ಹಾಸನದ ಟಿಕೆಟ್ ವಿವಾದ: ಜೆಡಿಎಸ್ ನಾಯಕರ ಸಭೆ ರದ್ದುಪಡಿಸಿದ ದೇವೇಗೌಡರು

Team Newsnap
1 Min Read
BJP-JDS alliance decision considering the situation at that time - Deve Gowda ಅಂದಿನ ಪರಿಸ್ಥಿತಿ ನೋಡಿಕೊಂಡು ಬಿಜೆಪಿ - ಜೆಡಿಎಸ್ ಮೈತ್ರಿ ನಿರ್ಧಾರ

ಭಾರಿ ವಿವಾದ, ಕುತೂಹಲ ಮೂಡಿಸಿರುವ ಹಾಸನ ಜೆಡಿಎಸ್ ಟಿಕೆಟ್ ಗೊಂದಲಕ್ಕೆ ತೆರೆ ಎಳೆಯಲು ಬೆಂಗಳೂರಿನ ಜೆಪಿ ಭವನದಲ್ಲಿ ಇಂದು ಕರೆಯಲಾಗಿದ್ದ ಹಾಸನ ಜೆಡಿಎಸ್ ಮುಖಂಡರ ಸಭೆಯನ್ನು ವರಿಷ್ಠ ದೇವೇಗೌಡರು ಕೊನೆಯ ಕ್ಷಣದಲ್ಲಿ ರದ್ದು ಮಾಡಿದ್ದಾರೆ.

ಜೆಡಿಎಸ್ ನ ಹಾಸನ ಟಿಕೆಟ್ ಗಾಗಿ ದೇವೇಗೌಡರ ಕುಟುಂಬದಲ್ಲೇ ಭಾರಿ ಪೈಪೋಟಿ ನಡೆದಿದೆ. ಭವಾನಿ ರೇವಣ್ಣ ಟಿಕೆಟ್ ಗಾಗಿ ಕಸರತ್ತು ನಡೆಸಿದರೆ , ಮಾಜಿ ಸಿಎಂ ಕುಮಾರಸ್ವಾಮಿ ಭವಾನಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ. ಸಾಮಾನ್ಯ ಕಾರ್ಯಕರ್ತನಿಗೆ ಕೊಡುವುದಾಗಿ ಹೇಳಿಕೆ ನೀಡಿರುವುದು ಭವಾನಿ ಕನಸಿಗೆ ತಣ್ಣೀರು ಎರಚಿದ್ದಾರೆ.

ಈ ನಡುವೆ ಎಚ್ ಡಿ ರೇವಣ್ಣ , ಸ್ವರೂಪ್ ರೇವಣ್ಣ ಕೂಡ ಟಿಕೆಟ್ ಗಾಗಿ ಭಾರಿ ಲಾಭಿ ನಡೆಸಿರುವುದು ಗೌಡರ ಕುಟುಂಬಕ್ಕೆ ಬಿಸಿ ತುಪ್ಪವಾಗಿದೆ.

ನಿನ್ನೆ ದಿನ ರೇವಣ್ಣ ದೇವೇಗೌಡರನ್ನು ಭೇಟಿ ಮಾಡಿ ಹಾಸನದ ಬೆಳವಣಿಗೆ ಹಾಗೂ ವಿದ್ಯಮಾನಗಳನ್ನು ಚರ್ಚೆ ಮಾಡಿದ ನಂತರ ದೇವೇಗೌಡರು ಸಭೆ ರದ್ದು ಮಾಡಿದ್ದಾರೆ.

ನಾನೇ ಹಾಸನಕ್ಕೆ ಬಂದು ಮುಖಂಡರ ಸಭೆ ನಡೆಸುತ್ತೇನೆ. ಆತುರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ದೇವೇಗೌಡರು ರೇವಣ್ಣನಿಗೆ ಹೇಳಿದ್ದಾರೆ.

ಚಿಕ್ಕಮಂಗಳೂರಿನ ಪ್ರವಾಸದಲ್ಲಿ ಇರುವ ಮಾಜಿ ಸಿಎಂ ಕುಮಾರಸ್ವಾಮಿ ಸಭೆ ರದ್ದಾಗಿರುವ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ.

Share This Article
Leave a comment