ಕ್ಯಾಥೋಲಿಕರು ಇಲ್ಲ ಅಂದ್ರೆ ತಮಿಳುನಾಡು ಮತ್ತೊಂದು ಬಿಹಾರ : ಸ್ಪೀಕರ್ ವಿವಾದ ಹೇಳಿಕೆ

Team Newsnap
2 Min Read
There are no Catholics, Tamil Nadu is another Bihar: Speaker's controversial statement ಕ್ಯಾಥೋಲಿಕರು ಇಲ್ಲ ಅಂದ್ರೆ ತಮಿಳುನಾಡು ಮತ್ತೊಂದು ಬಿಹಾರ : ಸ್ಪೀಕರ್ ವಿವಾದ ಹೇಳಿಕೆ #Thenewsnap #latestnews #tamil_nadu #Government #politics #india #catholics #mandya #Bengaluru

ತಮಿಳುನಾಡು ವಿಧಾನಸಭಾಧ್ಯಕ್ಷ ಹಾಗೂ ಡಿಎಂಕೆ ನಾಯಕ ಎಂ.ಅಪ್ಪಾವು ರಾಜ್ಯದ ಅಭಿವೃದ್ಧಿಗೆ ಕ್ರಿಶ್ಚಿಯನ್ನರೇ ಕಾರಣ. ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಇಲ್ಲದಿದ್ದರೆ ತಮಿಳುನಾಡು ಮತ್ತೊಂದು ಬಿಹಾರವಾಗುತ್ತಿತ್ತು ಎಂದು ಒಂದು ತಿಂಗಳ ಹಿಂದಿನ ನೀಡಿದ್ದ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.

ಕಳೆದ ತಿಂಗಳು ಜೂನ್ 28 ರಂದು, ಅಪ್ಪಾವು ಮತ್ತು ಡಿಎಂಕೆ ಎಲ್‌ಎಂಎ ಇನಿಗೊ ಇರುದಯರಾಜ್ ತಿರುಚಿರಾಪಳ್ಳಿಯಲ್ಲಿರುವ ಸೇಂಟ್ ಪಾಲ್ ಸೆಮಿನರಿಯ ಶತಮಾನೋತ್ಸವ ಆಚರಣೆಯಲ್ಲಿ ಭಾಗವಹಿಸಿದ್ದರು.ಇದನ್ನು ಓದಿ –ನಾಯಿಗಳಿಗೂ ಏರ್ ಕಂಡೀಷನ್ ಫ್ಲ್ಯಾಟ್: ಪಶ್ಚಿಮ ಬಂಗಾಲದ ಸಚಿವ ಪಾರ್ಥನ ಭ್ರಷ್ಟಾಚಾರದ ಮುಖ

ಈ ವೇಳೆ ಮಾತನಾಡಿದ ಅಪ್ಪಾವು, ಕ್ರಿಶ್ಚಿಯನ್ ಫಾದರ್ ಮತ್ತು ಸಿಸ್ಟರ್ಸ್ ಇಲ್ಲದಿದ್ದರೆ ತಮಿಳುನಾಡು ಬಿಹಾರದಂತಾಗುತ್ತಿತ್ತು. ಕ್ಯಾಥೋಲಿಕ್ ಫಾದರ್ ಮತ್ತು ಸಿಸ್ಟರ್​ಗಳು ನಾನು ಇಂದು ಈ ಸ್ಥಾನಕ್ಕೆ ಬೆಳೆಯಲು ಸಹಾಯ ಮಾಡಿದ್ದಾರೆ. ತಮಿಳುನಾಡು ಸರ್ಕಾರ ನಿಮ್ಮ ಸರ್ಕಾರ. ನಿಮ್ಮ ಪ್ರಾರ್ಥನೆ ಮತ್ತು ಉಪವಾಸವು ಈ ಸರ್ಕಾರವನ್ನು ರಚಿಸಿತು. ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಮತ್ತು ಕ್ರಿಶ್ಚಿಯನ್ ಫಾದರ್‌ಗಳು ಸಾಮಾಜಿಕ ನ್ಯಾಯ ಮತ್ತು ದ್ರಾವಿಡ ಮಾದರಿ ಸರ್ಕಾರಕ್ಕೆ ಮುಖ್ಯ ಕಾರಣ ಎಂದಿದ್ದರು.

ನೀವು (ಕ್ಯಾಥೋಲಿಕ್ ಕ್ರಿಶ್ಚಿಯನ್ನರು) ಯಾರನ್ನೂ ಅವಲಂಬಿಸುವ ಅಗತ್ಯವಿಲ್ಲ, ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪಟ್ಟಿ ಮಾಡಿ ನೇರವಾಗಿ ಮುಖ್ಯಮಂತ್ರಿಗೆ ನೀಡಿ, ಅವರು ಏನನ್ನೂ ನಿರಾಕರಿಸುವುದಿಲ್ಲ ಮತ್ತು ಎಲ್ಲವನ್ನೂ ಪರಿಹರಿಸುತ್ತಾರೆ. ಏಕೆಂದರೆ ಈ ಸರ್ಕಾರಕ್ಕೆ ನೀವೇ ಕಾರಣ ಎಂದು ಮುಖ್ಯಮಂತ್ರಿಗೆ ತಿಳಿದಿದೆ. ಇದು ನಿಮ್ಮ ಸರ್ಕಾರ ಮತ್ತು ನಿಮ್ಮ ಮುಖ್ಯಮಂತ್ರಿ. ಇದರಲ್ಲಿ ನಾನು ನಿಮ್ಮೊಂದಿಗಿದ್ದೇನೆ.

ತಮಿಳುನಾಡಿನಿಂದ ಕ್ರಿಶ್ಚಿಯನ್ನರನ್ನು ತೊಲಗಿಸಿದರೆ ಯಾವುದೇ ಅಭಿವೃದ್ಧಿಯಾಗುವುದಿಲ್ಲ. ತಮಿಳುನಾಡಿನ ಅಭಿವೃದ್ಧಿಗೆ ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಮುಖ್ಯ ಕಾರಣ.ಇಂದಿನ ತಮಿಳುನಾಡು ನಿಮ್ಮ ಮೇಲೆ ನಿರ್ಮಾಣವಾಗಿದೆ ಎಂದು ಹೇಳಿದ್ದರು.

ಅಪ್ಪಾವು ಅವರ ಈ ಕ್ರಿಶ್ಚಿಯನ್​ ಭಾಷಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಬಿಜೆಪಿ ಮತ್ತು ಡಿಎಂಕೆ ಮಧ್ಯೆ ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದೆ. ವಿಧಾನಸಭಾ ಸ್ಪೀಕರ್ ಅವರ ಈ ನಡೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಜಾತ್ಯತೀತ ಪಕ್ಷ ಎಂದು ಹೇಳುವ ಡಿಎಂಕೆ ಕ್ರಿಶ್ಚಿಯನ್ನರ ಅಡಿಯಾಳಾಗಿದೆ. ಹಿಂದು ವಿರೋಧಿ ಪಕ್ಷ ಎಂಬುದು ಈಗ ಸಾಬೀತಾಗಿದೆ ಎಂದು ಬಿಜೆಪಿ ಕಿಡಿಕಾರಿದೆ.

Share This Article
Leave a comment