December 19, 2024

Newsnap Kannada

The World at your finger tips!

politics,BJP,congress

Siddaramaiah was shocked to see the internal survey report of Kolar ಕೋಲಾರದ ಆಂತರಿಕ ಸಮೀಕ್ಷಾ ವರದಿ ಕಂಡು ಗರಬಡಿದ ಸಿದ್ದರಾಮಯ್ಯ

ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಇಲ್ಲ – ಸಿದ್ದರಾಮಯ್ಯ

Spread the love

ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮದ್ದೂರಿನಲ್ಲಿ ಸ್ಪಷ್ಟಪಡಿಸಿದರು.

ಚಾಮುಂಡೇಶ್ವರಿಯಲ್ಲಿ ಮತ್ತೆ ಸ್ಪರ್ಧೆ ಮಾಡುತ್ತಾರೆ ಎನ್ನುವ ಸಂಗತಿ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ನಾನು ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಶಾಸಕ ಜಿ.ಟಿ.ದೇವೇಗೌಡ ಜೊತೆ ಈಗಾಗಲೇ ಮಾತನಾಡಿದ್ದೇವೆ. ಕಾಂಗ್ರೆಸ್‌ಗೆ ಅವರು ಬರುವುದು ಇನ್ನೂ ತೀರ್ಮಾನವಾಗಿಲ್ಲ ಎಂದರು.

ನನಗೆ ನಾಲ್ಕೈದು ಕ್ಷೇತ್ರದ ಕಡೆಯಿಂದ ಸ್ಪರ್ಧೆ ಮಾಡಲು ಆಹ್ವಾನ ಬಂದಿದೆ. ನಾನು ಇನ್ನೂ ಎಲ್ಲಿ ನಿಲ್ಲಬೇಕೆಂದು ನಿರ್ಧಾರ ಮಾಡಿಲ್ಲ. ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಲ್ಲಲ್ಲ ಅಂತಾ ಪುನರ್​​ ಉಚ್ಚರಿಸಿದ್ದಾರೆ. ಈ ಮೂಲಕ ಜಿ.ಟಿ.ದೇವೇಗೌಡರಿಗಾಗಿ ಕ್ಷೇತ್ರ ತ್ಯಾಗ ಮಾಡಲು ಸಿದ್ದರಾಮಯ್ಯ ಮುಂದಾಗಿರುವ ಬಗ್ಗೆ ಸುಳಿವು ಕೊಟ್ಟರು.

Copyright © All rights reserved Newsnap | Newsever by AF themes.
error: Content is protected !!