December 18, 2024

Newsnap Kannada

The World at your finger tips!

VOICE MIKE

ರಾಜ್ಯದ್ಯಂತ ಬೆಳಿಗ್ಗೆ 6 ಗಂಟೆಗೆ ‘ಆಜಾನ್ ಕೂಗಲು’ ಮುಸ್ಲೀಂ ಮುಖಂಡರ ನಿರ್ಧಾರ

Spread the love

ರಾಜ್ಯದಲ್ಲಿ ಆಜಾನ್ / ಸುಪ್ರಭಾತದ ಸಮರ ಕೊಂಚ ತಣ್ಣಗಾಗುವ ನಿಟ್ಟಿನಲ್ಲಿ ಮುಂದುವರೆದಿದೆ. ಬೆಳಿಗ್ಗೆ 5 ಗಂಟೆಗೆ ಕೂಗಲಾಗುತ್ತಿದ್ದಂತಹ ಆಜಾನ್ ( Azan ) ಅನ್ನು, ಇನ್ಮುಂದೆ ಬೆಳಿಗ್ಗೆ 6 ಗಂಟೆಗೆ ಕೂಗಲು ಮುಸ್ಲೀಂ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಗಿದೆ.

ಇದನ್ನು ಓದಿ – 2ನೇ ತರಗತಿ ವಿದ್ಯಾರ್ಥನಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನ ಬಂಧನ

ಇಂದು ಮುಸ್ಲೀಂ ಧರ್ಮಗುರುಗಳು, ಮೌಲ್ವಿಗಳು ಮತ್ತು ಮುಖಂಡರ ಮಹತ್ವದ ಸಭೆ ನಡೆಯಿತು. ಅಮೀರ್ ಎ ಷರಿಯತ್ ಆಗಿರುವ ಮೌಲಾನ ಸಗೀರ್ ಅಹಮದ್ ಅಧ್ಯಕ್ಷತೆಯಲ್ಲಿ ಷರಿಯತ್ ಎ ಹಿಂದ್ ಸಂಘಟನೆ ಈ ಸಭೆಯನ್ನು ಏರ್ಪಡಿಸಿತ್ತು. ಈ ಸಭೆಯಲ್ಲಿ ಬೆಳಿಗ್ಗೆ 5 ಗಂಟೆಗೆ ಕೂಗಲಾಗುತ್ತಿದ್ದಂತಹ ಆಜಾನ್ ನನ್ನು ಬೆಳಿಗ್ಗೆ 6 ಗಂಟೆಗೆ ಕೂಗಲು ಒಮ್ಮತದ ನಿರ್ಧರವನ್ನು ಕೈಗೊಳ್ಳಲಾಗಿದೆ.

ಇದನ್ನು ಓದಿ – ಪ್ರಿಯತಮನಿಗಾಗಿ ತಾಯಿಯನ್ನೇ ಯಾಮಾರಿಸಿ 1 kG ಚಿನ್ನ ಕದ್ದ ಮಗಳು – ದೀಪ್ತಿ , ಮದನ್ ಬಂಧನ

ಈ ಸಭೆಯ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಂಘಟನೆಯ ಉಮರ್ ಶರೀಫ್ ಅವರು, ಮುಸ್ಲೀಮರು ದೇಶದ ಕಾನೂನಿಗೆ ಬೆಲೆ ಕೊಡುತ್ತಿದ್ದೇವೆ. ಭಾರತದ ಕಾನೂನು ಪಾಲಿಸಲಿದ್ದೇವೆ. ನಾವು ಕಾನೂನು ಪಾಲಿಸುತ್ತಿಲ್ಲ ಎಂಬುದು ಸುಳ್ಳು. ಕಾನೂನಿಗೆ ಬೆಲೆ ಕೊಟ್ಟು ಬೆಳಗಿನ ಜಾವ 5 ಗಂಟೆಗೆ ಕೂಗಲಾಗುತ್ತಿದ್ದಂತಹ ಆಜಾನ್ ಬದಲಾಗಿ, ಬೆಳಿಗ್ಗೆ 6 ಗಂಟೆಗೆ ಧ್ವನಿ ವರ್ಧಕರ ಮೂಲಕ ಮಸೀದಿಗಳಲ್ಲಿ ಆಜಾನ್ ಕೂಗಲು ನಿರ್ಧರಿಸಲಾಗಿದೆ ಎಂದು ಹೇಳಿದರು.

Copyright © All rights reserved Newsnap | Newsever by AF themes.
error: Content is protected !!