ಮಂಡ್ಯ ಜಿಲ್ಲೆಯ ಪ್ರವೇಶಕ್ಕೆ ಋಷಿಕುಮಾರ್ , ಮುತಾಲಿಕ್ ಗೆ ಶಾಶ್ವತ ನಿರ್ಬಂಧಕ್ಕೆ ಒತ್ತಾಯ -ಪ್ರಗತಿಪರರ ಪ್ರತಿಭಟನೆ

Team Newsnap
1 Min Read

ಮಂಡ್ಯ – ಕೋಮು ಸೌಹಾರ್ದತೆಯನ್ನು ಕದಡುತ್ತಿರುವ ಮತ್ತು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿರುವ ಋಷಿಕುಮಾರ ಮತ್ತು ಪ್ರಮೋದ್ ಮುತಾಲಿಕ್ ರಂತಹ ವ್ಯಕ್ತಿಗಳು ಮಂಡ್ಯ ಜಿಲ್ಲೆಗೆ ಬಾರದಂತೆ ಶಾಶ್ವತ ನಿರ್ಬಂಧ ಹೇರಬೇಕು ಎಂದು ಒತ್ತಾಯಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಇದನ್ನು ಓದಿ – ರಾಜ್ಯಾಧ್ಯಂತ ಬೆಳಿಗ್ಗೆ 6 ಗಂಟೆಗೆ ‘ಆಜಾನ್ ಕೂಗಲು’ ಮುಸ್ಲೀಂ ಮುಖಂಡರ ನಿರ್ಧಾರ

ವಿಶ್ವೇಶ್ವರಯ್ಯನವರ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರಗತಿಪರ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

religion

ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿ ಜಗದೀಶ್ ಕೊಪ್ಪ, ಜಿಲ್ಲೆಯಲ್ಲಿ ಕೋಮುವಾದ ಸೃಷ್ಟಿ ಮಾಡಲು ಕಾಳಿ ಸ್ವಾಮಿ ಮತ್ತು ಮುತಾಲಿಕ್ ಜಿಲ್ಲೆಗೆ ಆಗಮಿಸಿದ್ದಾರೆ. ಅವರ ಆಗಮನದಿಂದ ಜಿಲ್ಲೆಯ ಶಾಂತಿ-ಸುವ್ಯವಸ್ಥೆ ಹದಗೆಡಲಿದೆ ಹೀಗಾಗಿ ಅವರಿಗೆ ಶಾಶ್ವತ ನಿರ್ಬಂಧ ವಿಧಿಸುವಂತೆ ಆಗ್ರಹಿಸಿದರು.

religion

ಇದನ್ನು ಓದಿ – ಪ್ರಿಯಕರನಿಗಾಗಿ ಮನೆಯಲ್ಲಿದ್ದ 1 ಕೆಜಿ ಚಿನ್ನ ಕದ್ದ ಯುವತಿ: ಮಗಳ ಕೃತ್ಯ ಬಯಲಿಗೆಳೆದ ತಾಯಿ

ಪ್ರತಿಭಟನೆಯಲ್ಲಿ ಹುಲ್ಕೆರೆ ಮಹದೇವು, ಗುರುಪ್ರಸಾದ್ ಕೆರಗೋಡು, ಜಿ.ಟಿ.ವೀರಪ್ಪ, ಸುನಂದಾ ಜಯರಾಂ ,ಲಕ್ಷ್ಮಣ್ ಚೀರನಹಳ್ಳಿ, ಕೃಷ್ಣೇಗೌಡ ಟಿ. ಎಲ್, ಟಿ.ಯಶವಂತ್,ಟಿಡಿ ನಾಗರಾಜ್, ಹಾಲಹಳ್ಳಿ ಮುಕುಂದಪ್ಪ, ಎಂ.ವಿ.ಕೃಷ್ಣ ಕುಬೇರ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

Share This Article
Leave a comment