ಮೈಸೂರು ವಿಮಾನ ನಿಲ್ದಾಣಕ್ಕೆ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು

Team Newsnap
1 Min Read

ದಿವಂಗತ ಮಹಾರಾಜ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರ ಹೆಸರನ್ನು ಮೈಸೂರು ವಿಮಾನ ನಿಲ್ದಾಣಕ್ಕೆ ಇಡಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1894 ರಿಂದ 1940 ರಲ್ಲಿ ಅವರ ಮರಣದವರೆಗೆ ಮೈಸೂರು ರಾಜ್ಯದ ಇಪ್ಪತ್ತನಾಲ್ಕನೇ ಮಹಾರಾಜರಾಗಿದ್ದರು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ‘ಮೈಸೂರು ವಿಮಾನ ನಿಲ್ದಾಣಕ್ಕೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ನಾಮಕರಣ ಮಾಡಲು ಅನುಮೋದನೆ ನೀಡುವ ರಾಜ್ಯ ಸಚಿವ ಸಂಪುಟದ ನಿರ್ಧಾರವನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.

ಮೈಸೂರಿನ ಅಭಿವೃದ್ಧಿಯ ಹರಿಕಾರರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ, ದಕ್ಷ ಆಡಳಿತ ಮತ್ತು ಸಾಮಾಜಿಕ ಕಳಕಳಿ ನಮಗೆ ಯಾವಾಗಲೂ ಸ್ಫೂರ್ತಿ ನೀಡಿದೆ ಎಂದು ಟ್ವಿಟ್ಟರ್‌ ಮೂಲಕ ತಿಳಿಸಿದ್ದಾರೆ.

Share This Article
Leave a comment