ಮದುವೆಯಾಗಲು ಕನ್ಯೆ ಸಿಗದ ಕಾರಣ ಮರಕ್ಕೆ ನೇಣು ಬಿಗಿದುಕೊಂಡು ಯುವ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ ಜರುಗಿದೆ

ಇದನ್ನು ಓದಿ –ಮೂಡಿಗೆರೆ – ಗುಬ್ಬಿ ಬಳಿಎರಡು ಪ್ರತ್ಯೇಕ ರಸ್ತೆ ಅಪಘಾತ : ನಾಲ್ವರು ಸಾವು
ಯಲ್ಲಾಪುರದ ಕರಗುಪ್ಪಿ ಬಾಳಪ್ಪ ಪಾಟೀಲ್ ಅವರಿಗೆ ಮೂರು ಜನ ಮಕ್ಕಳು, ಮದುವೆ ವಯಸ್ಸಿಗೆ ಬಂದ ಕಾರಣ ಹೆಣ್ಣು ನೋಡಲು ತಂದೆ ತಾಯಿ ಶುರುಮಾಡಿದ್ದರು.

ಹೋದ ಕಡೆಯಲ್ಲೆ ಸರ್ಕಾರಿ ನೌಕರಿ, ಶಾಲೆ ಕಲಿತು ಉದ್ಯೋಗದಲ್ಲಿದ್ರೆ ಮಾತ್ರ ಹೆಣ್ಣು ಕೊಡುತ್ತೇವೆ ಅಂತ ಹೇಳಿದ್ದರಂತೆ.
ಬಾಳಪ್ಪ ಪಾಟೀಲ್ ಕೊನೆ ಮಗ 25 ವರ್ಷದ ರಮೇಶ್ ಪಾಟೀಲ್ ತನ್ನ ಅಣ್ಣಂದಿರಿಗೂ ಹಲವು ವರ್ಷಗಳಿಂದ ಕನ್ಯಾ ಹುಡುಕುತ್ತಿದ್ದರು. ಯಾರು ಹೆಣ್ಣು ಕೊಡದ ಪರಿಣಾಮ ಬೇಸತ್ತಿರುವ ರಮೇಶ್ ಮದುವೆ ಆಗಲಿಲ್ಲ ಅಂತ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇದರಿಂದಲೇ ತಮ್ಮ ತೋಟದ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಗನನ್ನು ಕಳೆದುಕೊಂಡ ತಂದೆ-ತಾಯಿ ದುಃಖಿತರಾಗಿದ್ದಾರೆ.
- ರಾಜ್ಯ ವಿಧಾನಪರಿಷತ್ 3 ಸ್ಥಾನಗಳಿಗೆ ಜೂ.30ರಂದು ಉಪ ಚುನಾವಣೆ ಪ್ರಕಟ
- ಹೇಮಂತ್ ನಿಂಬಾಳ್ಕರ್ ವಾರ್ತಾ ಇಲಾಖೆ ಕಮೀಷನರ್ ನೇಮಕ
- ರಾಜ್ಯ ಸರ್ಕಾರದಿಂದ 11 ಐಎಎಸ್ ಅಧಿಕಾರಿ’ಗಳ ವರ್ಗಾವಣೆ
- ಬಾಡಿಗೆದಾರರಿಗೂ 200 ಯುನಿಟ್ ಉಚಿತ ವಿದ್ಯುತ್
- ಪತ್ರಕರ್ತ ಹೊನಕೆರೆ ನಂಜಂಡೇಗೌಡರಿಗೆ ಖಾದ್ರಿ ಶಾಮಣ್ಣ ಪ್ರಶಸ್ತಿ ಪ್ರಕಟ
- ಜುಲೈ 3 ರಿಂದ ರಾಜ್ಯ ಬಜೆಟ್ ಅಧಿವೇಶನ: ಜು. 7 ರಂದು ಬಜೆಟ್ ಮಂಡನೆ
More Stories
ರಾಜ್ಯ ವಿಧಾನಪರಿಷತ್ 3 ಸ್ಥಾನಗಳಿಗೆ ಜೂ.30ರಂದು ಉಪ ಚುನಾವಣೆ ಪ್ರಕಟ
ಹೇಮಂತ್ ನಿಂಬಾಳ್ಕರ್ ವಾರ್ತಾ ಇಲಾಖೆ ಕಮೀಷನರ್ ನೇಮಕ
ರಾಜ್ಯ ಸರ್ಕಾರದಿಂದ 11 ಐಎಎಸ್ ಅಧಿಕಾರಿ’ಗಳ ವರ್ಗಾವಣೆ