February 21, 2026

Newsnap Kannada

The World at your finger tips!

muttappa

ಮುತ್ತಪ್ಪ ರೈ ಆಪ್ತ ನಾಯ್ಡು ಐಷಾರಾಮಿ ಕಾರಿ​ಗೆ ಬೆಂಕಿ ಹಚ್ಚಿದ ಮುಸುಕುಧಾರಿಗಳು

Spread the love

ಭೂಗತ ದೊರೆ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಗೆಳೆಯ ಶ್ರೀನಿವಾಸ್ ನಾಯ್ಡುಗೆ ಸೇರಿದ ರೋಲ್ಸ್ ರಾಯ್
ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಬೆಂಗಳೂರಿನ ಸದಾಶಿವ ನಗರದ 15 ಕ್ರಾಸ್ ನಲ್ಲಿ ಜರುಗಿದೆ

ರಿಯಲ್ ಎಸ್ಟೇಟ್ ಡೆವಲಪರ್ ಕಂ ಪ್ರಮೋಟರ್ ಆಗಿರುವ ಶ್ರೀನಿವಾಸ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಕಾಮನ್ ಫ್ರೆಂಡ್ ಎನ್ನಲಾಗಿದೆ.

ಮುಸುಕು ಹಾಕಿಕೊಂಡು ಬಂದಿರೋ ದುಷ್ಕರ್ಮಿಗಳು ಕಾರ್​ಗೆ ಬೆಂಕಿಹಚ್ಚಿ ಎಸ್ಕೇಪ್ ಆಗಿದ್ದಾರೆ. ಅಪರಿಚಿತ ಕಿಡಿಗೇಡಿಗಳ ಕೃತ್ಯ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ನಿಕ್ಕೀಸ್ ಪಬ್ ಬಳಿಯ ನಿವಾಸದಲ್ಲಿ ಘಟನೆ ನಡೆದಿದ್ದು ಕಾರ್ ಮಾಲೀಕ ಶ್ರೀನಿವಾಸ್ ಮುತ್ತಪ್ಪ ರೈಗೂ ಸಹ ಅತ್ಯಪ್ತರಾಗಿದ್ದರು ಎಂದು ಹೇಳಲಾಗಿದೆ.

ಕೃತ್ಯದ ಅಸಲಿ ಕಾರಣ ಏನು ಎಂಬ ಬಗ್ಗೆ ಸದಾಶಿವನಗರ ಪೊಲೀಸರಿಂದ ತನಿಖೆ ಪ್ರಾರಂಭವಾಗಿದೆ.

error: Content is protected !!