ನಾಗಮಂಗಲ : ಎಚ್ಚರಿಕೆ ನಿರ್ಲಕ್ಷಿಸಿದ ಚಾಲಕ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋದ ಗೂಡ್ಸ್​ ವಾಹನ

Team Newsnap
1 Min Read
Nagamangala: vehicle swept away by driver who ignored the warning

ಸತತ ಮೂರು ದಿನಗಳಿಂದ ಭಾರಿ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ನೀರಿನ ರಭಸಕ್ಕೆ ಬೊಲೆರೋ ಗೂಡ್ಸ್​ ವಾಹನವೊಂದು ಬ್ರಿಡ್ಜ್ ಮೇಲಿಂದ ಕೊಚ್ಚಿಹೋದ ಘಟನೆ ನಾಗಮಂಗಲ ತಾಲೂಕಿನ ಅಣೆಚನ್ನಾಪುರ-ಗುಳಕಾಯಿ ಹೊಸಹಳ್ಳಿ ನಡುವೆ ಸೇತುವೆ ಮೇಲೆ ನಡೆದಿದೆ.

ಪೊಲೀಸ್ ಇಲಾಖೆ ಬ್ಯಾರಿಕೇಡ್​ಗಳನ್ನು ಅಡ್ಡಲಾಗಿ ಇಟ್ಟು ಬ್ರಿಡ್ಜ್ ಮೇಲೆ ವಾಹನ ಸಂಚಾರ ನಿಷೇಧಿಸಿದೆ. ಅಲ್ಲದೆ, ಸೇತುವೆಯ ಎರಡು ಭಾಗದಲ್ಲೂ ಬಿಂಡಿಗನವಿಲೆ ಪೊಲೀಸರು ಎಚ್ಚರಿಕೆಯ ನಾಮಫಲಕವನ್ನು ಹಾಕಿದ್ದಾರೆ. ಇದನ್ನು ಓದಿ – ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿಯಾಗಿ ಸಂಭವಿಸಿದ ಭೀಕರ ಅಪಘಾತ.

ಆದರೂ ಕ್ಯಾರೆ ಎನ್ನದೆ ವಾಹನ ಚಾಲಕ ಬ್ರಿಡ್ಜ್ ಮೇಲೆ ವಾಹನ ಸಂಚರಿಸಲು ಮುಂದಾದಾಗ ನೀರಿನ ರಭಸಕ್ಕೆ ಸಿಲುಕಿ ಹಳ್ಳಕ್ಕೆ ಕೊಚ್ಚಿಕೊಂಡು ಹೋಗಿ ಬಿದ್ದಿದೆ.

ನೀರಿನ ರಭಸಕ್ಕೆ ವಾಹನ ಕೊಚ್ಚಿ ಹೋಗುತ್ತಿದ್ದಂತೆ ಚಾಲಕ ತನ್ನ ವಾಹನವನ್ನು ಬಿಟ್ಟು ಪ್ರಾಣ ಉಳಿಸಿಕೊಂಡಿದ್ದಾನೆ.

ಕಳೆದ ಒಂದು ವಾರದಿಂದ ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಈಗಾಗಲೇ 40ಕ್ಕೂ ಹೆಚ್ಚು ಮಂದಿ ಭೀಕರ ಮಳೆಗೆ ಬಲಿಯಾಗಿದ್ದಾರೆ. ಸಾಕಷ್ಟು ಆಸ್ತಿ-ಪಾಸ್ತಿ ಹಾಗೂ ಬೆಳೆ ನಷ್ಟವಾಗಿದೆ. ಮಳೆ ಹೀಗೆ ಮುಂದುವರಿದರೆ, ಮತ್ತಷ್ಟು ಹಾನಿಯುಂಟಾಗುವ ಸಾಧ್ಯತೆ ಇದೆ.

Share This Article
Leave a comment