ಉತ್ತರಖಂಡದಲ್ಲಿ ದುರಂತ – ಮದುವೆ ಮುಗಿಸಿ ವಾಪಸ್ಸಾಗುತ್ತಿದ್ದ ಬಸ್ ಕಂದಕಕ್ಕೆ ಬಿದ್ದು 25 ಮಂದಿ ಸಾವು

Team Newsnap
1 Min Read
Tragedy in Uttarakhand - 25 people died while returning from wedding ಉತ್ತರಖಂಡದಲ್ಲಿ ದುರಂತ - ಮದುವೆ ಮುಗಿಸಿ ವಾಪಸ್ಸಾಗುತ್ತಿದ್ದ ಬಸ್ ಕಂದಕಕ್ಕೆ ಬಿದ್ದು 25 ಮಂದಿ ಸಾವು

ಮದುವೆ( marriage) ಮುಗಿಸಿ ವಾಪಸ್ಸಾಗುತ್ತಿದ್ದ ಬಸ್‍ (Bus) ಕಂದಕಕ್ಕೆ ಬಿದ್ದು 25 ಮಂದಿ ಸಾವನ್ನಪ್ಪಿ, 21ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಉತ್ತರಾಖಂಡ( Uttarakhand ) ರಾಜ್ಯದ ಪೌರಿ ಗರ್ವಾಲ್‍ನಲ್ಲಿ ನಡೆದಿದೆ.

ಮಂಗಳವಾರ(Tuesday) ತಡರಾತ್ರಿ ಪೌರಿ ಗರ್ವಾಲ್‍ನಲ್ಲಿ (Pauri Garhwal) ಕಂದಕಕ್ಕೆ ಉರುಳಿ ಬಸ್‌(Bus) ಅಪಘಾತಗೊಂಡಿದೆ. ಅಪಘಾತದಲ್ಲಿ(Accident) 25 ಮಂದಿ ಮೃತಪಟ್ಟಿದ್ದು, ಈಗಾಗಲೇ 21 ಮಂದಿಯನ್ನು ರಾಜ್ಯ ವಿಪತ್ತು ನಿರ್ವಹಣಾ ತಂಡ (SDRF) ರಕ್ಷಣೆ ಮಾಡಿದೆ ಎಂದು ಪೊಲೀಸ್ (Police) ನಿರ್ದೇಶಕರಾದ ಅಶೋಕ್ ಕುಮಾರ್ ತಿಳಿಸಿದ್ದಾರೆ.ಇದನ್ನು ಓದಿ –ಮೈಸೂರು ದಸರಾ ಸಂಭ್ರಮ: ಚಾಮುಂಡಿ ಬೆಟ್ಟದಿಂದ ಹೊರಟ ಉತ್ಸವಮೂರ್ತಿ ಮೆರವಣಿಗೆ

ದುರಂತದಲ್ಲಿ ( Accident ) ಸಾವಿಗೀಡಾದವರಿಗೆ ಮುಖ್ಯಮಂತ್ರಿ ( Chief Minister ) ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಸಂತಾಪ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರ ಅವರ ಕುಟುಂಬಗಳೊಂದಿಗಿದೆ ಎಂದು ಧೈರ್ಯ ತುಂಬಿದ್ದಾರೆ.

Share This Article
Leave a comment