December 26, 2024

Newsnap Kannada

The World at your finger tips!

dasara , mysuru , chamundi hills

Mysore Dasara Celebrations: Utsavamurti procession from Chamundi Hill ಮೈಸೂರು ದಸರಾ ಸಂಭ್ರಮ: ಚಾಮುಂಡಿ ಬೆಟ್ಟದಿಂದ ಹೊರಟ ಉತ್ಸವಮೂರ್ತಿ ಮೆರವಣಿಗೆ

ಮೈಸೂರು ದಸರಾ ಸಂಭ್ರಮ: ಚಾಮುಂಡಿ ಬೆಟ್ಟದಿಂದ ಹೊರಟ ಉತ್ಸವಮೂರ್ತಿ ಮೆರವಣಿಗೆ

Spread the love

ವಿಶ್ವವಿಖ್ಯಾತ ಮೈಸೂರು ‌ದಸರಾ( Mysuru Dasara ) ಹಬ್ಬದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಿಂದ ( Chamundi Hills) ಉತ್ಸವ ಮೂರ್ತಿ ಮೆರವಣಿಗೆ ಮೂಲಕ ಅರಮನೆಗೆ ಹೊರಟಿದೆ.

ಸಿಎಂ ಬಸವರಾಜ್​​ ಬೊಮ್ಮಾಯಿ( Basavaraj Bommai ) ಉತ್ಸವ ಮೂರ್ತಿ ಮೆರವಣಿಗೆಗೆ ಚಾಲನೆ ಕೊಟ್ಟರು.ಇದನ್ನು ಓದಿ –ಬದುಕಿಗೊಂದು ದೀವಿಗೆ…. ಭಗವದ್ಗೀತೆ


ಆಕರ್ಷಣೆಯ ಬೆಳ್ಳಿ ರಥದ ಮೂಲಕ ಉತ್ಸವ ಮೂರ್ತಿ ಚಾಮುಂಡಿ ಬೆಟ್ಟದಿಂದ(Chamundi Hills ) ಅರಮನೆಗೆ ಹೊರಟಿದೆ. ತಾವರೆಕಟ್ಟೆ ಮಾರ್ಗದಿಂದ ಕುರುಬಾರಳ್ಳಿ ಸರ್ಕಲ್​ಗೆ ತೆರಳಿ ಅಲ್ಲಿಂದ, ಸತ್ಯನಾರಾಯಣ್ ದೇವಸ್ಥಾನದ ಬಳಿ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಜಯಮಾರ್ತಾಂಡ ದ್ವಾರದಿಂದ ಯಮಗಂಡ ಕಾಲ ಮುಗಿಯುವ ಮುನ್ನವೇ ಉತ್ಸವ ಮೂರ್ತಿ ಅರಮನೆ ತಲುಪಲಿದೆ.

ಐತಿಹಾಸಿಕ ದಸರಾ ಕಣ್ತುಂಬಿಕೊಳ್ಳಲು ಕ್ಷಣಗಣನೆ ಮೈಸೂರಿನಲ್ಲಿ ಇಂದು ಅಂಬಾರಿಗೆ ಪುಷ್ಪಾರ್ಚನೆ ವೇಳೆ ರಾಷ್ಟ್ರಗೀತೆ ಹಾಡಿ, 21ಸುತ್ತು ಕುಶಾಲತೋಪು ನಡೆಸಲಾಗುತ್ತೆ. 41 ಸ್ತಬ್ದಚಿತ್ರಗಳ ಮೆರವಣಿಗೆಯೂ ಸಾಗಲಿದೆ

ಇಂದು ಅರಮನೆ ( palace ) ಸವಾರಿ ತೊಟ್ಟಿಯಲ್ಲಿ ಮೈ ನವಿರೇಳಿಸುವ ಜಟ್ಟಿಕಾಳಗ ನಡೆಯಲಿದೆ, ಮೈಸೂರು, ಚಾಮರಾಜನಗರ, ಬೆಂಗಳೂರು, ಚನ್ನಪಟ್ಟಣದ ಜಟ್ಟಿಗಳು ಸೆಣಸಾಡಲಿದ್ದಾರೆ. ಜಟ್ಟಿ ಕಾಳಗದ ನಂತರ ಅರಮನೆಯ ಆನೆ ಬಾಗಿಲಿನಿಂದ ಚಿನ್ನದ ಪಲ್ಲಕ್ಕಿಯಲ್ಲಿ ರಾಜವಂಶಸ್ಥ ಯದುವೀರ್ ಸಾಗಲಿದ್ದಾರೆ.


ಭುವನೇಶ್ವರಿ ದೇಗುಲಕ್ಕೆ ಆಗಮಿಸಿ ಬನ್ನಿ ಮರಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಿದ್ದಾರೆ.

ಸಂಜೆ 5:07ರಿಂದ 5:18ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅರಮನೆಯಂಗಳದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ರಾಜವಂಶಸ್ಥ ಯದುವೀರ್ ಅಂಬಾರಿಗೆ ( Ambari ) ಪುಷ್ಪಾರ್ಚನೆ ಮಾಡಲಿದ್ದಾರೆ. ಸಂಜೆ 7:30ಕ್ಕೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಟಾರ್ಚ್ ಲೈಟ್ ಪೆರೇಡ್ ( Torch Light Parade ) ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗಿಯಾಗಲಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!