ಮಂಡ್ಯದಲ್ಲೂ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನೆಪ ಇಟ್ಟು ಕೊಂಡು ಅಕ್ರಮಗಳು ಎಗ್ಗಿಲ್ಲದೇ ನಡೆದಿವೆ.
ಬಹಿರಂಗ ಹರಾಜು ಮೂಲಕ ಗ್ರಾಮ ಪಂಚಾಯತಿ ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವಾಗಿ ಈ ಚುನಾವಣೆಯಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆದಿದೆ.
ಸಂತೆಯಲ್ಲಿ ಮೇಕೆ ಹರಾಜಿನ ರೀತಿ ಗ್ರಾ.ಪಂ ಸ್ಥಾನಗಳು ಹರಾಜು ಹಾಕುವ ಸ್ಥಿತಿಗೆ ಗ್ರಾಮದ ಮುಖಂಡರೇ ಬಂದು ನಿಂತಿದ್ದಾರೆ.

ಎಲ್ಲಿ ಸದಸ್ಯರು ಹರಾಜು ಆಗಿದ್ದಾರೆ?
ಮಂಡ್ಯ ಜಿಲ್ಲೆಯ ನಾಗಮಂಗಲ ಲಾಳನಕೆರೆ ಗ್ರಾಪಂ ವ್ಯಾಪ್ತಿಯಲ್ಲಿನ ಬಿದರಕೆರೆ ಗ್ರಾಮದ 3 ಸದಸ್ಯರ ಚುನಾವಣೆ ನಡೆಸದೆ, ಅವಿರೋಧ ಆಯ್ಕೆ ನೆಪದಲ್ಲಿ ಹರಾಜು ಪ್ರಕ್ರಿಯೆ ಮಾಡಿದ್ದಾರೆ.
ಅವಿರೋಧ ಆಯ್ಕೆ ನೆಪದಲ್ಲಿ ಲಕ್ಷಾಂತರ ರೂಪಾಯಿಗಳಿಗೆ ಗ್ರಾ.ಪಂ ಸ್ಥಾನ ಹರಾಜು ಹಣವನ್ನು ಸಂಗ್ರಹಿಸಲಾಗಿದೆ.
ಗ್ರಾ.ಪಂ ಸ್ಥಾನಗಳನ್ನು ಬಿಡ್ ಕೂಗಿದ ಗ್ರಾಮಸ್ಥರು ಒಂದು ಸ್ಥಾನಕ್ಕೆ 6 ರಿಂದ 7 ಲಕ್ಷ ರುಗಳ ವರೆಗೂ ನಡೆದಿರುವ ಬಿಡ್ ಮಾಡಿದ್ದಾರೆ.
ಗ್ರಾ.ಪಂ ಸ್ಥಾನಗಳನ್ನು ಹರಾಜು ಹಾಕುವ ಪ್ರಕ್ರಿಯೆಯ ವಿಡಿಯೋ ಈಗ ತಾಲೂಕಿನಾದ್ಯಂತ ಫುಲ್ ವೈರಲ್ ಅಗಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