September 21, 2021

Newsnap Kannada

The World at your finger tips!

ನಶಿಸಿಹೋಗುವ ಪಕ್ಷವಾಗಿದೆ ಕಾಂಗ್ರೆಸ್: ಕಟೀಲ್

Spread the love

ಕಾಂಗ್ರೆಸ್ ನಶಿಸಿಹೋಗುವ ಪಕ್ಷವಾಗಿದೆ. ಅದು ಇತಿಹಾಸ ಸೇರುವ ಪಕ್ಷವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.


ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯ ಕಾಂಗ್ರೆಸ್‌ನಲ್ಲಿ ಒಳಜಗಳ ಜಾಸ್ತಿಯಾಗಿದೆ. ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಸಾಕಷ್ಟು ದಿನ ಕಳೆದರೂ ಪದಾಧಿಕಾರಿಗಳ ನೇಮಕವಾಗಿಲ್ಲ. ಕಾಂಗ್ರೆಸ್ ಪಕ್ಷವನ್ನು ನಡೆಸುವುದಕ್ಕೆ ಆಗದ ಇವರು ರಾಜ್ಯವನ್ನು ನಡೆಸುತ್ತಾರೆಯೇ ಎಂದು ಪ್ರಶ್ನಿಸಿದರು.


ಕಾಂಗ್ರೆಸ್‌ನಲ್ಲಿರುವ ಎಲ್ಲರೂ ಪಂಜರದ ಗಿಣಿಗಳು. ಅಲ್ಲಿನ ನಾಯಕರನ್ನು ಕಾಯಲು ಸಿದ್ದರಾಮಯ್ಯ ಮತ್ತು ಡಿಕೆಶಿ ಕಾವಲುಗಾರರು ಎಂದು ವ್ಯಂಗ್ಯವಾಡಿದ್ದಾರೆ.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಮೇಲೆ ಸ್ವತಂತ್ರವಾಗಿ ಎಲ್ಲ ತೀರ್ಮಾನ ಕೈಗೊಂಡು ಉತ್ತಮ ಆಡಳಿತ ನಡೆಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

error: Content is protected !!