ಸುಪ್ರೀಂ ನ್ಯಾಯಾಧೀಶೆಯಾಗಿ ನಾಗರತ್ನ ಅಧಿಕಾರ ಸ್ವೀಕಾರ : ತವರು ಇಂಗಲಗುಪ್ಪೆಯಲ್ಲಿ ಸಂಭ್ರಮ

Team Newsnap
1 Min Read

ಸುಪ್ರೀಂಕೋರ್ಟ್ ನ್ಯಾಯಾಧೀಶೆ ಯಾಗಿ ನ್ಯಾ.ಬಿ.ವಿ.ನಾಗರತ್ನ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಹುಟ್ಟೂರು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಇಂಗಲಗುಪ್ಪೆ ಗ್ರಾಮಸ್ಥರಲ್ಲಿ ಸಂತಸ, ಸಂಭ್ರಮ ಮನೆ ಮಾಡಿದೆ.

ತಂದೆ ಕೂಡ ಸಿಜೆ ಆಗಿದ್ದರು….

ನ್ಯಾ.ನಾಗರತ್ನ ತಂದೆ ದಿ.ಇ.ಎಸ್.ವೆಂಕಟರಾಮಯ್ಯ ಕೂಡ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. 1979 ರಿಂದ 1989 ರ ವರೆಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ್ದ ಇ.ಎಸ್.ವೆಂಕಟರಾಮಯ್ಯ.. ಜೂನ್ 19, 1989 ರಿಂದ 6 ತಿಂಗಳ ಅವಧಿಗೆ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದರು..

ಬೆಂಗಳೂರಿನಲ್ಲಿ ವಾಸವಾಗಿದ್ದರೂ ನ್ಯಾ.ನಾಗರತ್ನ ಹುಟ್ಟೂರಿನ ಅಭಿಮಾನ ಬಿಟ್ಟಿಲ್ಲ. ಆಗಾಗ್ಗೆ ಹುಟ್ಟೂರಿಗೆ ಭೇಟಿ ನೀಡುತ್ತಿರುತ್ತಾರೆ.

ನಾಗರತ್ನ ಅವರ ಕಿರು ಪರಿಚಯ :

30 ಅಕ್ಟೋಬರ್ 1962ರಲ್ಲಿ ನಿವೃತ್ತ ನ್ಯಾಯಮೂರ್ತಿ ದಿ.ಇ.ಎಸ್.ವೆಂಕಟರಾಮಯ್ಯ ಅವರ ಏಕೈಕ ಪುತ್ರಿಯಾಗಿ ಜನಿಸಿದ ಅವರು ಬೆಂಗಳೂರಿನ ಸೋಫಿಯಾ ಶಾಲೆಯಲ್ಲಿ‌ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣ ಪೂರೈಸಿ, ಪಿಯುಸಿ, ಪದವಿ ಹಾಗೂ ಕಾನೂನು ಪದವಿಯನ್ನು ದೆಹಲಿಯಲ್ಲಿ ಪೂರೈಸಿದರು.

1987ರಲ್ಲಿ ಕರ್ನಾಟಕದ ಬಾರ್ ಕೌನ್ಸಿಲ್ ಗೆ ಸೇರಿ ವಕೀಲ ವೃತ್ತಿ ಆರಂಭಿಸಿ, 2008ರಲ್ಲಿ ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು.

ಇದಕ್ಕೂ ಮೊದಲು ಬೆಂಗಳೂರಿನ ಸಾಂವಿಧಾನಿಕ ಮತ್ತು ವಾಣಿಜ್ಯ ಕಾನೂನು ಅಧ್ಯಯನ ಮಾಡಿದರು. ಅವರನ್ನು 17 ಫೆಬ್ರವರಿ 2010ರಂದು ಹೈಕೋರ್ಟ್ ಕಾಯಂ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು. ನ್ಯಾ ನಾಗರತ್ನ ಅವರ ತಂದೆ ಇ.ಎಸ್.ವೆಂಕಟರಾಮಯ್ಯ ಅವರು ದೇಶದ 19ನೇ ಮುಖ್ಯ ನ್ಯಾಯಾಧೀಶರಾಗಿದ್ದರು.

Share This Article
Leave a comment