ಭಾರತದ ಹೊಸ ಐಟಿ ನಿಯಮಾವಳಿಗಳನ್ನು ಪ್ರಶ್ನಿಸುವ ಯಾವುದೇ ಅಧಿಕಾರವಿಲ್ಲ‌- ಕೇಂದ್ರ

Team Newsnap
1 Min Read

ಜಾಗತಿಕ ಮೆಸೇಜಿಂಗ್​ ವೇದಿಕೆಗಳನ್ನು ವಿದೇಶಿ ಹಾಗೂ ವಿದೇಶಿ ವಾಣಿಜ್ಯ ಸಂಸ್ಥೆ ಎಂದು ಕರೆಯುವ ಹೊಸ ಐಟಿ ನಿಯಮಗಳನ್ನು ಪ್ರಶ್ನಿಸಿ ವಾಟ್ಸಾಪ್​ ಹಾಗೂ ಫೇಸ್​ಬುಕ್​ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರ ವಿರೋಧ ಸೂಚಿಸಿ ತಳ್ಳಿ ಹಾಕಿದೆ.

ದೆಹಲಿ ಹೈಕೋರ್ಟ್​ನಲ್ಲಿ ಸಲ್ಲಿಸಲಾಗಿರುವ ಅಫಿಡವಿಟ್​ನಲ್ಲಿ ಕೇಂದ್ರ ಸರ್ಕಾರವು, ವಿದೇಶಿ ವಾಣಿಜ್ಯ ಸಂಸ್ಥೆಯಾಗಿರುವ ಫೇಸ್​ಬುಕ್​ ಹಾಗೂ ವಾಟ್ಸಾಪ್​​ಗೆ ಭಾರತದ ಸಾಂವಿಧಾನಿಕ ಕಾನೂನುಗಳನ್ನು ಪ್ರಶ್ನೆ ಮಾಡುವ ಅಧಿಕಾರವಿಲ್ಲ ಎಂದು ಹೇಳಿತ್ತು.

ಈ ಕಂಪನಿಯು ಭಾರತದಲ್ಲಿ ಯಾವುದೇ ವ್ಯಾಪಾರಿ ಸ್ಥಳವನ್ನು ಹೊಂದಿಲ್ಲ. ಕೇವಲ ವ್ಯವಹಾರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದು ಸ್ಪಷ್ಟನೆ ನೀಡಿದೆ.

ಭಾರತೀಯ ಸಂವಿಧಾನದ ಅಡಿಯಲ್ಲಿ ಇರುವ ಕಾನೂನು ನಿಬಂಧನೆಗಳನ್ನು ಪ್ರಶ್ನಿಸಲು ವಿದೇಶಿ ವಾಣಿಜ್ಯ ಸಂಸ್ಥೆಗಳಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಈ ಹಕ್ಕುಗಳು ಕೇವಲ ದೇಶದ ನಾಗರಿಕರಿಗೆ ಮಾತ್ರ ಲಭ್ಯವಿದೆ ಎಂದು ಅಫಿಡವಿಟ್​ನಲ್ಲಿ ತಿಳಿಸಲಾಗಿದೆ.

ಹೊಸ ಐಟಿ ನಿಯಮಾವಳಿಗಳನ್ನು ನ್ಯಾಯಾಲಯದ ಎದುರು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ ಇದು ಅಪರಾಧಗಳನ್ನು ತಡೆಯಲು ಕಾನೂನು ವ್ಯವಸ್ಥೆಗೆ ನೆರವಾಗಲಿದೆ ಎಂದು ಹೇಳಿದೆ.

ವಾಟ್ಸಾಪ್​ನ ಹೊಸ ನಿಯಮಾವಳಿಗಳ ವಿಚಾರವಾಗಿಯೂ ಅಫಿಡವಿಟ್​ನಲ್ಲಿ ವಿವರಣೆ ನೀಡಿರುವ ಕೇಂದ್ರ ಸರ್ಕಾರ ವಾಟ್ಸಾಪ್​ನ ಹೊಸ ನಿಯಮಾವಳಿಗಳು ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಫೇಸ್​ಬುಕ್​ಗೆ ನೀಡುತ್ತದೆ. ಈ ನಿಯಮವು ರಾಷ್ಟ್ರದ ಭದ್ರತೆ ಹಾಗೂ ಅದರ ಸಾರ್ವಭೌಮತ್ವಕ್ಕೆ ಹಾನಿ ಉಂಟು .ಅಲ್ಲದೇ ವೈಯಕ್ತಿಕ ಖಾಸಗಿತನದ ಮೇಲೂ ಇದು ಪರಿಣಾಮ ಬೀರುತ್ತದೆ ಎಂದು ಹೇಳಿದೆ.

Share This Article
Leave a comment