ಇಂದು ಮುಂಬೈ-ಬೆಂಗಳೂರು ಕದನ: ಗೆದ್ದವರು ಫ್ಲೇಆಫ್ಸ್ ಗೆ – ಹೈವೋಲ್ಟೇಜ್ ಮ್ಯಾಚ್

Team Newsnap
1 Min Read
Team RCB

ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ವಿರಾಟ್‌ ಕೊಹ್ಲಿ ನಾಯಕತ್ವದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ, ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌‌ ಪ್ಲೇಆಫ್ಸ್‌ಗೆ ಅಧಿಕೃತವಾಗಿ ಅರ್ಹತೆ ಪಡೆಯಲು ಇಂದು ರಾತ್ರಿ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಲಿದೆ.

ಎರಡೂ ತಂಡಗಳು ತಮ್ಮ ಹಿಂದಿನ ಪಂದ್ಯಗಳಲ್ಲಿ ತಲಾ 8 ವಿಕೆಟ್‌ ಸೋಲಿನೊಂದಿಗೆ ಕಂಗಾಲಾಗಿವೆ. ಹೀಗಾಗಿ ತಮ್ಮ ಪಾಲಿನ ಉಳಿದ 3 ಲೀಗ್‌ ಪಂದ್ಯಗಳನ್ನು ಗೆದ್ದು, ಗೆಲುವಿನ ಅಲೆಯಲ್ಲಿ ಪ್ಲೇ ಆಫ್ಸ್‌ಗೆ ಕಾಲಿಡುವ ಲೆಕ್ಕಾಚಾರ ಹೊಂದಿವೆ. ಈ ತಂಡಗಳಿಗೆ ಇನ್ನೊಂದು ಗೆಲುವು ಸಿಕ್ಕರೂ ನಾಕ್‌ಔಟ್‌ ಹಂತದ ಅಧಿಕೃತ ಟಿಕೆಟ್‌ ಸಿಗಲಿದೆ.

ಪ್ರಸಕ್ತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್‌ನಲ್ಲಿ 11 ಪಂದ್ಯಗಳಾಡಿರುವ ಎರಡೂ ತಂಡಗಳು ತಲಾ 7 ಹಣಾಹಣಿಗಳಲ್ಲಿ ಜಯ ಗಳಿಸಿವೆ. ಆ ಮೂಲಕ ಒಟ್ಟು 14 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಎರಡು ಸ್ಥಾನಗಳನ್ನು ಅಲಂಕರಿಸಿವೆ. ಟೂರ್ನಿಯ ಮೊದಲನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಸೂಪರ್‌ ಓವರ್‌ನಲ್ಲಿ ಗೆಲುವು ಸಾಧಿಸಿತ್ತು. ಇದೀಗ ಅದೇ ವಿಶ್ವಾಸದಲ್ಲಿ ಆರ್‌ಸಿಬಿ ಕಣಕ್ಕೆ ಇಳಿಯಲಿದೆ. 

ಕಳೆದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ಕಳಪೆ ಪ್ರದರ್ಶನ ತೋರಿತ್ತು. ಹಾಗಾಗಿ, ಇಲ್ಲಿನ ವಾತಾವರಣಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ ಅಂತಿಮ 11ರಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. ಕಳೆದ ಪಂದ್ಯದಿಂದ ಹೊರಗುಳಿದಿದ್ದ ಇಸುರು ಉದಾನ ಹಾಗೂ ಶಿವಂ ದುಬೆ ಇಂದು ಪ್ಲೇಯಿಂಗ್‌ ಇಲೆವೆನ್‌ಗೆ ಸೇರಿಕೊಳ್ಳುವ ಸಾಧ್ಯತೆ ಇದೆ. 

ನಿಯಮಿತ ನಾಯಕ ರೋಹಿತ್‌ ಶರ್ಮಾ ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿರುವ ಪೋಟೊಗಳನ್ನು ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿತ್ತು. ಆದರೆ, ಗಾಯದಿಂದಾಗಿ ಅವರು ಆರ್‌ಸಿಬಿ ವಿರುದ್ಧ ಇಂದಿನ ಪಂದ್ಯದಲ್ಲಿ ಆಡಲಾಗುತ್ತಿಲ್ಲ.

TAGGED:
Share This Article
Leave a comment