ನಾನು ವೆಬ್ಸೀರಿಸ್ ಡೈರೆಕ್ಟರ್. ನನ್ ಆಫರ್ ಒಪ್ಕೊಂಡ್ರೆ, ನೀನೆ ನನ್ನ ವೆಬ್ಸೀರಿಸ್ ಹೀರೋಯಿನ್ ಅಂತ ಯುವತಿಗೆ ಹೇಳಿದ ಕಿಡಿಗೇಡಿಯೋರ್ವ ಬಂಧನಕ್ಕೆ ಒಳಗಾಗಿದ್ದಾನೆ.
ಈ ಘಟನೆ ಬೆಂಗಳೂರಿನ ಕೂಡ್ಲು ಗೇಟ್ ಬಳಿ ನಡೆದಿದೆ.
ಯುವತಿ ಒಪ್ಪದಿದ್ದಾಗ ಕಾರಿನಲ್ಲಿ ಯುವತಿಯನ್ನ ಪ್ರತಿ ದಿನ ಮನೀಶ್ ಎಂಬ ಯುವಕ ಫಾಲೋ ಮಾಡುತ್ತಿದ್ದ ಎನ್ನಲಾಗಿದೆ.
ನಕಲಿ ವೆಬ್ಸೀರಿಸ್ ನಿರ್ದೇಶಕನ ಕಾಟ ತಾಳಲಾರದೇ ಯುವತಿ ಪೊಲೀಸರ ಮೊರೆ ಹೋಗಿದ್ದಾಳೆ. ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಆರೋಪಿ ಮನೀಶ್ನನ್ನು ಬಂಧಿಸಿ ವಿಚಾರಣೆ ನಡೆಸಿದರು.
ಆಗ ಮನೀಶ್ ಅಸಲಿಗೆ ಇದುವರೆಗೂ ಯಾವುದೇ ವೆಬ್ಸೀರಿಸ್ ಡೈರೆಕ್ಟ್ ಮಾಡೇ ಇರಲಿಲ್ಲ ಎಂದು ತಿಳಿದು ಬಂದಿದೆ.
ಸದ್ಯಕ್ಕೆ ಡೈರೆಕ್ಟರ್ ಈಗ ಪೊಲೀಸ್ ಅತಿಥಿಯಾಗಿದ್ದಾನೆ.
More Stories
ಸಮುದ್ರದಲ್ಲಿ ಚೇಜ್ ಮಾಡಿ1,526 ಕೋಟಿ ಮೌಲ್ಯದ 218 ಕೆಜಿ ಹೆರಾಯಿನ್ ವಶ
ಧಾರವಾಡ ಬಳಿ ಭೀಕರ ರಸ್ತೆ ಅಪಘಾತ : ಮರಕ್ಕೆ ಕ್ರೂಸರ್ ಡಿಕ್ಕಿ 8 ಮಂದಿ ಸ್ಥಳದಲ್ಲೇ ಸಾವು
ಕಾರು ಸರಣಿ ಅಪಘಾತ – ಓರ್ವ ಸಾವು : ಕಿರುತೆರೆ ಸಹ ನಿರ್ದೇಶಕ ಬಂಧನ