ಮಂಡ್ಯದಲ್ಲಿ ಪಾಂಡಿಚೇರಿ ರಾಷ್ಟ್ರಮಟ್ಟದ ಸೈಕ್ಲಿಂಗ್ ಕ್ರೀಡಾಪಟು ನಾಲೆಗೆ ಈಜಲು ಹೋಗಿ ಸಾವು

Team Newsnap
1 Min Read

ರಾಷ್ಟ್ರಮಟ್ಟದ ಸೈಕ್ಲಿಂಗ್ ಕ್ರೀಡಾಪಟು ಒಬ್ಬನು ನಾಲೆಗೆ ಈಜಲು ಹೋಗಿ ಮೃತಪಟ್ಟಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಅಕ್ಕಿ ಹೆಬ್ಬಾಳು ಬಳಿ ಜರುಗಿದೆ. ಆಲ್​​​ಹರ್ಶ್​​​ (17) ಮೃತ ಕ್ರೀಡಾಪಟು. ಮೃತ ಕ್ರೀಡಾಪಟು ಪಾಂಡಿಚೇರಿ ಮೂಲದ ನಿವಾಸಿ.

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ರಾಷ್ಟ್ರ ಮಟ್ಟದ ಸೈಕಲ್ ಪೋಲೋ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಈ ಕ್ರೀಡಾಕೂಟಕ್ಕೆ ರಾಜ್ಯ, ಹೊರ ರಾಜ್ಯದಿಂದ ಸೈಕ್ಲಿಂಗ್ ಕ್ರೀಡಾಪಟುಗಳು ಆಗಮಿಸಿದ್ದರು ಎನ್ನಲಾಗಿದೆ.ಕ್ರೀಡಾಕೂಟದ ಅಣತಿ ದೂರದ ನಾಲೆ ಬಳಿ ಈಜಲು ಹೋಗಿದ್ದ ವೇಳೆ ನಾಲೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿ ಶೋಧ ಕಾರ್ಯ‌ ನಡೆಸಿ ನಾಲೆಯಿಂದ ಕ್ರೀಡಾಪಟು ಆಲ್​​ಹರ್ಶ್​ ಮೃತದೇಹವನ್ನು ಹೊರತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್​​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಘಟನೆ ಕುರಿತಂತೆ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment