December 19, 2024

Newsnap Kannada

The World at your finger tips!

crime 3

ನವವಿವಾಹಿತೆ ಅನುಮಾನಸ್ಪದ ಸಾವು – ವರದಕ್ಷಿಣೆ ಕಿರುಕುಳ ಆರೋಪ

Spread the love

ನವವಿವಾಹಿತೆ ಟೆಕ್ಕಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದ ಪ್ರಶಾಂತ ನಗರದಲ್ಲಿ ಜರುಗಿದೆ

ಮನೆಯ ಮೂರನೇ ಅಂತಸ್ತಿನ ಸ್ಟೋರ್ ರೂಂನಲ್ಲಿ ನವ್ಯ(23) ಫ್ಯಾನಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ

ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಹಾಗೂ ತಾಲೂಕು ದಂಡಾಧಿಕಾರಿ ಗಣಪತಿ ಶಾಸ್ತ್ರೀ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.

ಮೃತಳ ಸಂಬಂಧಿಕರು ಗಂಡ ಚೇತನ್ ಹಾಗೂ ಅತ್ತೆ ಮಾವನ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿದ್ದಾರೆ.

ತಮ್ಮ ಮಗಳ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿ ತದನಂತರ ನೇಣು ಹಾಕಿದ್ದಾರೆ ಅಂತ ಆರೋಪಿಸಿದ್ದಾರೆ.

ಮತ್ತೊಂದೆಡೆ ಮಗಳನ್ನು ಕಳೆದುಕೊಂಡ ದುಃಖದ ಮಡುವಿನಲ್ಲಿರುವ ಮೃತಳ ಸಂಬಂಧಿಕರು ಗಂಡ ಚೇತನ್ ಮೇಲೆ ಮುಗಿ ಬಿದ್ದು ಹಲ್ಲೆ ನಡೆಸಿದ್ದಾರೆ.

ಗಂಡನ ಕಡೆಯವರು ವರದಕ್ಷಿಣೆ ಕಿರುಕುಳ ಇಲ್ಲ. ಕೆಲಸದ ಒತ್ತಡ, ಮಾನಸಿಕ ಒತ್ತಡಕ್ಕೆ ನವ್ಯ ಗುರಿಯಾಗಿದ್ದಳು, ಗಂಡ ಹೆಂಡತಿ ಮಧ್ಯೆ ಕಳೆದ 6 ತಿಂಗಳಿಂದ ಒಂದಷ್ಟು ಕಲಹಗಳು ಏರ್ಪಟ್ಟಿದ್ದವು ಹೊಂದಾಣಿಕೆ ಇರಲಿಲ್ಲ. ಹೀಗಾಗಿ ನವ್ಯ ಸಾಕಷ್ಟು ಮನನೊಂದಿದ್ದಳು ಅಂತ ಹೇಳುತ್ತಿದ್ದಾರೆ.

ಚಿಕ್ಕಬಳ್ಳಾಪುರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಕ್ರೇನ್‍ನಲ್ಲಿ ಸಿಲುಕಿರುವ 10 ಮಂದಿ ಕರ್ನಾಟಕ ವಿದ್ಯಾರ್ಥಿಗಳು!

ರಷ್ಯಾ ಮತ್ತು ಉಕ್ರೇನ್ ನಡುವೆ ದಾಳಿ ಅರಂಭವಾಗಿದೆ ಕರ್ನಾಟಕದ 10 ಮಂದಿ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದಾರೆ.

ಉಕ್ರೇನ್ ನಲ್ಲಿ ಬೆಂಗಳೂರು ವಿದ್ಯಾರ್ಥಿಗಳ ಪೋಷಕರು ಆತಂಕದಲ್ಲಿ ಇದ್ದಾರೆ. ಈ ದಾಳಿಯಲ್ಲಿ ಸಿಕ್ಕಿಹಾಕಿಕೊಂಡಿರುವ ವಿದ್ಯಾರ್ಥಿಗಳ ಪೋಷಕರು ವಾಟ್ಸ್ ಆ್ಯಪ್ ವೀಡಿಯೋ ಕಾಲ್ ಮೂಲಕ ಸಂಪರ್ಕದಲ್ಲಿ ಇದ್ದಾರೆ.

ಬೆಳಗ್ಗೆಯಿಂದ ಬಾಂಬ್ ಬ್ಲಾಸ್ಟ್ ಸದ್ದು ಕೇಳಿಬರುತ್ತಿದೆ ನಾವು ಸುರಕ್ಷಿತವಾಗಿರುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಪ್ರಸ್ತುತ ಭಾರತಕ್ಕೆ ಬರಲು ವಿಮಾನ ಸಿಗದೇ ಇರುವುದರಿಂದ ವಾಪಸಾಗಲು ಪರದಾಡುತ್ತಿದ್ದಾರೆ. ಸುದ್ದಿ ತಿಳಿದ ಅಧಿಕಾರಿಗಳು ವಿದ್ಯಾರ್ಥಿಗಳ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.

ಸಿಎಂ ಬೊಮ್ಮಾಯಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ, ವಿದ್ಯಾರ್ಥಿಗಳ ಜೊತೆ ವಿದೇಶಾಂಗ ಕಾರ್ಯದರ್ಶಿ ನಿರಂತರ ಸಂಪರ್ಕದಲ್ಲಿದ್ದಾರೆ. ಕರ್ನಾಟಕದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿರಿಸುತ್ತೇವೆ. ವಿದ್ಯಾರ್ಥಿಗಳ ಕುಟುಂಬದವರಿಗೆ ಮಾಹಿತಿ ನೀಡಲಾಗುವುದು ಎಂದು ಭರವಸೆಯನ್ನು ಕೊಟ್ಟಿದ್ದಾರೆ.

ವಿದ್ಯಾರ್ಥಿಗಳು ಏರ್ ಪೋರ್ಟ್ ತನಕ ಬಸ್ ನಲ್ಲಿ ಬಂದಿದ್ದರು. ಏರ್ ಪೋರ್ಟ್‍ಗೆ ಬಂದ ಮೇಲೆ ಸಮಸ್ಯೆ ಕಾಣಿಸಿಕೊಂಡಿದ್ದು, ವಿಮಾನಗಳು ಹಾರಾಟ ಮಾಡಿಲ್ಲ. ಈ ಹಿನ್ನೆಲೆ ವಿದ್ಯಾರ್ಥಿಗಳು ಬಸ್ ನಲ್ಲೇ ಸಿಕ್ಕಿಕೊಂಡಿದ್ದಾರೆ. ಅವರಿಗೆ ಈಗ ಎಲ್ಲಿಗೆ ಬರಬೇಕು, ಯಾವುದು ಸುರಕ್ಷಿತ ಸ್ಥಳ ಎಂಬ ಮಾಹಿತಿ ನೀಡುತ್ತಿದ್ದೇವೆ ಎಂದರು

Copyright © All rights reserved Newsnap | Newsever by AF themes.
error: Content is protected !!