October 4, 2024

Newsnap Kannada

The World at your finger tips!

mysuru dasara

ನಾಡಹಬ್ಬ ಮೈಸೂರು ದಸರಾ : 9 ಗಜಪಡೆಗಳ ಪಟ್ಟಿ ಬಿಡುಗಡೆ

Spread the love

ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ನಾಡಿನ ಅದಿದೇವತೆ ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿ ಹೊತ್ತು ಸಾಗಲು ದಸರಾ ಗಜಪಡೆಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಈ ಬಾರಿ 9 ಆನೆಗಳಿಗೆ ದಸರಾ ಗಜಪಡೆಯಲ್ಲಿ ಸ್ಥಾನ ನೀಡಲಾಗಿದೆ.

ಬೆಂಗಳೂರಿನ ಅಶೋಕಪುರಂನಲ್ಲಿರುವ ಅರಣ್ಯಭವನದಲ್ಲಿ ಪ್ರಧಾನ ಮುಖ್ಯ ಅರಮನೆಯ ಸಂರಕ್ಷಣಾಧಿಕಾರಿ ಜಿ.ವಿ ರಂಗರಾವ್ ಅಧ್ಯಕ್ಷತೆಯ ಸಭೆಯಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.

ಮೈಸೂರು ದಸರಾದ ಗಜಪಡೆಗಳ ಮೊದಲ ಪಟ್ಟಿ

  1. ಅಭಿಮನ್ಯು – ಮತ್ತಿಗೋಡು ಆನೆ ಶಿಬಿರ
  2. ಭೀಮ – ಮತ್ತಿಗೋಡು ಆನೆ ಶಿಬಿರ
  3. ಮಹೇಂದ್ರ – ಮತ್ತಿಗೋಡು ಆನೆ ಶಿಬಿರ
  4. ಅರ್ಜುನ -ಬಳ್ಳೆ ಆನೆ ಶಿಬಿರ
  5. ಧನಂಜಯ – ದುಬಾರೆ ಆನೆ ಶಿಬಿರ
  6. ಗೋಪಿ – ದುಬಾರೆ ಆನೆ ಶಿಬಿರ
  7. ಪಾರ್ಥಸಾರಥಿ – ರಾಮಾಪುರ ಆನೆ ಶಿಬಿರ
  8. ವಿಜಯಾ – ದುಬಾರೆ ಆನೆ ಶಿಬಿರ
  9. ವರಲಕ್ಷ್ಮಿ – ಭೀಮನಕಟ್ಟೆ ಆನೆ ಶಿಬಿರ

ಆನೆಗಳು ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಸೆಪ್ಟೆಂಬರ್ 4ರವರೆಗೂ ವಿಶ್ರಾಂತಿ ಪಡೆಯಲಿವೆ. ಬಳಿಕ ಅರಣ್ಯ ಭವನದಿಂದ ಬಲ್ಲಾಳ್ ವೃತ್ತ, ಜೆಎಲ್ ಬಿ ರಸ್ತೆ, ಚಾಮರಾಜ ಜೋಡಿ ರಸ್ತೆ ಮೂಲಕ ಜಯಮಾರ್ತಾಂಡ ದ್ವಾರದಿಂದ ಅರಮನೆ ಆವರಣವನ್ನು ಗಜಪಡೆ ಪ್ರವೇಶಿಸಲಿದೆ. ರಾಜ್ಯದಲ್ಲಿ 10 ಮಂದಿ IAS ಅಧಿಕಾರಿಗಳ ವರ್ಗಾವಣೆ : ವಿವರ ನೋಡಿ

ಸೆಪ್ಟೆಂಬರ್ 6 ರಂದು ಆನೆಗಳ ತೂಕ ಮಾಡಿಸಿ, ಸೆಪ್ಟೆಂಬರ್ 7ರಿಂದ ತಾಲೀಮು ಆರಂಭಗೊಳ್ಳುತ್ತದೆ.

ನಾಡಹಬ್ಬ ಮೈಸೂರು ದಸರಾ 9 ಗಜಪಡೆಗಳ ಪಟ್ಟಿ ಬಿಡುಗಡೆ – dasara mysore 9 elephant list released #Mysoredasara #karnataka #tourism

Copyright © All rights reserved Newsnap | Newsever by AF themes.
error: Content is protected !!