February 21, 2026

Newsnap Kannada

The World at your finger tips!

mandya new sp

ಮಂಡ್ಯಕ್ಕೆ ನೂತನ ಎಸ್​​​ಪಿ ಆಗಮನ – ಎನ್.ಯತೀಶ್​​ ಅಧಿಕಾರ ಸ್ವೀಕಾರ

Spread the love

ಮಂಡ್ಯ ನೂತನ ಎಸ್​ಪಿಯಾಗಿ ಎನ್.ಯತೀಶ್ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಈ ಹಿಂದೆ ಎಸ್​ಪಿಯಾಗಿ ನೇಮಕಗೊಂಡಿದ್ದ ಸುಮನ್ ಡಿ ಪನ್ನೇಕರ್ ಗೆ ಚಾರ್ಜ್ ತೆಗೆದುಕೊಳ್ಳದಂತೆ ಸೂಚನೆ ನೀಡಲಾಗಿತ್ತು. ಪರಿಣಾಮ ಕಳೆದ ಹತ್ತು ದಿನದಿಂದಲೂ ಎಸ್​​ಪಿ ಸ್ಥಾನ ಖಾಲಿಯಾಗಿಯೇ ಉಳಿದಿತ್ತು. ಇಂದು ಮಂಡ್ಯ ಎಸ್​ಪಿ ಕಚೇರಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿದ್ದಾರೆ.

ಎನ್.ಯತೀಶ್ ಅವರು ಈ ಹಿಂದೆ ಗದಗ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಅಧಿಕಾರ ಸ್ವೀಕರಿಸಿದ ಬಳಿಕ ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನಾಚರಣೆ, ರಾಷ್ಟ್ರೀಯ ಏಕತಾ ದಿನ ಹಿನ್ನಲೆ ಪೊಲೀಸ್ ಅಧಿಕಾರಿಗಳಿಗೆ ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಇನ್ನು ಇದೇ ತಿಂಗಳ 20ರಂದು ನೇಮಕವಾಗಿದ್ದ ಸುಮನ್ ಡಿ ಪನ್ನೇಕರ್ ಅವರನ್ನು ಉತ್ತರ ಕನ್ನಡ ಎಸ್​​ಪಿಯಾಗಿ ನೇಮಕವಾಗಿದ್ದಾರೆ.

error: Content is protected !!