ಮೈಸೂರು ಡಿಸಿ ಇಡೀ ಕುಟುಂಬಕ್ಕೆ ಕೊರೋನಾ ಪಾಸಿಟಿವ್ : ರೋಹಿಣಿ ಗೆ ಮಾತ್ರ ನೆಗೆಟಿವ್ !

Team Newsnap
1 Min Read

ಸಿಂಧೂರಿ ಹೊರತು ಪಡಿಸಿ ಇಡೀ ಕುಟುಂಬ ಕರೋನಾ ಪಾಸಿಟಿವ್..!

ಮೈಸೂರು ಡಿಸಿ ರೋಹಿಣಿ ಸಿಂಧೂರಿ ಇಡೀ ಕುಟುಂಬಕ್ಕೆ ಕರೋನಾ ಪಾಸಿಟಿವ್ ಬಂದಿದೆ. ಆದರೆ ರೋಹಿಣಿಗೆ ಮಾತ್ರ ನೆಗೆಟಿವ್. ಮುಂಜಾಗ್ರತೆ ವಹಿಸಿರುವ ಕಾರಣಕ್ಕಾಗಿ ಮನೆಯವರಿಗೆ ಯಾವುದೇ ಸಮಸ್ಯೆ ಇಲ್ಲ.

rohini mother

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಪ್ಪ‌ – ಅಮ್ಮ , ಅತ್ತೆ- ಮಾಮ ಹಾಗೂ ಗಂಡನಿಗೂ ಕರೋನಾ ಪಾಸಿಟಿವ್ ಬಂದಿದೆ. ಎಲ್ಲರೂ ಹೋಂ ಐಸೋಲೇಷನ್ ನಲ್ಲಿದ್ದಾರೆ . ಡಿಸಿ ರೋಹಿಣಿ ಸಹ, ಕರೋನಾ ಪರೀಕ್ಷೆಗೆ ಒಳಪಟ್ಟಿದ್ದು ನೆಗೆಟಿವ್ ರಿಪೋರ್ಟ್ ಬಂದಿದೆ. ಇಬ್ಬರು ಮಕ್ಕಳ ಬಗ್ಗೆ ಇನ್ನೂ ವರದಿ ಬಂದಿಲ್ಲ.‌

ರೋಹಿಣಿ ನೀಡಿರುವ ಮುಂಜಾಗ್ರತೆಯ ಟಿಪ್ಸ್

  • ಹಲವು ಆಸ್ಪತ್ರೆಗಳು ಆನ್‌ಲೈನ್ ಕೌನ್ಸೆಲಿಂಗ್ ಹಾಗೂ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುವ ಪದ್ಧತಿಯನ್ನು ಅನುಸರಿಸಿ.
  • ನಿಮಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟ ನಂತರ, ಸೋಂಕಿನ ಲಘು ಸೂಚನೆಗಳಿದ್ದಲ್ಲಿ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬಹುದು.
  • ಸೋಂಕು ಕಾಣಿಸಿಕೊಂಡ ಮೊದಲ 5 ದಿನ ಪ್ರಮುಖವಾದದ್ದು. ಈ ವೇಳೆ ಸೂಕ್ತ ಔಷಧವನ್ನು ನಿಯಮಿತವಾಗಿ ಸೇವಿಸುವುದು ಅತ್ಯವಶ್ಯಕ.
  • ಈ ಎಲ್ಲಾ ಔಷಧಗಳನ್ನು ಆನ್‌ಲೈನ್ ಅಥವಾ ವೈದ್ಯರ ನೇರ ಸಲಹೆಯ ಮೇರೆಗೆ ಮಾತ್ರ ತೆಗೆದುಕೊಳ್ಳಬೇಕು.
  • ಒಂದು ವೇಳೆ ಈ ಔಷಧಗಳನ್ನು ತೆಗೆದುಕೊಳ್ಳುವಾಗ ಸೋಂಕಿನ ಸೂಚನೆಗಳು ನಿಯಂತ್ರಣಕ್ಕೆ ಬರುತ್ತಿಲ್ಲ ಎಂದನಿಸಿದರೆ ಕೂಡಲೇ ನಿಮ್ಮ ವೈದ್ಯರ ಸಲಹೆ ಪಡೆಯಿರಿ.
  • ಸೋಂಕಿತರು ದಿನಕ್ಕೆ ಮೂರು ಬಾರಿ ಬಿಸಿ ನೀರಿನ ಆವಿ ತೆಗೆದುಕೊಳ್ಳುವುದು
  • ಬಿಸಿ ನೀರಿಗೆ ಉಪ್ಪು ಬೆರೆಸಿ ಗಾಗಲ್ ಮಾಡುವುದು ನೆರವಾಗುತ್ತದೆ.
Share This Article
Leave a comment