ಶೀಘ್ರವೆ ನಮ್ಮ ಮೆಟ್ರೋ ಗೆ ಬರಲಿದೆ ಹೊಸ QR ಕೋಡ್ ಆ್ಯಪ್‌

Team Newsnap
1 Min Read

ಬೆಂಗಳೂರು : ಸುರಕ್ಷಿತ ಪ್ರಯಾಣದೊಂದಿಗೆ ಸಿಲಿಕಾನ್ ಸಿಟಿ ಜನರಿಗೆ ಬಿಎಂಆರ್‌ಸಿಎಲ್ ಮತ್ತಷ್ಟು ಅನುಕೂಲ ಮಾಡಿಕೊಡಲು ಮುಂದಾಗಿದೆ.

ಈಗಾಗಲೇ ನಮ್ಮ ಮೆಟ್ರೋ ಕ್ಯೂಆರ್ ಕೋಡ್ ವ್ಯವಸ್ಥೆಯನ್ನ ಹೊಂದಿದ್ದು,ಕ್ಯೂಆರ್ ಕೋಡ್ ಎಲ್ಲ ಆ್ಯಪ್‌ಗಳಿಗೂ ಸಹಕರಿಸಲ್ಲ. ಪೇಟಿಎಂ, ವಾಟ್ಸಪ್, ಯಾತ್ರಾ ಆ್ಯಪ್‌ಗಳಿಗೆ ಮಾತ್ರ ಕ್ಯೂಆರ್ ಕೋಡ್ (QR Code App) ಸೌಲಭ್ಯವಿದೆ.

ಬಿಎಂಆರ್‌ಸಿಎಲ್ ಇದನ್ನ ಯುನಿವರ್ಸೆಲ್ ವೇದಿಕೆಗೆ ತರಲು ನಿರ್ಧರಿಸಿದ್ದು, ಹೊಸ ಆ್ಯಪ್‌ ವ್ಯವಸ್ಥೆಯನ್ನ ಅನುಷ್ಠಾನಗೊಳಿಸಿದೆ.

ಈಗಾಗಲೇ ನಮ್ಮ ಮೆಟ್ರೋ ಪ್ರಕಿಯೆ ಶುರು ಮಾಡಿದ್ದು,ಇದು `ಭಾರತ್ ಬಿಲ್ ಪೇ ಸಿಸ್ಟಮ್’ ಮಾದರಿಯ ಆ್ಯಪ್‌ ಆಗಲಿದೆ.

ಈ ಆ್ಯಪ್‌ ಮೂಲಕ ಮೆಟ್ರೋ ಟಿಕೆಟ್ ತೆಗೆದು ಕೊಳ್ಳುವುದುಮಾತ್ರವಲ್ಲ, ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಸಹ ಮಾಡಿಕೊಳ್ಳಬಹುದು.ಜೂನ್ 7 ರಿಂದ 9 ರವರೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಎನ್.ಚಲುವರಾಯಸ್ವಾಮಿ.

ಇದೇ ಆ್ಯಪ್‌ ಮೂಲಕ ಆಟೋ ಕ್ಯಾಬ್ ಕೂಡ ಬುಕ್ ಮಾಡಿಕೊಳ್ಳಬಹುದಾಗಿದೆ ಮತ್ತು ಆ್ಯಪ್‌ನಲ್ಲೇ ಮೆಟ್ರೋ ರೈಲುಗಳ ಮಾಹಿತಿ ನೋಡುವುದರ ಜೊತೆಗೆ ಆನ್‌ಲೈನ್ ಪೇಮೆಂಟ್ ಸಹ ಮಾಡಬಹುದು.

Share This Article
Leave a comment