ಮಡಿಕೇರಿ ಖಜಾನೆ ಇಲಾಖೆ ಗುಮಾಸ್ತ 5 ಸಾವಿರ ರು ಲಂಚ ಸ್ವೀಕರಿಸುವ ವೇಳೆ ACB ಬಲೆಗೆ

Team Newsnap
1 Min Read
Madikeri treasury department clerk caught in ACB trap while accepting bribe ಮಡಿಕೇರಿ ಖಜಾನೆ ಇಲಾಖೆ ಗುಮಾಸ್ತ 5 ಸಾವಿರ ರು ಲಂಚ ಸ್ವೀಕರಿಸುವ ವೇಳೆ ACB ಬಲೆಗೆ #Thenewsnap #ACB #Latestnews #madikeri #Briibe #Government_of_Karnataka #India #Mandya_News #mysuru

ಮಡಿಕೇರಿ ಖಜಾನೆ ಪ್ರಥಮ ದರ್ಜೆ ಸಹಾಯಕ ಗುಮಾಸ್ತನೊಬ್ಬ5 ಸಾವಿರ ರು ಲಂಚ ಪಡೆಯವ ವೇಳೆ ಸೋಮವಾರ ACB ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.

ಕೊಡಗು ಜಿಲ್ಲೆಯ ಕುಶಾಲನಗರ ಸರ್ವೇ ಅಧೀಕ್ಷಕರು ತಮ್ಮ ನಿವೃತ್ತಿ ವೇತನ ಪಡೆಯುವ ಸಂಬಂಧ ಮಡಿಕೇರಿಯ ಜಿಲ್ಲಾ ಖಜಾನೆ ಪ್ರಥಮ ದರ್ಜೆ ಸಹಾಯಕರೊಬ್ಬರು 5000 ಲಂಚ ಪಡೆಯುವಾಗ ACB ಬಲೆಗೆ ಬಿದ್ದಿದ್ದಾರೆ.ಇದನ್ನು ಓದಿ –ನೀಟ್ ಪರೀಕ್ಷೆ: ವಿದ್ಯಾರ್ಥಿನಿಯರ ಒಳ ಉಡುಪು ಬಿಚ್ಚಿಸಿ ಅವಮಾನ: ಮೇಲ್ವಿಚಾರಕರ ವಿರುದ್ದ ದೂರು

ನಿವೃತ್ತಿ ವೇತನದ ಫೈಲ್ಅನ್ನು ಮುಂದಕ್ಕೆ ಕಳಿಸಲು ಖಜಾನೆ ಇಲಾಖೆಯ FDA ಗುಮಾಸ್ತ M.A ರವಿಕುಮಾರ್ 7000 ರು ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು,ಆದರೆ ನಿವೃತ್ತ ಅಧಿಕಾರಿಗಳು FDA ಕೋರಿಕೆ ಮೇರೆಗೆ ಮೊದಲ ಕಂತು 5000 ಲಂಚ ನೀಡುವಾಗ ACB ಅಧಿಕಾರಿಗಳ ಕೈಗೆ ಸಿಕ್ಕಾಕಿಕೊಂಡರು

ಮೈಸೂರು ವಿಭಾಗದ ACB ಎಸ್ಪಿ ಸಜಿತ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು. ಗುಮಾಸ್ತ ರವಿಕುಮಾರ್ ನನ್ನು ಬಂಧಿಸಿ, ಲಂಚದ ಹಣವನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Share This Article
Leave a comment