ದೆಹಲಿ ಅಗ್ನಿ ದುರಂತ :ಸಜೀವ ದಹನದ ಸಂಖ್ಯೆ 27 ಕ್ಕೆ ಏರಿಕೆ – 2 ಲಕ್ಷರು ಪರಿಹಾರ : ರಾಷ್ಟ್ರಪತಿ, ಪ್ರಧಾನಿಗಳಿಂದ ಸಂತಾಪ

Team Newsnap
1 Min Read

ದೆಹಲಿಯ ಮುಂಡ್ಕಾದಲ್ಲಿರುವ ಮೂರು ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ನಿನ್ನೆ 4.45ರ ಸುಮಾರಿಗೆ ಬೆಂಕಿ ಹತ್ತಿಕೊಂಡ ನಂತರ ರಕ್ಷಣಾ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಸತತ ಪ್ರಯತ್ನ ಮಾಡಿ ರಾತ್ರಿ 10 ಗಂಟೆ ಸುಮಾರಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

2 ಲಕ್ಷ ರೂಪಾಯಿ ಪರಿಹಾರ :

ಭೀಕರ ಅಗ್ನಿ ದುರಂತಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.ಮೃತರ ಕುಟುಂಬಕ್ಕೆ ದೆಹಲಿ ಸರ್ಕಾರ ತಲಾ ಎರಡು ಲಕ್ಷ ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿದೆ. ಹಾಗೆಯೇ ಗಾಯಗೊಂಡವರಿಗೆ 50 ಸಾವಿರ ರು ಪರಿಹಾರ ಪ್ರಕಟಿಸಿದೆ.

ಇದನ್ನು ಓದಿ :ಆಫೀಸಿಗೆ ಬಂದು ಕೆಲಸ ಮಾಡಿ ಎಂದರೆ 800 ಜನ ನೌಕರರು ರಾಜೀನಾಮೆ ನೀಡೆಬಿಟ್ಟರು !

ಈ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಳ್ತಿದ್ದಂತೆ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಂತರ ಕಟ್ಟಡದ ಕಿಟಕಿಗಳನ್ನು ಒಡೆದು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದವರನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ನಂತರ ಅಗ್ನಿಶಾಮ ಸಿಬ್ಬಂದಿ ಕೂಡ ಸ್ಥಳಕ್ಕೆ ಬಂದಿದ್ದಾರೆ.

ಈ ಬಿಲ್ಡಿಂಗ್​ನಲ್ಲಿ ಹಲವು ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದವು. ಮೊದಲು ಮೊದಲನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಲ್ಲಿ ಸಿಸಿಟಿವಿ ತಯಾರಿಕ ಸಂಸ್ಥೆ ಕೆಲಸ ಮಾಡುತ್ತಿತ್ತು. ಇಲ್ಲಿ ಕೆಲಸ ಮಾಡುತ್ತಿದ್ದ 50 ಉದ್ಯೋಗಿಗಳನ್ನ ರಕ್ಷಣೆ ಮಾಡಲಾಗಿದೆ.

Share This Article
Leave a comment