ಪಂಚರಾಜ್ಯ ಚುನಾವಣೆಗೆ ಮುಹೂರ್ತ ಫಿಕ್ಸ್‌

Team Newsnap
1 Min Read

ರಾಜಸ್ಥಾನ, ಛತ್ತೀಸ್ ಗಢ, ಮಧ್ಯಪ್ರದೇಶ, ಮಿಜೋರಾಂ ಮತ್ತು ತೆಲಂಗಾಣ ವಿಧಾನಸಭೆ ಚುನಾವಣೆ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಸೋಮವಾರ ಪ್ರಕಟಿಸಿದೆ.

ಬಹು ನಿರೀಕ್ಷಿತ ಚುನಾವಣೆಗಳು ನವೆಂಬರ್ 7, 2023 ರಿಂದ ನಡೆಯಲಿದ್ದು, ಮತ ಎಣಿಕೆ ಡಿಸೆಂಬರ್ 3, 2023 ರಂದು ನಡೆಯಲಿದೆ.

  1. ಛತ್ತೀಸ್ ಗಢ
    • ಛತ್ತೀಸ್ ಗಢದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.
      ಹಂತ 1: ನವೆಂಬರ್ 7, 2023
    • ಎರಡನೇ ಹಂತ: ನವೆಂಬರ್ 17, 2023
  2. ರಾಜಸ್ಥಾನ
    • ರಾಜಸ್ಥಾನದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ ದಿನಾಂಕ: ನವೆಂಬರ್ 23, 2023
  3. ಮಧ್ಯಪ್ರದೇಶ
    • ಮಧ್ಯಪ್ರದೇಶದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ದಿನಾಂಕ: ನವೆಂಬರ್ 17, 2023
  4. ತೆಲಂಗಾಣ
    • ತೆಲಂಗಾಣದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ದಿನಾಂಕ: ನವೆಂಬರ್ 30, 2023

ಇದನ್ನು ಓದಿ –ಕಾವೇರಿ ನೀರು ಹಂಚಿಕೆ ಪರಿಹಾರ : ಕೇಂದ್ರ ಮಧ್ಯಸ್ಥಿಕೆ ಅಸಾಧ್ಯ – ಸುಮಲತಾ

  1. ಮಿಜೋರಾಂ
    • ಮಿಜೋರಾಂ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.. ದಿನಾಂಕ: ನವೆಂಬರ್ 7, 2023
Share This Article
Leave a comment