November 27, 2021

Newsnap Kannada

The World at your finger tips!

ಮೈಶುಗರ್ ಖಾಸಗಿಕರಣ ಇಲ್ಲ: ಸಕಾ೯ರಿ ಸ್ವಾಮ್ಯದಲ್ಲೇ ಆರಂಭ – ಸಿಎಂ ಬೊಮ್ಮಾಯಿ ಪ್ರಕಟ

Spread the love

ಮೈಶುಗರ್ ಸಕ್ಕರೆ ಕಾಖಾ೯ನೆಯನ್ನು ಸಕಾ೯ರಿ ಸ್ವಾಮ್ಯದಲ್ಲೇ ಆರಂಭಿಸಲು ನಿಧ೯ರಿಸಲಾಗಿದೆ.ಮೈಶುಗರ್ ಕಾಖಾ೯ನೆ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆ ಬೆಂಗಳೂರಿನಲ್ಲಿ ಮಂಡ್ಯ ಜಿಲ್ಲೆಯ ರೈತ ನಾಯಕರ ಹಾಗೂ ಜನ ಪ್ರತಿನಿಧಿಗಳ ಸಭೆಯ ನಂತರ ಸಿಎಂ ಬೊಮ್ಮಾಯಿ ಸಭೆ ಪ್ರಮುಖ ನಿಧಾ೯ರಗಳನ್ನು ಪ್ರಕಟಸಿದರು.

 • ಮೈಶುಗರ್ ಅನ್ನು ಸಕಾ೯ರಿ ಸ್ವಾಮ್ಯದಲ್ಲಿ ನಡೆಸಲಾಗುವುದು
 • ಮೈಶುಗರ್ ಖಾಸಗಿಕರಣ ಮಾಡುವುದಿಲ್ಲ
 • ಮುಂದಿನ ವಷ೯ದಿಂದ ಕಾಖಾ೯ನೆಯಲ್ಲಿ ಕಬ್ಬು ಅರೆಯುವ ಕಾರ್ಯ ಆರಂಭಿಸಲಾಗುವುದು
 • ಮುಂದಿನ ಮೂರು ತಿಂಗಳೊಳಗೆ ಕಾಖಾ೯ನೆಗೆ ದಕ್ಷ ಆಡಳಿತಾಧಿಕಾರಿ ನೇಮಕ ಮಾಡಲಾಗುವುದು
 • ಕಾಖಾ೯ನೆ ಪುನಶ್ಚೇತನಕ್ಕೆ ಅಗತ್ಯ ಹಣಕಾಸಿ ನೆರವು ನೀಡಲಾಗುವುದು
 • ಕಾಖಾ೯ನೆ ರಿಪೇರಿಗೂಅಗತ್ಯ ಹಣಕಾಸು ನೀಡಲಗುವುದು
 • ಎರಡು ವರ್ಷಗಳ ಕಾಲ ರಾಜ್ಯ ಸರ್ಕಾರವೇ ಕಾರ್ಖಾನೆಯ ನಿರ್ವಹಣೆ ಮಾಡಲಿದೆ. .
 • ನಷ್ಟದಲ್ಲಿರುವ ಈ ಕಾರ್ಖಾನೆಯನ್ನು ೨೦೨೨ರ ಹಂಗಾಮಿನಿಂದ ಎರಡು ವರ್ಷಗಳ ಕಾಲ ಸರ್ಕಾರದಿಂದಲೇ ನಿರ್ವಹಿಸಲು ನಿರ್ಧರಿಸಲಾಯಿತು.
 • ಪ್ರಸಕ್ತ ಹಂಗಾಮಿನಲ್ಲಿ ಈ ಕಾರ್ಖಾನೆ ವ್ಯಾಪ್ತಿಯ ಕಬ್ಬನ್ನು ಖರೀದಿಸಿ ಬೇರೆ ಸಕ್ಕರೆ ಕಾರ್ಖಾನೆಗಳಿಗೆ ನೀಡಲು ತೀರ್ಮಾನಿಸಲಾಯಿತು.
 • ಮುಂದಿನ ವರ್ಷ ಅಂದರೆ ೨೦೨೨ರಿಂದ ಕಬ್ಬು ಅರಿಯುವ ಕುರಿತು ಸಿದ್ಧತೆ ಕೈಗೊಳ್ಳವ ತೀರ್ಮಾನ ತೆಗೆದುಕೊಳ್ಳಲಾಗಿದೆ.
 • ರೈತರಿಗೆ ತೊಂದರೆ ಅಗಬಾರದೆಂಬ ಉದ್ದೇಶದಿಂದ ಸರ್ಕಾರ ಈ ಕ್ರಮಕ್ಕೆ ಕೈಗೊಂಡಿದೆ. ಕಾರ್ಖಾನೆ ಆರಂಭಕ್ಕೆ ತಕ್ಷಣದಿಂದ ಕಾರ್ಯೋನ್ಮುಖವಾಗುವಂತೆ ಸೂಚಿಸಲಾಗಿದೆ
 • ಕಾರ್ಖಾನೆಯ ಆಡಳಿತ ನಿರ್ವಹಣೆ, ತಾಂತ್ರಿಕ ಸುಧಾರಣೆ ಬಗ್ಗೆ ಅಧ್ಯಯನ ಮಾಡಲು ತಜ್ಞರ ಸಮಿತಿ ರಚಿಸಲಾಗುವುದು.
 • ಸಮಿತಿ ನೀಡುವ ವರದಿ ಆಧರಿಸಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತಿಸಲಾಗುವುದು

ಇಂದಿನ ಮುಖ್ಯಮಂತ್ರಿಗಳ ಸಭೆಯಲ್ಲಿ ರೈತ ನಾಯಕಿ ಸುನಂದ ಜಯರಾಂ, ಸಂಸದೆ ಸುಮಲತಾ , ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಎಂ ಶ್ರೀನಿವಾಸ್, ಕೆಟಿ ಶ್ರೀಕಂಠೇಗೌಡ ಸೇರಿದಂತೆ ಇತರರು ಪಾಲ್ಗೊಂಡಿದ್ದರು

error: Content is protected !!