November 22, 2024

Newsnap Kannada

The World at your finger tips!

temple,mysuru,hills

ನಾಳೆ ಬೆಳಗ್ಗೆವರೆಗೂ ಚಾಮುಂಡಿ ಬೆಟ್ಟ ಪ್ರವೇಶಕ್ಕೆ ನಿಷೇಧ : 2.07 ಕೋಟಿ ಸಂಗ್ರಹ

Spread the love

ಇಂದಿನಿಂದ ನಾಳೆ ಬೆಳಿಗ್ಗೆವರೆಗೂ ಚಾಮುಂಡಿ ಬೆಟ್ಟದ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಹೇರಲಾಗಿದೆ

ಇಂದಿನಿಂದ ನಾಳೆ ಬೆಳಿಗ್ಗೆ 7:30ರವರೆಗೆ ಮೈಸೂರು ಚಾಮುಂಡಿ ಬೆಟ್ಟಕ್ಕೆ ಭಕ್ತರು ಹಾಗೂ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಇಂದು ರಾತ್ರಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ನಾಡ ಅಧಿದೇವತೆ ಚಾಮುಂಡಿದೇವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 12 ಗಂಟೆ ಬಳಿಕ ಭಕ್ತಾದಿಗಳಿಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಇದನ್ನು ಓದಿ – ಪ್ರಧಾನಿ ಕಾರ್ಯಕ್ರಮ ಭದ್ರತೆಗೆ ನಿಯೋಜಿಸಿದ್ದ PSI ಸುದರ್ಶನ್ ಶೆಟ್ಟಿ ಆತ್ಮಹತ್ಯೆ

ಈ ಬಗ್ಗೆ ದೇವಸ್ಥಾನದ ಉಸ್ತುವಾರಿ ಮುಜರಾಯಿ ತಹಶೀಲ್ದಾರ್ ಕೃಷ್ಣ ಮಾಹಿತಿ ನೀಡಿದ್ದಾರೆ , ಇಂದು ಮಧ್ಯಾಹ್ನ 12 ಗಂಟೆಯಿಂದ ನಾಳೆ ಬೆಳಿಗ್ಗೆ 7:30ರವರೆಗೆ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ.

2.07 ಕೋಟಿ ರು ಸಂಗ್ರಹ :

ಭಾನುವಾರ ಚಾಮುಂಡಿ ಬೆಟ್ಟದ ದೇವಸ್ಥಾನದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ 23 ವಿದೇಶಿ ನೋಟುಗಳು ಪತ್ತೆಯಾಗಿದ್ದು, ಬರೋಬ್ಬರಿ 2 ಕೋಟಿಗೂ ಅಧಿಕ ಮೊತ್ತ ಸಂಗ್ರಹವಾಗಿದೆ. ಇದನ್ನು ಓದಿ – 25 ವರ್ಷವಾದರೂ ಕನ್ಯೆ ಸಿಗದ ಕಾರಣ ರೈತ ಆತ್ಮಹತ್ಯೆ

ಎಣಿಕೆಯಲ್ಲಿ ನಾಣ್ಯರೂಪದಲ್ಲಿ 4,13,684 ರೂಪಾಯಿ ದೊರೆತಿದೆ. 320 ಗ್ರಾಂ ಚಿನ್ನ ಮತ್ತು 960 ಗ್ರಾಂ ಬೆಳ್ಳಿ ಪದಾರ್ಥ ಕೂಡ ಪತ್ತೆಯಾಗಿದ್ದು, ಒಟ್ಟು 2,07,64,133 ರೂ. ಸಂಗ್ರಹವಾಗಿದೆ. ಅದರಲ್ಲಿಯೂ ಹುಂಡಿಯಲ್ಲಿ 500 ರೂ. ಮುಖ ಬೆಲೆಯ ಹೆಚ್ಚಿನ ನೋಟುಗಳು ಸಿಕ್ಕಿದೆ ಎಂದು ಚಾಮುಂಡಿ ಬೆಟ್ಟ ಆಡಳಿತ ಮಂಡಳಿ ತಿಳಿಸಿದೆ.

