ತುಲಾ ಸಂಕ್ರಮಣ: ಕೊಡಗಿನ ಮೂಲ ನಿವಾಸಿಗಳಿಗೆ ಮುಕ್ತ ಅವಕಾಶ ಕೊಡಲು ಮನವಿ

Team Newsnap
1 Min Read

ಈ ಬಾರಿಯ ತುಲಾ ಸಂಕ್ರಮಣದಲ್ಲಿ ಭಾಗಿಯಾಗಲು ಕೊಡಗಿನ ಮೂಲ ನಿವಾಸಿಗಳಿಗೆ ಮುಕ್ತ ಅವಕಾಶ ನೀಡಬೇಕು ಎಂದು “ಸೇವ್ ಕೊಡಗು ಫ್ರಮ್ ಟೂರಿಸ್ಟ್’ ತಂಡ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.


ಕಳೆದ ಬಾರಿ ಜಿಲ್ಲಾಡಳಿತದ ವೈಫಲ್ಯತೆಯಿಂದ ತುಲಾ ಸಂಕ್ರಮಣದ ಸಮಯದಲ್ಲಿ ಗೊಂದಲ ಉಂಟಾಯಿತು. ಇದರಿಂದ ಕೊಡಗಿನ ಮೂಲ ನಿವಾಸಿಗಳಿಗೆ ತುಂಬಾ ನೋವಾಗಿದೆ. ಮುಂಬರುವ ಅಕ್ಟೋಬರ್‌ನಲ್ಲಿ ನಡೆಯಲಿರುವ ಕೊಡಗಿನ ಈ ಸಾಂಪ್ರದಾಯಕ ಹಬ್ಬದಲ್ಲಿ ಈ ರೀತಿಯಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.

ಹೊರಗಿನಿಂದ ಜಾತ್ರೆಗೆ ಬರುವ ಭಕ್ತರು ಕಡ್ಡಾಯವಾಗಿ ಮುಂಚೆಯೇ ಹೆಸರು ನೋಂದಾಯಿಸಿಕೊಳ್ಳಬೇಕು ಮತ್ತು ಕೋವಿಡ್ ನೆಗಟಿವ್ ವರದಿ ಇಟ್ಟುಕೊಂಡು ಪಾಲ್ಗೊಳ್ಳಲು ಅವಕಾಶ ನೀಡಬೇಕೆಂದು ತಂಡ ಕೋರಿದೆ.


ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸಂಪೂರ್ಣ ಸ್ಥಗಿತಗೊಳಿಸಬೇಕೆಂದು, ಕೊಡಗಿನ ವಿವಿಧ ಸಂಘಟನೆಗಳು ಮತ್ತು ಸಮಾನಮನಸ್ಕರಿರುವ ಈ “ಸೇವ್ ಕೊಡಗು ಫ್ರಮ್ ಟೂರಿಸ್ಟ್’ ತಂಡ ಒತ್ತಾಯಿಸಿದೆ.


ಈ ಬಗ್ಗೆ ಡಿಸಿ ಮತ್ತು ಎಸ್‌ಪಿಗೆ ಮನವಿ ಸಲ್ಲಿಸಿದೆ. ತುಲಾ ಸಂಕ್ರಮಣ ಮತ್ತು ಶಾಲಾ-ಕಾಲೇಜು ಪುನರಾರಂಭವಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಜಿಲ್ಲೆಯ ಜನರ ಹಿತದೃಷ್ಟಿಯಿಂದ ಹಾಗೂ ಕೇರಳದಲ್ಲಿ ಕೋವಿಡ್ ಮತ್ತು ನಿಫಾ ವೈರಸ್ ಹೆಚ್ಚುತ್ತಿರುವ ಕಾರಣ ಗಡಿಗಳಿಂದ ಪ್ರವಾಸಿಗರು ಒಳಬಾರದಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

Share This Article
Leave a comment