ಶ್ರೀರಂಗಪಟ್ಟಣದಲ್ಲಿ ಇಯರ್ ಫೋನ್,ಬೆಳ್ಳಿ ಖಡ್ಗದ ಆಸೆಗೆ ಅಮಾಯಕನ ಕೊಲೆ – ಸೈಕೋ ರಫಿ ಬಂಧನ

Team Newsnap
1 Min Read

ಒಂದು ಇಯರ್ ಫೋನ್, 25 ಗ್ರಾಂ ಬೆಳ್ಳಿ ಖಡ್ಗದ ಆಸೆಗೆ ಶ್ರೀರಂಗಪಟ್ಟಣದಲ್ಲಿ ಎರಡು ತಿಂಗಳ ಹಿಂದೆ ನಡೆದಿದ್ದ ಗೂಡ್ಸ್ ಆಟೋ ಚಾಲಕನ ಕೊಲೆ ಪ್ರಕರಣವನ್ನು ಮಂಡ್ಯ ಪೊಲೀಸರು ಭೇದಿಸಿದ್ದಾರೆ.

ಸಣ್ಣ ಸುಳಿವು ಸಿಗದಂತೆ ಡಿಸೆಂಬರ್ 6 ರ ಮಧ್ಯರಾತ್ರಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಬಳಿ ಗೂಡ್ಸ್ ಆಟೋ ಚಾಲಕನನ್ನು ಹಂತಕ ಹತ್ಯೆ ಮಾಡಿದ್ದನು.

ಗೂಡ್ಸ್ ಆಟೋ ಚಾಲಕ ಗಜೇಂದ್ರ(25) ಕೊಲೆಯಾದ ದುರ್ದೈವಿ.
ಈತ ಹೊಸಪೇಟೆ ತಾಲೂಕಿನ ಕುಂಬಾರಹಳ್ಳಿಯ ಗ್ರಾಮದವನು.

ಹೊಸಪೇಟೆಯಿಂದ ಮೈಸೂರಿಗೆ ತರಕಾರಿಯನ್ನು ಗಜೇಂದ್ರ ಸಾಗಿಸುತ್ತಿದ್ದನು. ಅಂದು ಮೈಸೂರಿಗೆ ತೆರಳುವಾಗ ನಿದ್ದೆ ಬಂದ ಕಾರಣ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿ ಬಳಿ ಗೂಡ್ಸ್ ವಾಹನ ನಿಲ್ಲಿಸಿ ನಿದ್ದೆ ಮಾಡುತ್ತಿರುತ್ತಾನೆ.

ಈ ವೇಳೆ ಸೈಯದ್ ರಫೀಕ್ ಆಟೋ ಗಾಜು ಹೊಡೆದು ಗಂಜೇಂದ್ರನನ್ನು ಮಚ್ಚಿನಿಂದ ಕೊಚ್ಟಿ ಕೊಲೆ ಮಾಡಿದ್ದಾನೆ.

ನಂತರ ಗಜೇಂದ್ರನ ಮೈ ಮೇಲೆ ಇದ್ದ 25 ಗ್ರಾಂ ಬೆಳ್ಳಿ ಖಡ್ಗ ಹಾಗೂ 200 ರೂ. ಮೌಲ್ಯದ ಹೆಡ್ ಫೋನ್ ದೋಚಿ ಪರಾರಿಯಾಗಿದ್ದಾನೆ.

ಶೋಧನೆ ಮಾಡಿದ ಬಳಿಕ ಆತ ಸೈಯ್ಯದ್ ರಫಿ ಎಂದು ಪೊಲೀಸರಿಗೆ ತಿಳಿಯುತ್ತೆ. ಆಗ ಪೊಲೀಸರು ಸೈಯ್ಯದ್ ರಫಿ ಎಲ್ಲಿದ್ದಾನೆ ಎಂದು ಹುಡುಕುವಷ್ಟರಲ್ಲಿ ಆತ ಸರಗಳ್ಳತನ ಮಾಡಿ ರಾಮನಗರ ಜೈಲು ಸೇರಿದ್ದಾನೆ ಎಂದು ತಿಳಿಯುತ್ತದೆ. ಮಂಡ್ಯ ಪೊಲೀಸರು ರಾಮನಗರಕ್ಕೆ ತೆರಳಿ ವಿಶೇಷ ಅನುಮತಿ ಪಡೆದು ರಫಿಯನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಆತ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳುತ್ತಾನೆ.

ಕೊಲೆ ಮಾಡಿರುವ ಸೈಯ್ಯದ್ ರಫಿ ಸೈಕೋ ಆಗಿದ್ದಾನೆ, ಶ್ರೀರಂಗಪಟ್ಟಣದ ಬಳಿ ಕೊಲೆ ಮಾಡಿದ ಮರುದಿನವೇ ರಫಿ ರಾಮನಗರದಲ್ಲಿ ರಸ್ತೆಯಲ್ಲಿ ಮಚ್ಚು ಹಿಡಿದು ಓಡಾಡಿರುತ್ತಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೈಕೋ ಮನಸ್ಥಿತಿ ಹೊಂದಿದ್ದ ಸಯ್ಯದ್ ರಫಿ, ಸರಗಳ್ಳತ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

Share This Article
Leave a comment