ನಾಗಮಂಗಲ : 6 ರಿಂದ 7 ಲಕ್ಷಕ್ಕೆ ಗ್ರಾ ಪಂ ಸದಸ್ಯರ ಹರಾಜು

Team Newsnap
1 Min Read

ಮಂಡ್ಯದಲ್ಲೂ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನೆಪ ಇಟ್ಟು ಕೊಂಡು ಅಕ್ರಮಗಳು ಎಗ್ಗಿಲ್ಲದೇ ನಡೆದಿವೆ.

ಬಹಿರಂಗ ಹರಾಜು ಮೂಲಕ ಗ್ರಾಮ ಪಂಚಾಯತಿ ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವಾಗಿ ಈ ಚುನಾವಣೆಯಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆದಿದೆ.

ಸಂತೆಯಲ್ಲಿ ಮೇಕೆ ಹರಾಜಿನ ರೀತಿ‌ ಗ್ರಾ.ಪಂ ಸ್ಥಾನಗಳು ಹರಾಜು ಹಾಕುವ ಸ್ಥಿತಿಗೆ ಗ್ರಾಮದ ಮುಖಂಡರೇ ಬಂದು ನಿಂತಿದ್ದಾರೆ.

nagama

ಎಲ್ಲಿ ಸದಸ್ಯರು ಹರಾಜು ಆಗಿದ್ದಾರೆ?

ಮಂಡ್ಯ ಜಿಲ್ಲೆಯ‌ ನಾಗಮಂಗಲ ಲಾಳನಕೆರೆ ಗ್ರಾಪಂ ವ್ಯಾಪ್ತಿಯಲ್ಲಿನ ಬಿದರಕೆರೆ ಗ್ರಾಮದ 3 ಸದಸ್ಯರ ಚುನಾವಣೆ ನಡೆಸದೆ, ಅವಿರೋಧ ಆಯ್ಕೆ ನೆಪದಲ್ಲಿ ಹರಾಜು‌ ಪ್ರಕ್ರಿಯೆ ಮಾಡಿದ್ದಾರೆ.

ಅವಿರೋಧ ಆಯ್ಕೆ ನೆಪದಲ್ಲಿ ಲಕ್ಷಾಂತರ ರೂಪಾಯಿಗಳಿಗೆ ಗ್ರಾ.ಪಂ ಸ್ಥಾನ ಹರಾಜು ಹಣವನ್ನು ಸಂಗ್ರಹಿಸಲಾಗಿದೆ.

ಗ್ರಾ.ಪಂ ಸ್ಥಾನಗಳನ್ನು ಬಿಡ್ ಕೂಗಿದ ಗ್ರಾಮಸ್ಥರು ಒಂದು ಸ್ಥಾನಕ್ಕೆ 6 ರಿಂದ 7 ಲಕ್ಷ ರುಗಳ ವರೆಗೂ ನಡೆದಿರುವ ಬಿಡ್ ಮಾಡಿದ್ದಾರೆ.

ಗ್ರಾ.ಪಂ ಸ್ಥಾನಗಳನ್ನು‌ ಹರಾಜು ಹಾಕುವ ಪ್ರಕ್ರಿಯೆಯ ವಿಡಿಯೋ ಈಗ ತಾಲೂಕಿನಾದ್ಯಂತ ಫುಲ್ ವೈರಲ್ ಅಗಿದೆ.

Share This Article
Leave a comment