ಕಾವೇರಿ ನೀರು ಹಂಚಿಕೆ ಪರಿಹಾರ : ಕೇಂದ್ರ ಮಧ್ಯಸ್ಥಿಕೆ ಅಸಾಧ್ಯ – ಸುಮಲತಾ

Team Newsnap
2 Min Read

ಮಂಡ್ಯ : ಕಾವೇರಿ ನದಿ ನೀರಿನ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂಬ ತಮಿಳುನಾಡು ಸರ್ಕಾರದ ನಿರ್ಣಯ ಸರಿ ಅಲ್ಲ .ಏಕೆಂದರೆ ಸುಪ್ರೀಂ ಕೋರ್ಟ್ ಕೂಡ ಮಧ್ಯಪ್ರವೇಶ ಮಾಡಲ್ಲ ಎಂದಿರುವಾಗ CWMA ನಿರ್ಧಾರವೇ ಅಂತಿಮವಾಗಿದೆ.

ಸುಪ್ರೀಂ ಕೋರ್ಟ್ ಹಾಗೇ ಹೇಳಿದ ಮೇಲೆ ಇನ್ಯಾರು ಮಧ್ಯಪ್ರವೇಶ ಮಾಡಲು ಸಾಧ್ಯವೆ ಎಂದು ಸಂಸದೆ ಸುಮಲತಾ ಪ್ರಶ್ನೆ ಮಾಡಿದರು .

ಮದ್ದೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸುಮಲತಾ ತಮಿಳುನಾಡು ಮೊದಲಿನಿಂದಲೂ ಕಾವೇರಿ ನೀರಿನ ವಿಚಾರದಲ್ಲಿ ಒತ್ತಡ ಹೇರುತ್ತಿದೆ. ಕರ್ನಾಟಕ ಸರ್ಕಾರ ಇದರಲ್ಲಿ ವಿಫಲವಾಗಿದೆ.

ನಮ್ಮ ಅಧಿಕಾರಿಗಳು ಸರಿಯಾದ ವಾದ ಮಾಡುವಲ್ಲಿ ವಿಫಲರಾಗಿದ್ದಾರೆ. ಸರ್ಕಾರ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸಮಸ್ಯೆಗೆ ಪರಿಹಾರ ಹುಡುಕಬೇಕು. ನನ್ನ ಕೈಲಿ ಆಗಿಲ್ಲ ಅಂದ್ರೆ ನಿಮ್ಮ ಕಡೆ ತೋರಿಸುವುದು ಸುಲಭ. ಆದರೆ ಸಮಸ್ಯೆಗೆ ಪರಿಹಾರ ಹುಡುಕುವುದು ಮುಖ್ಯ ಎಂದರು.

ಇಡೀ ದೇಶಕ್ಕೆ ಪ್ರಧಾನಮಂತ್ರಿ. ಒಂದು ರಾಜ್ಯದ ಪರವಾಗಿ ಮಾತನಾಡಲು ಸಾಧ್ಯವಿಲ್ಲ. ಇಂಡಿಯಾ ಒಕ್ಕೂಟ ಮಾಡಿಕೊಂಡಿದ್ದಾರೆ, ಮಾತನಾಡಿ ಬಗೆಹರಿಸಬಹುದು.ಮುಖ್ಯಮಂತ್ರಿಗಳು ಒಂದು ಜಿಲ್ಲೆ ಪರ ಮಾತನಾಡಲು ಸಾಧ್ಯವಿಲ್ಲ.

ಹಾಗೇ ಪಿಎಂ ಕೂಡ ಒಂದು ರಾಜ್ಯದ ಪರ ಇರಲು ಆಗಲ್ಲ.ಪಾಕಿಸ್ತಾನ, ‌ಭಾರತ ಕುಳಿತು ಮಾತನಾಡಿಕೊಂಡಿದೆ.
ಎರಡು ರಾಜ್ಯಗಳು ಕುಳಿತು ಮಾತನಾಡಲು ಯಾಕೆ ಸಾಧ್ಯವಿಲ್ಲ.?ಯಾಕೆ ಎಂದು ಪ್ರಶ್ನೆ ಮಾಡಿದರು

ದಶಪಥ ಹೆದ್ದಾರಿಯಲ್ಲಿ ಎಂಟ್ರಿ, ಎಕ್ಸಿಟ್ ಮುಚ್ಚಿರುವ ವಿಚಾರ. ಮೊದಲೇ ತಾತ್ಕಾಲಿಕ ಎಂಟ್ರಿ, ಎಕ್ಸಿಟ್ ಎಂದು ಹೇಳಲಾಗಿತ್ತು. ಹೈವೆ ರೂಲ್ಸ್ ಪ್ರಕಾರವೇ ಮಾಡಲಾಗ್ತಿದೆ.ಎಲ್ಲಾ ಕಡೆ ಎಂಟ್ರಿ, ಎಕ್ಸಿಟ್ ಬೇಕು ಎಂದರೆ ಅದು ಸಾಧ್ಯವಾಗಲ್ಲ. ಮುಂದಿನ ದಿಶಾ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಮಾಡ್ತೀನಿ ಎಂದರು

ನಾನು ಸಧ್ಯಕ್ಕೆ ಮಾತನಾಡಲ್ಲ :

ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರ.ಬಿಜೆಪಿಯಿಂದ ನನಗೆ ಈವರೆಗೆ ಕಮ್ಯುನಿಕೇಶನ್ ಆಗಿಲ್ಲ.ಈ ಬಗ್ಗೆ ಈಗ ನಾನು ಮಾತನಾಡಲ್ಲ.ಯಾಕೆ ಈ ನಿರ್ಧಾರ ಆಯ್ತು, ಏನೆಲ್ಲಾ ಚರ್ಚೆ ಆಯ್ತು ಎಂದು ಕೇಳಬೇಕು.ಅತ್ತಿಬೆಲೆ ಅಗ್ನಿ ದುರಂತ: ಸಿಐಡಿ ತನಿಖೆಗೆ ಆದೇಶ – ಸಿಎಂ

ನಾನಗೇ ನಾನು ಕೇಳಲ್ಲ ಅವರಿಂದ ಕರೆ ಬರಬೇಕು.ಈಗ ನಾನು ನನ್ನ ನಿರ್ಧಾರ ತಿಳಿಸಲ್ಲ.ರಾಜಕಾರಣ, ಚುನಾವಣೆ ಬಗ್ಗೆ ಹೆಚ್ಚಾಗಿ ಮಾತನಾಡಲ್ಲ. ಸಮಯ ಬಂದಾಗ ಎಲ್ಲಾ ಮಾತನಾಡ್ತೀನಿ.

Share This Article
Leave a comment