ನೀಟ್ ಪರೀಕ್ಷೆ: ವಿದ್ಯಾರ್ಥಿನಿಯರ ಒಳ ಉಡುಪು ಬಿಚ್ಚಿಸಿ ಅವಮಾನ: ಮೇಲ್ವಿಚಾರಕರ ವಿರುದ್ದ ದೂರು

Team Newsnap
1 Min Read

ಕೇರಳದ ಕೊಲ್ಲಂನಲ್ಲಿ ನಿನ್ನೆ ನಡೆದ ನೀಟ್ ಪರೀಕ್ಷೆ ವೇಳೆ ಸುಮಾರು 100ಕ್ಕೂ ಹೆಚ್ಚು ಮಹಿಳಾ ಪರೀಕ್ಷಾ ಅಭ್ಯರ್ಥಿಗಳ ಒಳ ಉಡುಪುಗಳನ್ನ ಬಿಚ್ಚಿಸಿ ಪರೀಕ್ಷಾ ಮೇಲ್ವಿಚಾರಕರು ಹೀನಾಯವಾಗಿ ಅವಮಾನಿಸಲಾಗಿದೆ.

ಈ ಕುರಿತು ವಿದ್ಯಾರ್ಥಿನಿಯೊಬ್ಬರ ತಂದೆ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.ಇದನ್ನು ಓದಿ –ಎಸಿಬಿ ವಿರುದ್ಧ ನ್ಯಾ. ಸಂದೇಶ್ ಮಾಡಿದ್ದ ಆರೋಪಕ್ಕೆ ಸುಪ್ರೀಂ ತಡೆ

ಪರೀಕ್ಷಾ ಕೇಂದ್ರದ ಒಳಗೆ ಅಭ್ಯರ್ಥಿಗಳನ್ನು ಬಿಡುವ ವೇಳೆ ಮೆಟಲ್ ಡೆಟೆಕ್ಟರ್​ನಲ್ಲಿ ನಲ್ಲಿ ಸದ್ದು ಉಂಟಾಗಿದೆ. ಹೀಗಾಗಿ ಮಹಿಳಾ ಅಭ್ಯರ್ಥಿಗಳ ಒಳ ಉಡುಪುಗಳನ್ನ ಬಿಚ್ಚಿಸಿ ಅವಮಾನಿಸಿದ್ದಾರೆ.

ಅಭ್ಯರ್ಥಿಗಳು NEET ಪರೀಕ್ಷೆಯ ಡ್ರೆಸ್​ಕೋಡ್ ಪ್ರಕಾರವೇ ಬಂದರೂ ಕೂಡ ಪರೀಕ್ಷಾ ಕೊಠಡಿಗೆ ಬಿಡದೆ ಅವಮಾನಿಸಿದ್ದಾರೆ. ಬಿಚ್ಚಿಸಿದ ಬಟ್ಟೆಗಳನ್ನು ಸಾಮೂಹಿಕವಾಗಿ ಸ್ಟೋರ್​ ರೂಮಿನಲ್ಲಿ ಅವುಗಳನ್ನು ಇಟ್ಟು ಪರೀಕ್ಷೆ ಬರೆಸಿದ್ದಾರೆ. ಅವರಲ್ಲಿ ಕೆಲವು ವಿದ್ಯಾರ್ಥಿಗಳು, ಅವಮಾನಕ್ಕೆ ಒಳಗಾಗಿ ಪರೀಕ್ಷೆಯನ್ನು ಬರೆಯಲಿಲ್ಲ ಎಂದು ವರದಿಯಾಗಿದೆ.

ಇದೇ ರೀತಿಯ ತೊಂದರೆಯನ್ನು ಸುಮಾರು 100 ಮಹಿಳಾ ಅಭ್ಯರ್ಥಿಗಳು ಅನುಭವಿಸಿದ್ದಾರೆ. ಈ ಸಂಬಂಧ ಕೊಟ್ಟರಕ್ಕೆ ಡಿವೈಎಸ್​ಪಿಗೆ ಪೋಷಕರೊಬ್ಬರು ದೂರು ನೀಡಿದ್ದಾರೆ. ಪರೀಕ್ಷಾ ನಿಯಮಗಳ ಪ್ರಕಾರವೇ ಹೋಗಿದ್ದರೂ, ನನ್ನ ಮಗಳನ್ನು ಅವಮಾನಿಸಲಾಗಿದೆ. ಮತ್ತೆ ಯಾವತ್ತೂ ಮಗಳು ನೀಟ್ ಪರೀಕ್ಷೆ ಬರೆಯಲ್ಲ ಎಂದು ಹೇಳಿದ್ದಾಳೆ. ಕೂಡಲೇ ಪರೀಕ್ಷಾ ಮೇಲ್ವಿಚಾರಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ನಿನ್ನೆ. ದೇಶದಲ್ಲಿ 18,72,329 ಅಭ್ಯರ್ಥಿಗಳು ನೀಟ್ ಪರೀಕ್ಷೆಯನ್ನ ಬರೆದಿದ್ದಾರೆ. ಅವರಲ್ಲಿ 10.64 ಲಕ್ಷ ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದಾರೆ. ದೇಶದ 497 ನಗರಗಳ 3570 ಸೆಂಟರ್​ಗಳಲ್ಲಿ ಪರೀಕ್ಷೆ ಬರೆಯಲಾಗಿದೆ. ಜೊತೆಗೆ ದೇಶದ ಹೊರಗೆ 14 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಾಗಿದೆ.

Share This Article
Leave a comment