ಫೆ 28 ರಿಂದ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಟೋಲ್ ಸಂಗ್ರಹ ಆರಂಭ

Team Newsnap
2 Min Read

ಬೆಂಗಳೂರು-ನಿಡಘಟ್ಟ ನಡುವಿನ ಶೇಷಗಿರಿಹಳ್ಳಿ ಬಳಿ ಮೈಸೂರು – ಬೆಂಗಳೂರು ದಶ ಪಥ ಹೆದ್ದಾರಿ ಟೋಲ್ ವಸೂಲಾತಿ ಫೆ 28 ರಂದು ಆರಂಭಿಸಲಾಗುವುದು.

ದಶಪಥ ಹೆದ್ದಾರಿಯ ಮೊದಲ ಹಂತದ 55.63 ಕಿ.ಮೀ ರಸ್ತೆಗೆ ಶುಲ್ಕ ಪಾವತಿ ಮಾಡಲೇ ಬೇಕು ಎಂದು
ಕೇಂದ್ರ ಹೆದ್ದಾರಿ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.ಹಾಸನದ ಟಿಕೆಟ್ ವಿವಾದ: ಜೆಡಿಎಸ್ ನಾಯಕರ ಸಭೆ ರದ್ದುಪಡಿಸಿದ ದೇವೇಗೌಡರು

ವಿವಿಧ ಮಾದರಿಯ ವಾಹನಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ. ಸರ್ವೀಸ್ ರಸ್ತೆ ಹೊರತು ಪಡಿಸಿ, ಉಳಿದ ಆರು‌ಪಥಗಳಿಗೆ ಶುಲ್ಕ ಅನ್ವಯವಾಗಲಿದೆ.

  • ಕಾರು, ಜೀಪು, ವ್ಯಾನುಗಳಿಗೆ ಏಕಮುಖ ಸಂಚಾರಕ್ಕೆ 135ರು . ಅದೇ ದಿನ ಮರು ಸಂಚಾರಕ್ಕೆ 205 ರು
  • ಸ್ಥಳೀಯ ವಾಹನಗಳಿಗೆ 70ರು ಒಂದು ತಿಂಗಳ 50ಏಕ‌ಮುಖ ಸಂಚಾರದ ಪಾಸ್ ಗೆ 4525ರು
  • ಲಘು ವಾಣಿಜ್ಯ ವಾಹನಗಳು/ಲಘು ಸರಕು ವಾಹನಗಳು/ಮಿನಿ ಬಸ್. ಏಕಮುಖ ಸಂಚಾರಕ್ಕೆ 220ರು ಅದೇ ದಿನ ಮರು ಸಂಚಾರಕ್ಕೆ 320 ರೂ.
  • ಸ್ಥಳೀಯ ವಾಹನಗಳಿಗೆ 110ರೂ, ಒಂದು ತಿಂಗಳ 50ಏಕ‌ಮುಖ ಸಂಚಾರದ ಪಾಸ್ ಗೆ 7315ರೂ. *ಬಸ್ ಅಥವಾ ಟ್ರಕ್(ಎರಡು ಆಕ್ಸೆಲ್)
  • ಏಕಮುಖ ಸಂಚಾರಕ್ಕೆ 460ರೂ.ಅದೇ ದಿನ ಮರು ಸಂಚಾರಕ್ಕೆ 690 ರು
  • ಸ್ಥಳೀಯ ವಾಹನಗಳಿಗೆ 230ರೂ, ಒಂದು ತಿಂಗಳ 50ಏಕ‌ಮುಖ ಸಂಚಾರದ ಪಾಸ್ ಗೆ 15325ರೂ.
  • ವಾಣಿಜ್ಯ ವಾಹನಗಳು (ಮೂರು ಆಲ್ಸೆಲ್) ಏಕಮುಖ ಸಂಚಾರಕ್ಕೆ 500ರೂ.

ಅದೇ ದಿನ ಮರು ಸಂಚಾರಕ್ಕೆ 750 ರೂ. ಸ್ಥಳೀಯ ವಾಹನಗಳಿಗೆ 250ರೂ, ಒಂದು ತಿಂಗಳ 50ಏಕ‌ಮುಖ ಸಂಚಾರದ ಪಾಸ್ ಗೆ 16715ರೂ.

ಭಾರಿ ನಿರ್ಮಾಣ ಯಂತ್ರ, ಭೂ ಅಗೆತ ಸಾಧನ್, ಬಹು ಆಕ್ಸೆಲ್ ವಾಹನ(6ರಿಂದ 8 ಆಕ್ಸೆಲ್)

ಏಕಮುಖ ಸಂಚಾರಕ್ಕೆ 720ರೂ. ಅದೇ ದಿನ ಮರು ಸಂಚಾರಕ್ಕೆ 1080 ರೂ. ಸ್ಥಳೀಯ ವಾಹನಗಳಿಗೆ 360ರೂ, ಒಂದು ತಿಂಗಳ 50ಏಕ‌ಮುಖ ಸಂಚಾರದ ಪಾಸ್ ಗೆ 24030ರೂ.

  • ಅತೀ ಗಾತ್ರದ ವಾಹನಗಳು (7ರಿಂದ ಹೆಚ್ಚಿನ ಆಕ್ಸೆಲ್)

ಏಕಮುಖ ಸಂಚಾರಕ್ಕೆ 880ರೂ.

ಅದೇ ದಿನ ಮರು ಸಂಚಾರಕ್ಕೆ 1315ರೂ. ಸ್ಥಳೀಯ ವಾಹನಗಳಿಗೆ 440ರೂ, ಒಂದು ತಿಂಗಳ 50ಏಕ‌ಮುಖ ಸಂಚಾರದ ಪಾಸ್ ಗೆ 29255ರು

Share This Article
Leave a comment