್‌ಎಸ್ ಸುತ್ತಮುತ್ತ ಗಣಿಗಾರಿಕೆಗೆ ಅವಕಾಶಕೊಟ್ಟರೆ ರಿಗ್, ಬೋರ್, ಸೈಲೆಂಟ್ ಬ್ಲಾಸ್ಟ್ ಮಾಡುತ್ತಾರೆ. ಈ ಹಿಂದೆಯೇ ಇಂತಹ ಗಣಿಗಾರಿಕೆಯಿಂದ 2.4 ರಿಕ್ಟರ್ ಮಾಪನದಷ್ಟು ಭೂಕಂಪನವಾಗಿತ್ತು. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸಂಶೋಧನಾ ಸಂಸ್ಥೆಗಳು ಕೆಆರ್‌ಎಸ್ ಸುತ್ತಮುತ್ತಲ ಗಣಿಗಾರಿಕೆಯಿಂದ ಡ್ಯಾಂಗೆ ಆಗುತ್ತಿರುವ ಅಪಾಯದ ಬಗ್ಗೆ ವರದಿ ನೀಡಿವೆ. ಟ್ರಯಲ್ ಬ್ಲಾಸ್ಟ್ ಆಧರಿಸಿ ಗಣಿಗಾರಿಕೆಗೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದ್ದಾರೆ.

ಕೆಆರ್‌ಎಸ್ ಸುತ್ತಮುತ್ತ 20 ಕಿ.ಮೀ ವ್ಯಾಪ್ತಿ ಗಣಿಗಾರಿಕೆ ನಿಷೇಧದ ಪ್ರದೇಶವಾಗಿಯೆ ಇರಲಿ. ಇದೇ ನನ್ನ ಹಾಗೂ ರೈತ, ಪ್ರಗತಿಪರ ಸಂಘಟನೆಗಳ ನಿಲುವು ಪತ್ರದಲ್ಲಿ ಹೇಳಿದ್ದಾರೆ .

Copyright © All rights reserved Newsnap | Newsever by AF themes.
error: Content is protected !!