March 11, 2026

Newsnap Kannada

The World at your finger tips!

dairy,product,milk

ನಾಳೆಯಿಂದ ನಂದಿನಿ ಹಾಲಿನ ದರ ಹೆಚ್ಚಳ: ಯಾವುದರ ಬೆಲೆ ಎಷ್ಟು ?

Spread the love

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ತರಕಾರಿ ಬೆಲೆ ಗಗನಕ್ಕೇರಿದೆ. ಟೊಮೆಟೋ ದರ 100ರೂ ಗಡಿದಾಟಿದೆ. ಹೀಗಿರುವಾಗ ರಾಜ್ಯದ ಜನತೆಗೆ ಮತ್ತೊಂದು ಶಾಕ್ , ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ ರೂ.3 ಹೆಚ್ಚಳ ಮಾಡಲಾಗಿದೆ.

ಜುಲೈ 21ರಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿನ ಎಲ್ಲ ಹಾಲು ಒಕ್ಕೂಟಗಳು ಹಾಗೂ ಕೆಎಂಎಫ್‌ ಅಧ್ಯಕ್ಷರ ಸಭೆ ನಡೆಸಿ, ಈ ಸಭೆಯಲ್ಲಿ ಹಾಲು ಒಕ್ಕೂಟಗಳು ನೀಡಿರುವ ನಂದಿನಿ ದರ 5 ರೂ ಹೆಚ್ಚಳ ಪ್ರಸ್ತಾನೆಯ ಬಗ್ಗೆ ಮಹತ್ವದ ಚರ್ಚೆಯನ್ನು ನಡೆಸಿದರು. ಅಲ್ಲದೇ ನಂದಿನಿ ಹಾಲಿನ ಪುಡಿಯ ದರವನ್ನು ಹೆಚ್ಚಳದ ಬಗ್ಗೆಯೂ ಚರ್ಚೆ ನಡೆಸಲಾಯಿತು.

WhatsApp Image 2022 12 30 at 6.14.15 PM

ಅಂತಿಮವಾಗಿ ಸಿಎಂ ನೇತೃತ್ವದ ಸಭೆಯಲ್ಲಿ ನಂದಿನಿ ಹಾಲಿನ ಪ್ರತಿ ಲೀಟರ್ ದರವನ್ನು ರೂ.3 ಹೆಚ್ಚಳ ಮಾಡುವ ನಿರ್ಧಾರವನ್ನು ಕೈಗೊಂಡಿದ್ದಾರೆ.

ಸಭೆಯಲ್ಲಿ ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್‌ ಪ್ರಸಾದ್‌, ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ ಸಲ್ಮಾ ಫಾಹಿಂ, ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಜಗದೀಶ್‌, KMF ನಿರ್ದೇಶಕ ಹೆಚ್.ಡಿ.ರೇವಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮಾಲೂರು ಶಾಸಕ ನಂಜೇಗೌಡರು ಮತ್ತಿತರರು ಭಾಗವಹಿಸಿದ್ದರು. SSLC’, ‘ITI’ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ನೌಕರಿ : 1,016 ಹುದ್ದೆಗಳಿಗೆ ಅರ್ಜಿ

ಯಾವುದರ ಬೆಲೆ ಎಷ್ಟು ಹೆಚ್ಚಳ ಮಾಹಿತಿ

  1. ನಂದಿನಿ( ಟೋನ್ಡ್ ಹಾಲು) ಅರ್ಧ ಲೀಟರ್‌ಗೆ 23 ಹಾಗೂ ಒಂದು ಲೀಟರ್‌ಗೆ 43 ರೂ. ಆಗಲಿದೆ.
  2. ನಂದಿನಿ (ಡಬಲ್ ಟೋನ್ಡ್ ಹಾಲು) ಅರ್ಧ ಲೀಟರ್​ಗೆ 22 ಹಾಗೂ ಒಂದು ಲೀಟರ್‌ಗೆ 41 ರೂಪಾಯಿ ಆಗಲಿದೆ.
  3. ನಂದಿನಿ ಶುಭಂ ಅರ್ಧ ಲೀಟರ್​ಗೆ 26 ಹಾಗೂ ಒಂದು ಲೀಟರ್‌ಗೆ 48 ರೂ. ಆಗಲಿದೆ.
  4. ನಂದಿನಿ ಸ್ಪೆಷಲ್ ಅರ್ಧ ಲೀಟರ್​ಗೆ 26 ಮತ್ತು ಒಂದು ಲೀಟರ್‌ಗೆ 48 ರೂ. ಆಗಲಿದೆ.
  5. ನಂದಿನಿ ( ಸಮೃದ್ಧಿ) ಅರ್ಧ ಲೀಟರ್​ಗೆ 27 ಹಾಗೂ ಒಂದು ಲೀಟರ್‌ಗೆ 51 ರೂಪಾಯಿ ಆಗಲಿದೆ.
  6. ನಂದಿನಿ ಹಸುವಿನ ಹಾಲು ಅರ್ಧ ಲೀಟರ್​ಗೆ 25 ಹಾಗೂ ಒಂದು ಲೀಟರ್‌ಗೆ 54 ರೂಪಾಯಿ.

#NandiniMilk #Milkprice #Kannadanews #BestKannadanews #Mandya #mysore #bengaluru #Newsnap #karnataka

error: Content is protected !!