ಮೈಸೂರು ಯುವ ದಸರಾದಲ್ಲಿ ಗಂಧದ ಗುಡಿ ಟೀಸರ್ ನೋಡಿ ಪತ್ನಿ ಅಶ್ವಿನಿ ಕಣ್ಣೀರು

Team Newsnap
1 Min Read

ಮೈಸೂರಿನ ಯುವ ದಸರಾದಲ್ಲಿ ಅಪ್ಪು ನಮನ ಕಾರ್ಯಕ್ರಮದಲ್ಲಿ ಗಂಧದ ಗುಡಿ ಟೀಸರ್ ನೋಡಿ ಪುನೀತ್ ಪತ್ನಿ ಅಶ್ವಿನಿ ಕಣ್ಣೀರಿಟ್ಟರು.

ಪುನೀತ್ ರಾಜ್‍ಕುಮಾರ್ ಅಗಲಿ 11 ತಿಂಗಳೇ ಕಳೆದಿದೆ. ಆದರೂ ಅಪ್ಪುವಿನ ಮೇಲಿನ ಅಭಿಮಾನ, ಪ್ರೀತಿ ಮಾತ್ರ ಕಿಂಚಿತ್ತು ಕಡಿಮೆ ಆಗಿಲ್ಲ. ಕಳೆದ ರಾತ್ರಿ ಅದ್ದೂರಿ ಮೈಸೂರು ಯುವ ದಸರಾ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ ಈ ಬಾರಿಯ 6 ದಿನಗಳ ಕಾರ್ಯಕ್ರಮ ನಡೆಯಲಿದೆ.

‘ಅಪ್ಪು ನಮನ’ ಹೆಸರಲ್ಲಿ ಈ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು. ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್, ರಾಘವೇಂದ್ರ ರಾಜ್ ಕುಮಾರ್ , ದೀಪ ಬೆಳಗುವ ಮೂಲಕ ಚಾಲನೆ ಕೊಟ್ಟರು. ಯುವ ದಸರಾಗೆ ಚಾಲನೆ ಸಿಕ್ಕೊಡನೆ ಕೂಗಿ ಬಂದಿದ್ದು ಒಂದೇ ಕೂಗು ಅದು ಅಪ್ಪು.. ಅಪ್ಪು.. ಒಂದ್ಕಡೆ ಅಪ್ಪು ಹಾಡುಗಳಿಗೆ ಕಲಾವಿದರು ನೃತ್ಯ ಮಾಡ್ತಿದ್ರೇ ಇನ್ನೊಂದೆಡೆ ಯುವಕರು ಅಪ್ಪು ಭಾವಚಿತ್ರ ಹಿಡಿದು, ಮೊಬೈಲ್ ಟಾರ್ಚ್ ಹಾಕಿಕೊಂಡು ಅಭಿಮಾನಿಗಳು ಕುಣಿದರು. ಭಾರತೀಯ ಸೇನೆಯ ನೂತನ ಪ್ರಧಾನ ದಂಡನಾಯಕರಾಗಿ ಅನಿಲ್ ಚೌಹಾನ್ ನೇಮಕ

ಈ ಕಾರ್ಯಕ್ರಮದಲ್ಲಿ ಅಪ್ಪುವಿನ ಕನಸು ಗಂಧದಗುಡಿ ಟೀಸರ್ ಪ್ರಸಾರ ವೇಳೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಭಾವುಕರಾಗಿ ಕಣ್ಣೀರಿಟ್ಟರು. ಇದು ಎಂಥವರನ್ನು ಒಮ್ಮೆ ಮೌನವಾಗಿರುವಂತೆ ಮಾಡಿತ್ತು.

Share This Article
Leave a comment