February 21, 2026

Newsnap Kannada

The World at your finger tips!

paravathamma

ಪಾರ್ವತಮ್ಮ ರಾಜ್ ಕುಮಾರ್ ಸಹೋದರಿ ನಾಗಮ್ಮ ನಿಧನ

Spread the love

ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಸಹೋದರಿ ಎಸ್.ವಿ. ನಾಗಮ್ಮನವರು (81) ಶನಿವಾರ ಬೆಂಗಳೂರಿನಲ್ಲಿ ನಿಧನರಾದರು, ನಾಗಮ್ಮನವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಬೆಂಗಳೂರಿನ ಮನೆಯಲ್ಲೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಪಾರ್ವತಮ್ಮನವರ ಯಶಸ್ಸಿಗೆ ಜೊತೆಯಾಗಿ ನಿಂತಿದ್ದ ನಾಗಮ್ಮನವರು ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ತಮ್ಮ ಮಗನ ಮನೆಯಲ್ಲಿದ್ದರು.ಸಹೋದರಿಯನ್ನು ಕಳೆದುಕೊಂಡ ನಂತರ ಕೊಂಚ ಅವರು ಬಳಲಿದ್ದರು.

ಇದನ್ನು ಓದಿ :ದೆಹಲಿ ಅಗ್ನಿ ದುರಂತ :ಸಜೀವ ದಹನದ ಸಂಖ್ಯೆ 26 ಕ್ಕೆ ಏರಿಕೆ – 2 ಲಕ್ಷರು ಪರಿಹಾರ : ರಾಷ್ಟ್ರಪತಿ, ಪ್ರಧಾನಿಗಳಿಂದ ಸಂತಾಪ

ಸಹೋದರ ಎಸ್.ಎ. ಚಿನ್ನೇಗೌಡ, ಎಸ್.ಎ. ಗೋವಿಂದರಾಜು, ಎಸ್.ಎ. ಶ್ರೀನಿವಾಸ್ ಹಾಗೂ ತಂಗಿ ಜಯಮ್ಮ ಮತ್ತು ಮಗ ಮಹೇಶ್ ಮೊಮ್ಮಕ್ಕಳನ್ನು ಅವರು ಅಗಲಿದ್ದಾರೆ, ಸಂಜೆ ಇಳಂದೂರಿನ ಕೆಸ್ತೂರಿನಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಯಿತು.

error: Content is protected !!