ಭಾರತೀಯ ಸೇನೆಯ ನೂತನ ಪ್ರಧಾನ ದಂಡನಾಯಕರಾಗಿ ಅನಿಲ್ ಚೌಹಾನ್ ನೇಮಕ

Team Newsnap
1 Min Read
ಅನಿಲ್ ಚೌಹಾನ್

ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾನ್ (ನಿವೃತ್ತ) ಅವರನ್ನು ಭಾರತೀಯ ಸೇನೆಗೆ ನೂತನ ಸಿಡಿಎಸ್ ಆಗಿ ನೇಮಕ ಮಾಡಲಾಗಿದೆ.

ಹುತಾತ್ಮ ಬಿಪಿನ್ ರಾವತ್ ಬಳಿಕ ಸಿಡಿಎಸ್​ ​ಸ್ಥಾನವನ್ನು ಅಲಂಕರಿಸಲಿರುವ ಎರಡನೇ ದಂಡನಾಯಕ ಎಂಬ ಹೆಗ್ಗಳಿಕೆಗೆ ಅನಿಲ್ ಚೌಹಾಣ್ ಅವರಿಗಿದೆ. ಇದನ್ನು ಓದಿ – ನಟಿ ದೀಪಿಕಾ ಪಡುಕೋಣೆಗೆ ಅನಾರೋಗ್ಯ ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ

ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ 2021ರಲ್ಲಿ ಪೂರ್ವ ಕಮಾಂಡ್​​ನ ಮುಖ್ಯಸ್ಥ ಸ್ಥಾನದಿಂದ ನಿವೃತ್ತರಾಗಿದ್ದರು. ಇವರೆ ಸೇನಾ ವ್ಯವಹಾರಗಳ ಸಚಿವಾಲಯಕ್ಕೆ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಲಿದ್ದಾರೆ. ಕಳೆದ 2021ರ ಡಿಸೆಂಬರ್‌ 8ರಂದು ಬಿಪಿಎನ್‌ ರಾವತ್‌ ಹೆಲಿಕಾಪ್ಟರ್ ದುರಂತದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಅದಾದ ಬಳಿಕ ಈ ಹುದ್ದೆಗೆ ಕೇಂದ್ರ ಸರ್ಕಾರ ಯಾರನ್ನೂ ನೇಮಕ ಮಾಡಿರಲಿಲ್ಲ. ಈಗ ಅನಿಲ್‌ ಚೌಹಾಣ್‌ರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

Share This Article
Leave a comment