Karnataka

ಮೈಸೂರು ದಸರಾ 2022; ಆಗಸ್ಟ್‌ 7ಕ್ಕೆ ಗಜಪಯಣ ಆರಂಭ

ಮೈಸೂರು ದಸರಾದ ಮೊದಲ ಹಂತವಾದ ಗಜಪಯಣ ಆಗಸ್ಟ್ 7ರಂದು ಆರಂಭವಾಗಲಿದೆ.

ಮೈಸೂರು ದಸರಾ 2022ರಲ್ಲಿ ಪಾಲ್ಗೊಳ್ಳುವ ಆನೆಗಳು ನಾಗರಹೊಳೆ ಶಿಬಿರದಿಂದ ಮೈಸೂರು ಅರಮನೆಗೆ ಹೊರಡಲಿವೆ. ಈ ಮೂಲಕ ಈ ಬಾರಿಯ ದಸರಾ ಮಹೋತ್ಸವಕ್ಕೆ ಅಧಿಕೃತವಾದ ಆರಂಭ ಸಿಗಲಿದೆ.ಇದನ್ನು ಓದಿ –ನಾಗಮಂಗಲ : ಎಚ್ಚರಿಕೆ ನಿರ್ಲಕ್ಷಿಸಿದ ಚಾಲಕನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋದ ಗೂಡ್ಸ್​ ವಾಹನ


ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೊರ ವಲಯದಲ್ಲಿರುವ ನಾಗಾಪುರ ಸಣ್ಣಗ್ರಾಮದ ಸಮೀಪವೀರುವ ವೀರನಹೊಸಹಳ್ಳಿಯಲ್ಲಿ ಭಾನುವಾರ ಬೆಳಗ್ಗೆ 9.01ರಿಂದ 9.35ರ ಮಧ್ಯದ ಶುಭ ಕನ್ಯಾ ಲಗ್ನದಲ್ಲಿ ಗಜಪಡೆಗಳ ಪಯಣ ಶುರುವಾಗಲಿದೆ.

ಗಜಪಯಣಕ್ಕೆ ಚಾಲನೆ :

ಮೈಸೂರು ದಸರಾ ಆನೆಗಳಿಗೆ ಪೂಜೆ ಸಲ್ಲಿಸಿದ ಬಳಿಕ ಆನೆಗಳ ಪಯಣ ಸ್ವಲ್ಪ ದೂರದವರೆಗೆ ಮೆರವಣಿಗೆ ಮೂಲಕ ಸಾಗಲಿದೆ. ನಂತರ ವೀರನಹೊಸಹಳ್ಳಿಯಿಂದ ಮೈಸೂರಿಗೆ ಲಾರಿಗಳ ಮೂಲಕ ಆನೆಗಳನ್ನು ಕರೆತರಲಾಗುತ್ತದೆ.

ಗಜಪಯಣಕ್ಕೆ ಅರಣ್ಯ ಸಚಿವ ಉಮೇಶ ಕತ್ತಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಟಿ. ಸೋಮಶೇಖರ್‌ ಚಾಲನೆ ನೀಡಲಿದ್ದಾರೆ. ಹುಣಸೂರು ಶಾಸಕ ಎಚ್‌. ಪಿ. ಮಂಜುನಾಥ್‌ ಮತ್ತಿತರರು ಸಹ ಪಾಲ್ಗೊಳ್ಳಲಿದ್ದಾರೆ.

ಆಗಸ್ಟ್ 7ರ ಸಂಜೆ ವೇಳೆಗೆ ಆನೆಗಳು ಮೈಸೂರಿನ ಅರಣ್ಯ ಭವನಕ್ಕೆ ಆಗಮಿಸಲಿವೆ. ಎರಡು ದಿನ ವಿಶ್ರಾಂತಿ ಪಡೆಯಲಿರುವ ಆನೆಗಳು ಆಗಸ್ಟ್ 10 ರಂದು ಮೈಸೂರಿನ ಅರಮನೆ ಆವರಣಕ್ಕೆ ಆಗಮಿಸಲಿವೆ.

ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲಿರುವ 14 ಆನೆಗಳ ಪಟ್ಟಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಅಂತಿಮಗೊಳಿಸಿದ್ದಾರೆ. ಎರಡು ತಂಡಗಳಲ್ಲಿ ಆನೆಗಳು ಮೈಸೂರಿಗೆ ಆಗಮಿಸಲಿವೆ. ಮುಖ್ಯವಾಗಿ ‘ಅಭಿಮನ್ಯು’ ಹಾಗೂ ‘ಅರ್ಜುನ’ ಒಳಗೊಂಡ ಮೊದಲ ತಂಡದ ಆನೆಗಳು ಮೈಸೂರಿಗೆ ಆಗಸ್ಟ್7ಕ್ಕೆ ಆಗಮಿಸಿದರೆ ಎರಡನೇ ತಂಡದ ಆನೆಗಳು ಸೆಪ್ಟೆಂಬರ್‌ನಲ್ಲಿ ಆಗಮಿಸುವ ನಿರೀಕ್ಷೆ ಇದೆ.

ಅಕ್ಟೋಬರ್ 5ಕ್ಕೆ ವಿಜಯದಶಮಿ

ಎರಡು ವರ್ಷದ ನಂತರ ಮತ್ತೆ ಮೈಸೂರು ದಸರಾಕ್ಕೆ ತನ್ನ ಹಳೆಯ ಸೌಂದರ್ಯ, ಸೊಬಗು ವಿಜೃಂಭಣೆ ಸಿಗಲಿದೆ. ಈ ಬಾರಿ ಅದ್ಧೂರಿ ವಿಜಯದಶಮಿ, ಮೆರವಣಿಗೆ, ಪೂಜೆ, ಧಾರ್ಮಿಕ ಕೈಂಕರ್ಯ ಜರುಗಲಿವೆ.

2022 ಸೆಪ್ಟೆಂಬರ್ 26 ರಂದು ದಸಾರ ಪ್ರಾರಂಭವಾಗಲಿದೆ. ಜಂಬೂ ಸವಾರಿ ಅಕ್ಟೋಬರ್ 5 ರಂದು ವಿಜಯದಶಮಿಯಂದು ನಡೆಯಲಿದೆ. ಅಲ್ಲಿಯವರೆಗೆ ಅಂದರೆ ಸುಮಾರು ಎರಡು ತಿಂಗಳು ಆನೆಗಳಿಗೆ ತರಬೇತಿ ನೀಡಲಾಗುತ್ತದೆ.

Team Newsnap
Leave a Comment

Recent Posts

ಪೊಲೀಸ್ ಠಾಣೆ ಸಮೀಪದಲ್ಲೇ ಪತ್ನಿಯನ್ನು ಕೊಂದ ಪತಿ

ಬೆಂಗಳೂರು : ಕೋರಮಂಗಲದ ಆರನೇ ಬ್ಲಾಕ್ ನಲ್ಲಿ , ಕಿರುಕುಳದ ದೂರು ನೀಡಿದ ಪತ್ನಿಯನ್ನು ಪೊಲೀಸ್ ಠಾಣೆ ಎದುರಲ್ಲೇ ಪತಿ… Read More

May 3, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 3 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 66,250 ರೂಪಾಯಿ ದಾಖಲಾಗಿದೆ. 24… Read More

May 3, 2024

SIT ಯಿಂದ ಸಂಸದ ಪ್ರಜ್ವಲ್ ರೇವಣ್ಣಗೆ ಲುಕ್ ಔಟ್ ನೋಟಿಸ್ ಜಾರಿ

ಬೆಂ ಗಳೂರು : ಸಂಸದ ಪ್ರಜ್ವಲ್ ರೇವಣ್ಣಗೆ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.… Read More

May 2, 2024

ಪ್ರಜ್ವಲ್ ರೇವಣ್ಣನ ಮಾಜಿ ಕಾರು ಚಾಲಕ ‘ಕಾರ್ತಿಕ್’ ನಾಪತ್ತೆ

ಹಾಸನ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಕುರಿತು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದ ಮಾಜಿ… Read More

May 2, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 2 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,550 ರೂಪಾಯಿ ದಾಖಲಾಗಿದೆ. 24… Read More

May 2, 2024

ಪಿಎಚ್ಡಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಅನುಮಾನಾಸ್ಪದ ಸಾವು

ಬೆಂಗಳೂರು: ವಿದ್ಯಾರ್ಥಿಯೊಬ್ಬ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಪಿಹೆಚ್‌ಡಿ (PhD) ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪವಾಗಿ ಮೃತಪಟ್ಟಿದ್ದಾನೆ. ರಂಗನಾಥ್ ನಾಯಕ್ (27)… Read More

May 2, 2024