ಪ್ರಧಾನಿ ಕಾರ್ಯಕ್ರಮ ಭದ್ರತೆಗೆ ನಿಯೋಜಿಸಿದ್ದ PSI ಸುದರ್ಶನ್ ಶೆಟ್ಟಿ ಆತ್ಮಹತ್ಯೆ

ಬೆಂಗಳೂರು ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆ ಪಿಎಸ್‌ಐ ಸುದರ್ಶನ್ ಶೆಟ್ಟಿ (51) ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ಹನುಮಂತನಗರ ಠಾಣೆ ಪಿಎಸ್‌ಐ ಆಗಿದ್ದ ಸುದರ್ಶನ್‌ ಅವರನ್ನು ಕೆಲ ತಿಂಗಳ ಹಿಂದೆಯಷ್ಟೇ ನಿಯೋಜನೆ ಮೇರೆಗೆ ಸೈಬರ್ ಕ್ರೈಂ ಠಾಣೆಗೆ ವರ್ಗಾಯಿಸಲಾಗಿತ್ತು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಭದ್ರತೆಗಾಗಿ ಸುದರ್ಶನ್ ಅವರನ್ನು ನಿಯೋಜಿಸಲಾಗಿತ್ತು. ತಮಗೆ ಹುಷಾರಿಲ್ಲವೆಂದು ಹೇಳಿ ಕರ್ತವ್ಯಕ್ಕೆ ಗೈರಾಗಿದ್ದ ಅವರು, ಯಶವಂತಪುರದಲ್ಲಿರುವ ಮನೆಯಲ್ಲಿ ಉಳಿದುಕೊಂಡಿದ್ದರು.’

ನಿನ್ನೆ ವಿಶ್ವ ಅಪ್ಪಂದಿರ ದಿನವಾಗಿದ್ದರಿಂದ, ಸುದರ್ಶನ್ ಅವರಿಗೆ ಮಗ ಶುಭಾಶಯ ತಿಳಿಸಿದ್ದರು. ಧನ್ಯವಾದ ತಿಳಿಸಿ ಮಗನ ಜೊತೆ ಕಾಲ ಕಳೆದಿದ್ದ ಸುದರ್ಶನ್, ಕೊಠಡಿಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಮಲಗಲು ಹೋಗಿರಬಹುದೆಂದು ಮಗ ಸುಮ್ಮನಾಗಿದ್ದ. ಕೆಲ ಹೊತ್ತಿನ ನಂತರ ಹೊರಗೆ ಬಂದಿರಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

25 ವರ್ಷವಾದರೂ ಕನ್ಯೆ ಸಿಗದ ಕಾರಣ ರೈತ ಆತ್ಮಹತ್ಯೆ

ಮದುವೆಯಾಗಲು ಕನ್ಯೆ ಸಿಗದ ಕಾರಣ ಮರಕ್ಕೆ ನೇಣು ಬಿಗಿದುಕೊಂಡು ಯುವ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ ಜರುಗಿದೆ

ಯಲ್ಲಾಪುರದ ಕರಗುಪ್ಪಿ ಬಾಳಪ್ಪ ಪಾಟೀಲ್ ಅವರಿಗೆ ಮೂರು ಜನ ಮಕ್ಕಳು, ಮದುವೆ ವಯಸ್ಸಿಗೆ ಬಂದ ಕಾರಣ ಹೆಣ್ಣು ನೋಡಲು ತಂದೆ ತಾಯಿ ಶುರುಮಾಡಿದ್ದರು.

ಹೋದ ಕಡೆಯಲ್ಲೆ ಸರ್ಕಾರಿ ನೌಕರಿ, ಶಾಲೆ ಕಲಿತು ಉದ್ಯೋಗದಲ್ಲಿದ್ರೆ ಮಾತ್ರ ಹೆಣ್ಣು ಕೊಡುತ್ತೇವೆ ಅಂತ ಹೇಳಿದ್ದರಂತೆ.

ಬಾಳಪ್ಪ ಪಾಟೀಲ್ ಕೊನೆ ಮಗ 25 ವರ್ಷದ ರಮೇಶ್ ಪಾಟೀಲ್ ತನ್ನ ಅಣ್ಣಂದಿರಿಗೂ ಹಲವು ವರ್ಷಗಳಿಂದ ಕನ್ಯಾ ಹುಡುಕುತ್ತಿದ್ದರು. ಯಾರು ಹೆಣ್ಣು ಕೊಡದ ಪರಿಣಾಮ ಬೇಸತ್ತಿರುವ ರಮೇಶ್ ಮದುವೆ ಆಗಲಿಲ್ಲ ಅಂತ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇದರಿಂದಲೇ ತಮ್ಮ ತೋಟದ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಗನನ್ನು ಕಳೆದುಕೊಂಡ ತಂದೆ-ತಾಯಿ ದುಃಖಿತರಾಗಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!