ಕಮಲಾ ಹ್ಯಾರಿಸ್‌ಗೆ “ವಿಶೇಷ’ ಉಡುಗೊರೆ ನೀಡಿದ ಮೋದಿ

Team Newsnap
1 Min Read

ನಾಲ್ಕು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ ಮೂಲದವರಾದ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ಗಮನ ಸೆಳೆಯುವ, ಯಾರೂ ನಿರೀಕ್ಷಿಸದ ಉಡುಗೊರೆ ನೀಡಿದ್ದಾರೆ.


ಐದು ದಶಕಗಳ ಹಳೆಯ ಸರ್ಕಾರಿ ಅಧಿಸೂಚನೆ (ನೋಟಿಫಿಕೇಷನ್) ಯನ್ನು ಹ್ಯಾರಿಸ್‌ಗೆ ಪ್ರಧಾನಿ ಕೊಟ್ಟಿದ್ದಾರೆ. ಇದರಲ್ಲಿ ವಿಶೇಷ ಏನಿದೆ ಎಂದು ನೋಡಿದರೆ, ಕಮಲಾ ಅವರ ತಾತ ಪಿ.ವಿ.ಗೋಪಾಲನ್ ಹೆಸರು ಇರುವುದು. ಸರ್ಕಾರಿ ಅಧಿಕಾರಿಯಾಗಿದ್ದ ಗೋಪಾಲನ್ ನಾನಾ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. 1966 ರ ಈ ಸರ್ಕಾರಿ ಅಧಿಸೂಚನೆಗೆ ಕಟ್ಟಿಗೆಯ ಫ್ರೇಮ್ ಹಾಕಿಸಿ ನೀಡಲಾಗಿದೆ.


ಅಲ್ಲದೆ ತಮ್ಮ ಕ್ಷೇತ್ರ ಉತ್ತರ ಪ್ರದೇಶದ ವಾರಾಣಸಿಯಲ್ಲಿ ವಿಶೇಷವಾಗಿ ತಯಾರಿಸಲಾದ ಚಸ್ ಬೋರ್ಡ್ ಅನ್ನು ನಮೋ ಅಮೆರಿಕದ ಉಪಾಧ್ಯಕ್ಷೆಗೆ ನೀಡಿದರು. ಈ ಬೋರ್ಡ್ ಅತ್ಯಾಕರ್ಷಕ ಕರಕುಶಲತೆಯಿಂದ ತಯಾರಿಸಿದ, ಗುಲಾಬಿ ಮೀನಕರಿ ಪೇಂಟಿಂಗ್ ಒಳಗೊಂಡಿದೆ. ಹೊಳೆಯುತ್ತಿರುವ ಬಣ್ಣಗಳು ಅತ್ಯಂತ ಹಳೆಯ ನಗರಗಳಲ್ಲೊಂದಾದ ಕಾಶಿಯ ಚೈತನ್ಯ ಪ್ರತಿಬಿಂಬಿಸುತ್ತದೆ ಎಂದು ವಿವರಿಸಲಾಗಿದೆ.


ಗುರುವಾರ ವಾಷಿಂಗ್ಟನ್‌ನಲ್ಲಿ ನಡೆದ ಈ ಇಬ್ಬರು ಮುಖಂಡರ ಭೇಟಿ ವೇಳೆ ವಿಶ್ವವನ್ನು ಕಾಡುತ್ತಿರುವ ಕೊರೊನಾ ಪಿಡುಗು, ಭಯೋತ್ಪಾದನೆ ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಯಿತು. ಕಳೆದ ಜನವರಿಯಲ್ಲಿ ಅಮೆರಿಕದ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಅಧಿಕಾರವಹಿಸಿಕೊಂಡರು.

Share This Article
Leave a comment